NO ಬ್ಯಾಂಕ್ ಆದ Yes Bank: ಫೋನ್ ಪೇ ಗ್ರಾಹಕರು ಕಂಗಾಲು!
ಮುಂಬೈ: ದೇಶದ ಪ್ರಮುಖ ಖಾಸಗಿ ವಾಣಿಜ್ಯ ಬ್ಯಾಂಕ್ ಆದ ಯಸ್ ಬ್ಯಾಂಕ್ ಸೇವೆಗಳಿಗೆ ಆರ್ಬಿಐ ನಿರ್ಬಂಧ ಹೇರಿ ಬಹುತೇಕ ಸೇವೆಗಳನ್ನು ಸ್ಥಗಿತಗೊಳಿಸಿದೆ. ಇದರಿಂದ ಯಸ್ ಬ್ಯಾಂಕ್ ಜೊತೆಗೆ ವ್ಯವಹಾರ ನಡೆಸುತ್ತಿರುವ ಪ್ರಮುಖ ಕಂಪನಿಗಳಿಗೆ ಭಾರಿ ಹೊಡೆತ ಬಿದ್ದಿದೆ. 50 ಸಾವಿರ ರೂ. ಮಾತ್ರವೇ ಟ್ರಾನ್ಸಾಕ್ಷನ್ ನಡೆಸಬೇಕು ಎಂಬ ಕಟ್ಟಾಜ್ಞೆಯನ್ನು ಆರ್ಬಿಐ ಜಾರಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರಮುಖ ಆನ್ಲೈನ್ ಸೇವೆಗಳನ್ನು ಒದಗಿಸುತ್ತಿದ್ದ ಫೋನ್ ಪೇ ಕಂಪನಿಗೆ ಭಾರಿ ಹೊಡೆತ ಬಿದ್ದಿದೆ. ಎಷ್ಟರಮಟ್ಟಿಗೆ ಅಂದರೆ ಫೋನ್ ಪೇ […]
ಮುಂಬೈ: ದೇಶದ ಪ್ರಮುಖ ಖಾಸಗಿ ವಾಣಿಜ್ಯ ಬ್ಯಾಂಕ್ ಆದ ಯಸ್ ಬ್ಯಾಂಕ್ ಸೇವೆಗಳಿಗೆ ಆರ್ಬಿಐ ನಿರ್ಬಂಧ ಹೇರಿ ಬಹುತೇಕ ಸೇವೆಗಳನ್ನು ಸ್ಥಗಿತಗೊಳಿಸಿದೆ. ಇದರಿಂದ ಯಸ್ ಬ್ಯಾಂಕ್ ಜೊತೆಗೆ ವ್ಯವಹಾರ ನಡೆಸುತ್ತಿರುವ ಪ್ರಮುಖ ಕಂಪನಿಗಳಿಗೆ ಭಾರಿ ಹೊಡೆತ ಬಿದ್ದಿದೆ. 50 ಸಾವಿರ ರೂ. ಮಾತ್ರವೇ ಟ್ರಾನ್ಸಾಕ್ಷನ್ ನಡೆಸಬೇಕು ಎಂಬ ಕಟ್ಟಾಜ್ಞೆಯನ್ನು ಆರ್ಬಿಐ ಜಾರಿಗೊಳಿಸಿದೆ.
ಈ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರಮುಖ ಆನ್ಲೈನ್ ಸೇವೆಗಳನ್ನು ಒದಗಿಸುತ್ತಿದ್ದ ಫೋನ್ ಪೇ ಕಂಪನಿಗೆ ಭಾರಿ ಹೊಡೆತ ಬಿದ್ದಿದೆ. ಎಷ್ಟರಮಟ್ಟಿಗೆ ಅಂದರೆ ಫೋನ್ ಪೇ ವ್ಯವಹಾರಗಳೇ ಸ್ಥಗಿತಗೊಂಡು ಬಿಟ್ಟಿವೆ. ಇದರಿಂದ ಅನಾಯಾಸವಾಗಿ ಹಣಕಾಸು ಟ್ರಾನ್ಸಾಕ್ಷನ್ ಮಾಡುತ್ತಿದ್ದ ಫೋನ್ ಪೇ ಗ್ರಾಹಕರು ಕಂಗಾಲಾಗಿದ್ದಾರೆ.
ಯಸ್ ಬ್ಯಾಂಕ್ ವ್ಯವಹಾರಗಳಿಗೆ RBI ನಿರ್ಬಂಧ: ಏನಾಗಿದೆಯೆಂದರೆ ಯಸ್ ಬ್ಯಾಂಕ್ ವ್ಯವಹಾರಗಳಿಗೆ ಆರ್ಬಿಐ ನಿರ್ಬಂಧ ಹೇರಿದೆ. ಏಕೆಂದರೆ ಯಸ್ ಬ್ಯಾಂಕ್ ಮಾರುಕಟ್ಟೆ ಮೌಲ್ಯ ಸುಮಾರು 9ಸಾವಿರ ಕೋಟಿ ರೂ. ಇದ್ದು, ಅದರ NPA ಅಂದ್ರೆ ಸಾಲದ ಮೊತ್ತವೇ 10 ಸಾವಿರ ಕೋಟಿಗಿಂತ ಅಧಿಕವಾಗಿದೆ. ಇದನ್ನು ಮನಗಂಡ ಆರ್ಬಿಐ ತಕ್ಷಣವೇ ಎಚ್ಚೆತ್ತು ಯಸ್ ಬ್ಯಾಂಕ್ ವ್ಯವಹಾರಗಳಿಗೆ ಬೀಗ ಜಡಿದಿದೆ. ಈ ಮಧ್ಯೆ, ಯಸ್ ಬ್ಯಾಂಕ್ ಷೇರುಗಳು ಸಹ ಶೇ.59ರಷ್ಟು ಕುಸಿದಿದೆ. ಇತ್ತೀಚಿನ ದಿನಗಳಲ್ಲಿ ಖಾಸಗಿ ಬ್ಯಾಂಕೊಂದು ಈ ಪ್ರಮಾಣದಲ್ಲಿ ಪಲ್ಟಿ ಹೊಡೆದಿರುವುದು ಇದೇ ಮೊದಲು.
No Yes Bank.
Modi and his ideas have destroyed India’s economy.
— Rahul Gandhi (@RahulGandhi) March 6, 2020
Published On - 11:40 am, Fri, 6 March 20