ಚಾಮರಾಜನಗರ: ಕೊರೊನಾ ವೈರಸ್ ಬಗ್ಗೆ ಅರಿವು ಮೂಡಿಸಲು ಹೋದ ಶಿಕ್ಷಕರಿಗೆ ಶಾಕ್ ಎದುರಾಗಿದ್ದು, ವೈರಸ್ ಬಗ್ಗೆ ಅರಿವು ಮೂಡಿಸುತ್ತಿರುವಾಗಲೇ ಶಾಲಾ ಮಕ್ಕಳು ವಾಂತಿ, ಭೇದಿ, ತಲೆನೋವೆಂದು ನಾಟಕವಾಡಿದ್ದಾರೆ. ಹನೂರು ತಾಲೂಕಿನ ಮಹದೇಶ್ವರ ಬೆಟ್ಟದ ಗೊರಸಾಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದೆ.
ಶಾಲೆಗೆ ರಜೆ ಸಿಗುತ್ತೆಂದು ಮೊದಲು ಇಬ್ಬರು ವಿದ್ಯಾರ್ಥಿಗಳು ನಾಟಕವಾಡಿದ್ದರು. ಅವರನ್ನು ನೋಡಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾಂತಿ, ಭೇದಿ, ತಲೆನೋವು ಎಂದಿದ್ದಾರೆ. ನಂತರ ಮಹದೇಶ್ವರ ಬೆಟ್ಟ ಪ್ರಾ.ಥಮಿಕ ಆರೋಗ್ಯ ಕೇಂದ್ರದಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡಿ ವಿದ್ಯಾರ್ಥಿಗಳ ರಕ್ತದ ಮಾದರಿಯನ್ನು ಪರೀಕ್ಷಿಸಿದ್ದಾರೆ. ನಂತರ ಶಾಲೆಯಲ್ಲೇ ಊಟ ಮಾಡಿ ಆಹಾರವನ್ನೂ ಶಿಕ್ಷಕರು ಪರೀಕ್ಷಿಸಿದ್ದಾರೆ. ರಕ್ತ ಮಾದರಿಯಲ್ಲೂ ಯಾವುದೇ ತೊಂದರೆ ಇಲ್ಲವೆಂದು ವೈದ್ಯರು ದೃಢೀಕರಿಸಿದರು. ಕೊರೊನಾ ಬಗ್ಗೆ ಅರಿವು ಮೂಡಿಸಲು ಹೋಗಿ ಮಕ್ಕಳಿಗೆ ಆಟ, ಶಿಕ್ಷಕರಿಗೆ ಪ್ರಾಣ ಸಂಕಟ ಎಂಬಂತಾಗಿದೆ.