ಅಕ್ಷಯ ತೃತೀಯಕ್ಕೆ ಚಿನ್ನದ ಅಂಗಡಿ ಓಪನ್ ಇರುತ್ತಾ? ಗೋಲ್ಡ್ ರೇಟ್ ಹೇಗಿದೆ?

ಅಕ್ಷಯ ತೃತೀಯಕ್ಕೆ ಚಿನ್ನದ ಅಂಗಡಿ ಓಪನ್ ಇರುತ್ತಾ? ಗೋಲ್ಡ್ ರೇಟ್ ಹೇಗಿದೆ?
ಸಾಂದರ್ಭಿಕ ಚಿತ್ರ

ಬೆಂಗಳೂರು: ಅಕ್ಷಯ ತೃತೀಯದಂದು ಸಾಮಾನ್ಯವಾಗಿ ಎಲ್ರೂ ಆಭರಣ ಖರೀದಿ ಮಾಡುತ್ತಾರೆ. ಆದ್ರೆ ಈ ಬಾರಿ ಲಾಕ್​ಡೌನ್​ ಇರುವ ಹಿನ್ನೆಲೆಯಲ್ಲಿ ಎಲ್ಲಾ ಚಿನ್ನದ ಮಳಿಗೆಗಳು ಕ್ಲೋಸ್ ಆಗಲಿವೆ. ಆದ್ರೆ ಆನ್​ಲೈನ್ ಮೂಲಕ ಆಭರಣಗಳನ್ನು ಬುಕ್ಕಿಂಗ್ ಮಾಡಬಹುದಾಗಿದೆ. ಈಗ ಆನ್​ಲೈನ್​ನಲ್ಲಿ ಬುಕ್ಕಿಂಗ್ ಮಾಡಿದ್ರೂ ಲಾಕ್ ಡೌನ್ ಮುಗಿದ ಬಳಿಕವಷ್ಟೇ ಚಿನ್ನ ಮನೆ ಬಾಗಿಲಿಗೆ ಬರಲಿದೆ. ಹಾಗಾಗಿ ಲಾಕ್​ಡೌನ್ ಮುಗಿಯೋವರೆಗೂ ಚಿನ್ನದ ಆಸೆ ಮರೆಯೋದೆ ಲೇಸು.

ಏ.26 ಅಕ್ಷಯ ತೃತೀಯ ಮಳಿಗೆ ಓಪನ್ ಇಲ್ಲ, ಆನ್​ಲೈನ್ ಮೂಲಕ ಬುಕ್​​ ಮಾಡಿ: ಏ.26ರಂದು ಅಕ್ಷಯ ತೃತೀಯದಂದು ಚಿನ್ನದ ಮಳಿಗೆ ಓಪನ್ ಇರಲ್ಲ. ಆನ್​ಲೈನ್ ಮೂಲಕ ಆಭರಣ‌ ಬುಕ್​​ ಮಾಡಬಹುದು. ಲಾಕ್​ಡೌನ್ ಬಳಿಕ ಚಿನ್ನ ನಿಮ್ಮ ‌ಮನೆ ಬಾಗಿಲಿಗೇ ಬರುತ್ತೆ ಎಂದು ಕರ್ನಾಟಕ ಜ್ಯುವೆಲರಿ ಅಸೋಸಿಯೇಷನ್ ಅಧ್ಯಕ್ಷ ಟಿ‌.ಶರವಣ ಮಾಹಿತಿ ನೀಡಿದ್ದಾರೆ. ಒಂದು ವೇಳೆ ಅಕ್ಷಯ ತೃತೀಯದಂದು ಯಾರಾದ್ರೂ ಚಿನ್ನದ ಮಳಿಗೆ ಓಪನ್ ಮಾಡಿದ್ರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತೆ ಎಂದು ಇದೇ ವೇಳೆ ಎಚ್ಚರಿಕೆ ಕೊಟ್ಟಿದ್ದಾರೆ.

ಲಾಕ್​ಡೌನ್ ನಡುವೆಯೂ ಚಿನ್ನ ದುಬಾರಿ: ಅಕ್ಷಯ ತೃತೀಯದಂದು ಬೆಂಗಳೂರಿನಲ್ಲಿ ಪ್ರತಿ ವರ್ಷ ಬರೋಬ್ಬರಿ 100 ಕೆಜಿ ಹಳದಿ ಲೋಹ ಸೇಲಾಗುತ್ತಿತ್ತು. ಆದ್ರೆ ಈ ಬಾರಿ‌ 10 ಕೆಜಿ ಸೇಲಾಗೋದು ಸಹ ಡೌಟಾಗಿದೆ. ಲಾಕ್​ಡೌನ್ ನಡುವೆಯೂ ಚಿನ್ನದ ಬೆಲೆ ದುಬಾರಿಯಾಗಿದ್ದು, 1 ಗ್ರಾಂನ 24 ಕ್ಯಾರೆಟ್ ಗೋಲ್ಡ್ ರೇಟ್ 4,800 ರೂಪಾಯಿ ಇದೆ.

Published On - 4:22 pm, Wed, 22 April 20

Click on your DTH Provider to Add TV9 Kannada