ಬಿಹಾರಿ ಭೂತ: ಬೆಂಗಳೂರಿಗರೇ ಇದು ಅಂತಿಂಥಾ ಸ್ಟೋರಿ ಅಲ್ಲ, ರಣಭಯಂಕರ!

|

Updated on: Apr 22, 2020 | 8:28 PM

ಬೆಂಗಳೂರು: ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗಿರಲಿಲ್ಲ. ಆದ್ರೆ ಇಂದು ಬಿಹಾರ ಮೂಲದ ವ್ಯಕ್ತಿಗೆ ಸೋಂಕು ಹರಡಿದೆ. ಸೋಂಕಿತ 419ಕ್ಕೆ ವೈರಸ್ ಹರಡಿರುವ ಬಗ್ಗೆ ಮತ್ತೆ ಟೆನ್ಶನ್ ಶುರುವಾಗಿದೆ. ಬೊಮ್ಮನಹಳ್ಳಿಯ ಸ್ಲಂವೊದರಲ್ಲಿ ಸುಮಾರು 150ಕ್ಕೂ ಹೆಚ್ಚು ಮಂದಿ ಬಿಹಾರಿಗಳಿದ್ರು. ಆ ಪೈಕಿ ಸೋಂಕಿತ ಕಳೆದೆರೆಡು ತಿಂಗಳಿನಿಂದ ಕೆಲಸ ಮಾಡ್ತಿದ್ದ. ಈ ಪೈಕಿ 54 ವರ್ಷದ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡಿದೆ. ಈಗಾಗಲೇ 68 ಮಂದಿಯನ್ನು ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನ ಗುರುತಿಸಿ ಸಿವಿ ರಾಮನ್ ನಗರದ ಆಸ್ಪತ್ರೆಯಲ್ಲಿ […]

ಬಿಹಾರಿ ಭೂತ: ಬೆಂಗಳೂರಿಗರೇ ಇದು ಅಂತಿಂಥಾ ಸ್ಟೋರಿ ಅಲ್ಲ, ರಣಭಯಂಕರ!
Follow us on

ಬೆಂಗಳೂರು: ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗಿರಲಿಲ್ಲ. ಆದ್ರೆ ಇಂದು ಬಿಹಾರ ಮೂಲದ ವ್ಯಕ್ತಿಗೆ ಸೋಂಕು ಹರಡಿದೆ. ಸೋಂಕಿತ 419ಕ್ಕೆ ವೈರಸ್ ಹರಡಿರುವ ಬಗ್ಗೆ ಮತ್ತೆ ಟೆನ್ಶನ್ ಶುರುವಾಗಿದೆ.

ಬೊಮ್ಮನಹಳ್ಳಿಯ ಸ್ಲಂವೊದರಲ್ಲಿ ಸುಮಾರು 150ಕ್ಕೂ ಹೆಚ್ಚು ಮಂದಿ ಬಿಹಾರಿಗಳಿದ್ರು. ಆ ಪೈಕಿ ಸೋಂಕಿತ ಕಳೆದೆರೆಡು ತಿಂಗಳಿನಿಂದ ಕೆಲಸ ಮಾಡ್ತಿದ್ದ. ಈ ಪೈಕಿ 54 ವರ್ಷದ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡಿದೆ. ಈಗಾಗಲೇ 68 ಮಂದಿಯನ್ನು ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನ ಗುರುತಿಸಿ ಸಿವಿ ರಾಮನ್ ನಗರದ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.

ಉಳಿದಂತೆ ಸುಮಾರು 200ಕ್ಕೂ ಹೆಚ್ಚು ದ್ವಿತೀಯ ಸಂಪರ್ಕದಲ್ಲಿರುವವರ ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ. ಸದ್ಯ ಕ್ಕೆ ಬೇರೆ ಯಾರಿಗೂ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಈ ವ್ಯಕ್ತಿಗೆ ಕುಟುಂಬಸ್ಥರಿಲ್ಲ, ತಮ್ಮ ಊರಿನವರ ಜೊತೆ ವಾಸಿಸುತ್ತಿದ್ದರು ಎನ್ನಲಾಗ್ತಿದೆ. ತೀವ್ರ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ರು. ಇದೀಗ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

Published On - 5:43 pm, Wed, 22 April 20