ಮುಗಿದಿಲ್ಲ ವಲಸೆ ಕಾರ್ಮಿಕರ ದುರಂತಗಳ ಸರಮಾಲೆ: ಬಸ್ ಹರಿದು 6 ಮಂದಿ ಸಾವು
ಲಕ್ನೋ: ಲಾಕ್ಡೌನ್ ಹಿನ್ನೆಲೆಯಲ್ಲಿ ಹರಿಯಾಣದಿಂದ ಬಿಹಾರದಲ್ಲಿರುವ ತಮ್ಮ ಮನೆಗಳಿಗೆ ನಡೆದುಕೊಂಡೆ ತೆರಳುತ್ತಿದ್ದ 6 ಮಂದಿ ವಲಸೆ ಕಾರ್ಮಿಕರು ಬಸ್ ಹರಿದು ಮೃತಪಟ್ಟಿರುವ ಘಟನೆ ದೆಹಲಿ-ಸಹರಾನ್‌ಪುರ ಹೆದ್ದಾರಿಯಲ್ಲಿ ನಡೆದಿದೆ. ಘಟನೆಯಲ್ಲಿ ಆರು ವಲಸೆ ಕಾರ್ಮಿಕರು ಮೃತಪಟ್ಟಿದ್ದು, ಐವರಿಗೆ ಗಂಭೀರವಾಗಿ ಗಾಯಗಳಾಗಿವೆ. ಇವರೆಲ್ಲರೂ ಪಂಜಾಬ್‌ನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಅವರು ಹರಿಯಾಣದಿಂದ ಬಿಹಾರದಲ್ಲಿರುವ ತಮ್ಮ ಮನೆಗಳಿಗೆ ಹಿಂದಿರುಗುತ್ತಿದ್ದಾಗ ಗಲೀಲಿ ಚೆಕ್ ಪೋಸ್ಟ್ ಮತ್ತು ರೋಹನಾ ಟೋಲ್ ಪ್ಲಾಜಾ ನಡುವಿನ ಹೆದ್ದಾರಿಯಲ್ಲಿ ವೇಗವಾಗಿ ಬರುತ್ತಿದ್ದ ಬಸ್ ಕಾರ್ಮಿಕರಿಗೆ ಡಿಕ್ಕಿ ಹೊಡೆದಿದೆ. ನಿನ್ನೆ ರಾತ್ರಿ […]
ಲಕ್ನೋ: ಲಾಕ್ಡೌನ್ ಹಿನ್ನೆಲೆಯಲ್ಲಿ ಹರಿಯಾಣದಿಂದ ಬಿಹಾರದಲ್ಲಿರುವ ತಮ್ಮ ಮನೆಗಳಿಗೆ ನಡೆದುಕೊಂಡೆ ತೆರಳುತ್ತಿದ್ದ 6 ಮಂದಿ ವಲಸೆ ಕಾರ್ಮಿಕರು ಬಸ್ ಹರಿದು ಮೃತಪಟ್ಟಿರುವ ಘಟನೆ ದೆಹಲಿ-ಸಹರಾನ್‌ಪುರ ಹೆದ್ದಾರಿಯಲ್ಲಿ ನಡೆದಿದೆ. ಘಟನೆಯಲ್ಲಿ ಆರು ವಲಸೆ ಕಾರ್ಮಿಕರು ಮೃತಪಟ್ಟಿದ್ದು, ಐವರಿಗೆ ಗಂಭೀರವಾಗಿ ಗಾಯಗಳಾಗಿವೆ.
ಇವರೆಲ್ಲರೂ ಪಂಜಾಬ್‌ನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಅವರು ಹರಿಯಾಣದಿಂದ ಬಿಹಾರದಲ್ಲಿರುವ ತಮ್ಮ ಮನೆಗಳಿಗೆ ಹಿಂದಿರುಗುತ್ತಿದ್ದಾಗ ಗಲೀಲಿ ಚೆಕ್ ಪೋಸ್ಟ್ ಮತ್ತು ರೋಹನಾ ಟೋಲ್ ಪ್ಲಾಜಾ ನಡುವಿನ ಹೆದ್ದಾರಿಯಲ್ಲಿ ವೇಗವಾಗಿ ಬರುತ್ತಿದ್ದ ಬಸ್ ಕಾರ್ಮಿಕರಿಗೆ ಡಿಕ್ಕಿ ಹೊಡೆದಿದೆ. ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
Published On - 12:11 pm, Thu, 14 May 20