ಲಾಕ್​ಡೌನ್​ ನಿಯಮ ಮತ್ತಷ್ಟು ಸಡಿಲಿಕೆ, ರಾಜ್ಯದಲ್ಲಿ ಏನಿರುತ್ತೆ? ಏನೇನ್ ಇರಲ್ಲ?

ಲಾಕ್​ಡೌನ್​ ನಿಯಮ ಮತ್ತಷ್ಟು ಸಡಿಲಿಕೆ, ರಾಜ್ಯದಲ್ಲಿ ಏನಿರುತ್ತೆ? ಏನೇನ್ ಇರಲ್ಲ?

ಬೆಂಗಳೂರು: ಲಾಕ್​ಡೌನ್ ಲಾಕ್​ಡೌನ್.. ಹೆಜ್ಜೆ ಇಡೋಕು ರೂಲ್ಸ್.. ಕಂಡ ಕಂಡಲ್ಲಿ ಪೊಲೀಸ್.. ಯಾರೊಬ್ರೂ ಹೊರಗೆ ಪಾದ ಊರೋಕೂ ಆಗಂದತ ಖಡಕ್ ನಿಯಮ. ಅಯ್ಯೋ, ಈ ದಿಗ್ಬಂಧನದಿಂದ ಮುಕ್ತಿ ಯಾವಾಗ, ಲಾಕ್​ಡೌನ್​ ಅನ್ನೋ ಲಾಕ್​ನಿಂದ ಬಿಡುಗಡೆ ಯಾವಾಗ ಅಂತ ಎಲ್ರೂ ಚಿಂತೇಗೀಡಾಗಿದ್ದಾರೆ. ಲಾಕ್​​ಡೌನ್​ನಿಂದ ಕಳೆದೊಂದು ತಿಂಗಳಿನಿಂದ ಬ್ರೇಕ್ ಬಿದ್ದಿದ್ದ ಆರ್ಥಿಕ ಚಕ್ರಕ್ಕೆ ಮತ್ತಷ್ಟು ರಿಲೀಫ್​ ಸಿಕ್ಕಿದೆ. ಕೇಂದ್ರ ಸರ್ಕಾರ ಲಾಕ್​ಡೌನ್ ನಿಯಮವನ್ನ ಮತ್ತಷ್ಟು ಸಡಿಲಿಕೆ ಮಾಡಿದೆ.

ರಾಜ್ಯದಲ್ಲಿ ಮತ್ತೆ ಸಿಗಲಿದೆ ಲಾಕ್‌ಡೌನ್‌ನಿಂದ ವಿನಾಯಿತಿ..!  ಯೆಸ್.. ಕೊರೊನಾ ಒದ್ದೋಡಿಸೋಕೆ ದೇಶವೇ ಲಾಕ್​​ಡೌನ್​ ದಿಗ್ಬಂಧನ ಹಾಕಿತ್ತು. ಆದ್ರೀಗ ನಿಂತಲ್ಲೇ ನಿಂತಿದ್ದ ಆರ್ಥಿಕತೆ ರೈಲನ್ನ ಮತ್ತೆ ಹಳಿಗೆ ತರೋಕೆ ಕೇಂದ್ರ ಪ್ಲ್ಯಾನ್ ಮಾಡಿದೆ. ಕೇಂದ್ರದ ಮಾರ್ಗಸೂಚಿಯಂತೆ ಕೃಷಿ, ಮೀನುಗಾರಿಕೆ, ಹೈನುಗಾರಿಕೆ, ಗ್ರಾಮಿಣ ಭಾಗದಲ್ಲಿ ರಸ್ತೆ ನಿರ್ಮಾಣಕ್ಕೆ ರಿಲೀಫ್ ನೀಡಿದ್ದ ರಾಜ್ಯ ಸರ್ಕಾರ ಇದೀಗ ಲಾಕ್​ಡೌನ್​ ರೂಲ್ಸ್ ಮತ್ತಷ್ಟು ಸಡಿಲಿಸಲಿದೆ. ಕೇಂದ್ರದ ಆದೇಶದಂತೆ ರಾಜ್ಯದಲ್ಲಿ ಲಾಕ್​​ಡೌನ್ ನಿಯಮದಲ್ಲಿ ಹಲವು ಚೇಂಜಸ್ ಆಗೋದು ಪಕ್ಕಾ ಆಗಿದೆ. ಜನ ಜೀವನ ಮತ್ತೆ ಸಹಜಸ್ಥಿತಿಯತ್ತ ಮರಳೋ ಮುನ್ಸೂಚನೆ ಸಿಕ್ಕಿದೆ. ಹಾಗಿದ್ರೆ, ಕೇಂದ್ರ ಗೃಹ ಇಲಾಖೆ ಯಾವ್ಯಾವ ಕ್ಷೇತ್ರಕ್ಕೆ ರಿಲೀಫ್ ನೀಡಿದೆ ಅನ್ನೋದನ್ನ ತೋರಿಸ್ತೀವಿ ನೋಡಿ.

‘ಲಾಕ್​​​’ ಮತ್ತಷ್ಟು ಓಪನ್: ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿ ಅಂಗಡಿ ತೆರೆಯಬಹುದಾಗಿದೆ. ಮಾಲ್‌ಗಳಲ್ಲಿ ಯಾವುದೇ ಅಂಗಡಿ ತೆರಯುವಂತಿಲ್ಲ. ಇದನ್ನ ಹೊರತುಪಡಿಸಿ ಉಳಿದ ಅಂಗಡಿಗಳನ್ನು ಓಪನ್ ಮಾಡಲು ಅವಕಾಶ ನೀಡಲಾಗಿದೆ. ಅಂದ್ರೆ, ವಸತಿ ಸಂಕೀರ್ಣ, ಮಾರುಕಟ್ಟೆ ಸಂಕೀರ್ಣದಲ್ಲಿನ ಅಂಗಡಿ ತೆರೆಯಬೋದು. ಅದ್ರಲ್ಲೂ ಹಲವು ಕಟ್ಟುನಿಟ್ಟಿನ ರೂಲ್ಸ್ ಮಾಡಲಾಗಿದ್ದು, ಅಂಗಡಿಗಳಲ್ಲಿ ಶೇಕಡ 50ರಷ್ಟು ಜನರು ಮಾತ್ರ ಹೊಂದಿರಬೇಕು ಅಂತ ಖಡಕ್ ವಾರ್ನಿಂಗ್ ಮಾಡಲಾಗಿದೆ.

ಹಾಟ್‌ಸ್ಪಾಟ್‌, ಕಂಟೇನ್ಮೆಂಟ್ ಪ್ರದೇಶಗಳಿಗಿಲ್ಲ ರಿಲೀಫ್..! ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಹಾಟ್​ಸ್ಪಾಟ್​, ಕಂಟೇನ್ಮೆಂಟ್​ ಅಲ್ಲದ ಪ್ರದೇಶಗಳಿಗೆ ಮಾತ್ರ ಅನ್ವಯವಾಗುತ್ತೆ ಅನ್ನೋದನ್ನ ಕೂಡ ಕೇಂದ್ರ ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಇಷ್ಟೇ ಅಲ್ಲ, ಕೇಂದ್ರದ ಈ ವಿನಾಯಿತಿ ಜೊತೆಗೆ ಸಾಮಾಜಿಕ ಅಂತರ, ಮಾಸ್ಕ್‌ ಧರಿಸೋದು ಕಡ್ಡಾಯವಾಗಿದೆ.

https://www.facebook.com/Tv9Kannada/videos/2567471323568816/

Published On - 7:08 am, Sat, 25 April 20

Click on your DTH Provider to Add TV9 Kannada