ಬೆಂಗಳೂರು: ಕೊರೊನಾ ಹಾಟ್ ಸ್ಪಾಟ್ ಎನಿಸಿರುವ ಬೆಂಗಳೂರಿನ ಪಾದರಾಯನಪುರದಲ್ಲಿ ಮತ್ತೆ ಪುಂಡಾಟ ನಡೆದಿದೆ. ಪಾದರಾಯನಪುರದಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು, ಲಾಂಗು ಮತ್ತು ಮಚ್ಚು ಹಿಡಿದು ಹಲ್ಲೆಗೆ ಯತ್ನಿಸಿದ್ದಾರೆ.
ಪಾದರಾಯನಪುರದ ಕಿಡಿಗೇಡಿಗಳು ಕಳ್ಳದಾರಿ ಮೂಲಕ ಅಕ್ಕಪಕ್ಕದ ವಾರ್ಡ್ಗೆ ಬರ್ತಿರುವ ಹಿನ್ನೆಲೆ, ಕಳ್ಳದಾರಿಯ ಮೂಲಕ ಬರಬೇಡಿ ಎಂದಿದ್ದಕ್ಕೆ ಕಲ್ಲು ತೂರಾಟ ನಡೆಸಿದ್ದಾರೆ. ಮನವಿ ಮಾಡಿದವರ ಮೇಲೆ ಲಾಂಗು ಮಚ್ಚು ಹಿಡಿದು ಹಲ್ಲೆಗೆ ಯತ್ನಿಸಿದ್ದಾರೆ.
ಕಿಡಿಗೇಡಿಗಳ ಕಲ್ಲುತೂರಾಟದಲ್ಲಿ ಒಂದು ಓಮ್ನಿ ಕಾರು ಜಖಂ ಅಗಿದೆ. ಕಳ್ಳ ದಾರಿ ಮೂಲಕ ಬದರಂತೆ ಹೇಳಿದ್ದಾಗ ನಮ್ಮ ಮೇಲೆ ಲಾಂಗ್ ಮಚ್ಚಿನಿಂದ ಅಟ್ಯಾಕ್ ಮಾಡಲು ಬಂದ್ರು. ಸ್ವಲ್ಪದರಲ್ಲೇ ಮಿಸ್ ಆಗಿದ್ದೇವೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಕಳ್ಳ ದಾರಿ ಮುಚ್ಚಲು ಹೋದವರ ಮೇಲೂ ಅಟ್ಯಾಕ್ ನಡೆದಿದೆ.