
ಬಾಗಲಕೋಟೆ: ಮುಧೋಳದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸುತ್ತಿದ್ದವರ ಮೇಲೆ ಲಾಠಿಚಾರ್ಜ್ ನಡೆಸಿದ್ದ ಪೊಲೀಸ್ ಪೇದೆಯಿಂದ ಐವರಿಗೆ ಕೊರೊನಾ ಸೋಂಕು ತಗುಲಿದೆ. ಪೇದೆಯ ಪ್ರಾಥಮಿಕ, ದ್ವಿತೀಯ ಸಂಪರ್ಕದಿಂದ ಕೊರೊನಾ ಜಾಲ ಬೆಳೆಯುತ್ತಲೇ ಸಾಗುತ್ತಿದೆ.
ಸೋಂಕಿತ ಪೇದೆ 263ರಿಂದ ಒಟ್ಟು ಐವರಿಗೆ ಕೊರೊನಾ ಸೋಂಕು ತಗುಲಿದೆ. ಮೂವರು ಪೇದೆಗಳು, ಓರ್ವ SBI ಎಟಿಎಂ ಸೆಕ್ಯುರಿಟಿ ಗಾರ್ಡ್, ಓರ್ವ ಬಾಲಕನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವರಿಗೆ ಸೋಂಕು ತಗುಲಲು ಪೇದೆಯ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕವೇ ಕಾರಣವಾಗಿದೆ. ಹಾಗಾಗಿ ಮುಧೋಳ ಮತ್ತು ಜಮಖಂಡಿ ನಗರದ ಜನತೆಗೆ ಆತಂಕ ಹೆಚ್ಚಾಗಿದೆ.
ಪೇದೆ ಜೊತೆ ಸಂಪರ್ಕದಲ್ಲಿದ್ದ ಒಟ್ಟು 25 ಜನರ ಗಂಟಲು ಮಾದರಿ ಪರೀಕ್ಷೆಗೆ ರವಾನಿಸಲಾಗಿದೆ. ಪೇದೆಗೆ ಸಂಬಂಧಿಸಿದಂತೆ ಮುಧೋಳ, ಜಮಖಂಡಿ ವ್ಯಾಪ್ತಿಯಲ್ಲಿ ಕೊರೊನಾ ಪತ್ತೆ ಹಚ್ಚಲು ಆರೋಗ್ಯ ಇಲಾಖೆಯಿಂದ 9 ಸಾವಿರ ಜನರ ಸರ್ವೆ ಕಾರ್ಯ ಮುಂದುವರೆದಿದೆ.
Published On - 9:03 am, Sat, 25 April 20