Sitharaman on Economic Package ಬೀದಿ ವ್ಯಾಪಾರಿಗಳಿಗೆ 10,000 ರೂ ಸಾಲ

ದೆಹಲಿ: ಕೊರೊನಾ ಸಂಕಷ್ಟ ಕಾಲದಲ್ಲಿ ದೇಶದ ಉದ್ಯಮವಲಯದ ಸದೃಢಗೊಳಿಸಲು ಪ್ರಧಾನಿ ಮೋದಿ 20 ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದರು. ನಿನ್ನೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮೊದಲ ಕಂತನಲ್ಲಿ ಆ ಬಗ್ಗೆ ಒಂದಷ್ಟು ವಿವರಣೆ ಕೊಟ್ಟಿದ್ದರು. ಮುಂದುವರಿದ ಭಾಗವಾಗಿ ಇಂದು ಸುದ್ದಿಗೋಷ್ಠಿಯಲ್ಲಿ ಮತ್ತಷ್ಟು ಪ್ಯಾಕೇಜ್ ಲೆಕ್ಕದ ವಿವರ ಕೊಟ್ಟಿದ್ದಾರೆ. ಎರಡನೇ ಹಂತದ ಆರ್ಥಿಕ ಪ್ಯಾಕೇಜ್​ ಬಗ್ಗೆ ವಿವರಣೆ ನೀಡುತ್ತಾ ಸಚಿವೆ ನಿರ್ಮಲಾ ವಲಸೆ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ಮತ್ತು ಸಣ್ಣ ರೈತರಿಗೆ 3 […]

Sitharaman on Economic Package  ಬೀದಿ ವ್ಯಾಪಾರಿಗಳಿಗೆ 10,000 ರೂ ಸಾಲ
Follow us
ಸಾಧು ಶ್ರೀನಾಥ್​
|

Updated on:May 14, 2020 | 6:42 PM

ದೆಹಲಿ: ಕೊರೊನಾ ಸಂಕಷ್ಟ ಕಾಲದಲ್ಲಿ ದೇಶದ ಉದ್ಯಮವಲಯದ ಸದೃಢಗೊಳಿಸಲು ಪ್ರಧಾನಿ ಮೋದಿ 20 ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದರು. ನಿನ್ನೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮೊದಲ ಕಂತನಲ್ಲಿ ಆ ಬಗ್ಗೆ ಒಂದಷ್ಟು ವಿವರಣೆ ಕೊಟ್ಟಿದ್ದರು. ಮುಂದುವರಿದ ಭಾಗವಾಗಿ ಇಂದು ಸುದ್ದಿಗೋಷ್ಠಿಯಲ್ಲಿ ಮತ್ತಷ್ಟು ಪ್ಯಾಕೇಜ್ ಲೆಕ್ಕದ ವಿವರ ಕೊಟ್ಟಿದ್ದಾರೆ.

ಎರಡನೇ ಹಂತದ ಆರ್ಥಿಕ ಪ್ಯಾಕೇಜ್​ ಬಗ್ಗೆ ವಿವರಣೆ ನೀಡುತ್ತಾ ಸಚಿವೆ ನಿರ್ಮಲಾ ವಲಸೆ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ಮತ್ತು ಸಣ್ಣ ರೈತರಿಗೆ 3 ಯೋಜನೆಗಳನ್ನ ಪ್ರಕಟಿಸಿದ್ದಾರೆ.

Nirmala Sitharaman 2nd Economic Package Announcement Youtube Link

ಮನ್​ರೇಗಾದ ಕೂಲಿ 182 ರೂಪಾಯಿಯಿಂದ 202 ರೂ.ಗೆ ಏರಿಕೆ: ಎಲ್ಲ ಕಾರ್ಮಿಕರಿಗೆ ಕನಿಷ್ಟ ವೇತನ ಸಿಗಲು ಕೇಂದ್ರ ಸರ್ಕಾರ ಶ್ರಮಿಸುತ್ತಿದೆ. ಈಗ ಕೇವಲ ಶೇ. 30ರಷ್ಟು ಜನರಿಗೆ ಕನಿಷ್ಟ ವೇತನದ ಅವಕಾಶವಿದೆ. ಅಂತಾರಾಜ್ಯ ವಲಸಿಗ ಕಾರ್ಮಿಕರಿಗೆ ಕನಿಷ್ಟ ವೇತನ ಸಿಗುವ ಕಾನೂನು ತರಲಿದ್ದೇವೆ. ಕನಿಷ್ಟ 10 ಜನ ಕಾರ್ಮಿಕರು ಕೆಲಸ ಮಾಡುವವರಿಗೆ ಇಎಸ್​ಐಸಿ ಸೌಲಭ್ಯ ವಿಸ್ತರಣೆ. ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ ಸುರಕ್ಷಿತವಾಗಿ ಕೆಲಸ ಮಾಡುವ ಕಾನೂನು ರೂಪಿಸುತ್ತೇವೆ. 44 ವಿವಿಧ ಕಾನೂನುಗಳನ್ನು ಒಂದೇ ಕಾನೂನಿನಡಿ ತರಲು ಸರ್ಕಾರ ಶ್ರಮಿಸುತ್ತಿದೆ. ಒಂದು ದೇಶ, ಒಂದು ರೇಷನ್ ಕಾರ್ಡ್ ಯೋಜನೆ ಜಾರಿ ವಲಸಿಗ ಕಾರ್ಮಿಕರಿಗೆ ಉಚಿತ ದಿನಸಿ ವಿತರಣೆ ನೀಡಲು ಸರ್ಕಾರದ ನಿರ್ಧಾರ. ಪಡಿತರ ಕಾರ್ಡ್​ ಇಲ್ಲದವರಿಗೆ ಪ್ರತಿ ವ್ಯಕ್ತಿ 5 ಕೆಜಿ ಅಕ್ಕಿ/ಗೋಧಿ, 1 ಕೆಜಿ ಬೇಳೆಕಾಳು ವಿತರಣೆ. ರಾಜ್ಯ ಸರ್ಕಾರಗಳು ವಲಸಿಗ ಕಾರ್ಮಿಕರಿಗೆ ಪಡಿತರ ನೀಡಲು ಆದ್ಯತೆ ನೀಡಬೇಕು. ರಾಜ್ಯ ಸರ್ಕಾರಗಳು ಮಾಡುವ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸಲಿದೆ. ಇದರಿಂದ 8 ಕೋಟಿ ವಲಸಿಗ ಕಾರ್ಮಿಕರಿಗೆ ನೆರವಾಗಲಿದೆ. ಪಡಿತರ ವಿತರಣೆಗೆ 3,500 ಕೋಟಿ ರೂಪಾಯಿ ಕೇಂದ್ರ ಸರ್ಕಾರ ನೀಡಲಿದೆ. ಪಡಿತರ ವಿತರಣೆಗೆ ತಂತ್ರಜ್ಞಾನ ಆಧರಿತ ವ್ಯವಸ್ಥೆ ನೆರವಾಗಲಿದೆ. ದೇಶದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಚೀಟಿ ಬಳಸಬಹುದು. ಒಂದು ದೇಶ, ಒಂದು ರೇಷನ್ ಕಾರ್ಡ್ ಯೋಜನೆ ಜಾರಿಯಾಗಲಿದೆ. 67 ಕೋಟಿ ಜನರಿಗೆ ಇದರಿಂದ ಅನುಕೂಲವಾಲಿದೆ. ಶೇ.85ರಷ್ಟು ಪಡಿತರ ಪಡೆಯುವವರಿಗೆ ಇದರಿಂದ ನೆರವಾಗಲಿದೆ. ಮಾರ್ಚ್​ 31, 2021ರೊಳಗೆ ಒಂದೇ ದೇಶ, ಒಂದು ಕಾರ್ಡ್ ಯೋಜನೆಯ ಡಿಜಟಲೀಕರಣ.

ವಲಸಿಗ ಕಾರ್ಮಿಕರಿಗೆ ಬಾಡಿಗೆ ಮನೆಗೆ ನಿರ್ದಿಷ್ಟ ಬಾಡಿಗೆ ಫಿಕ್ಸ್​: ಕೈಗಾರಿಕೆಗಳು ತಮ್ಮ ಸ್ವಂತ ಜಾಗದಲ್ಲಿ ಬಾಡಿಗೆ ಮನೆಗಳನ್ನು ನಿರ್ಮಿಸಲು ಸರ್ಕಾರದ ಸಹಾಯ. ನಗರ ಕೇಂದ್ರಿತ ವಲಸಿಗರು, ಬಡವರು ನಿರ್ದಿಷ್ಟ ಬಾಡಿಗೆಯಲ್ಲಿ ಮನೆ ಬಾಡಿಗೆಗೆ ಪಡೆಯಬಹುದು. ನಗರ ಪ್ರದೇಶಗಳಲ್ಲಿ ಮನೆಗಳಿಲ್ಲದವರಿಗೂ ಊಟದ ವ್ಯವಸ್ಥೆ ₹29,500 ಕೋಟಿ ಸಾಲ ನಬಾರ್ಡ್​ ಮೂಲಕ ವಿತರಣೆ. ಇದು ಮಾರ್ಚ್​ ಒಂದೇ ತಿಂಗಳಲ್ಲೇ ವಿತರಿಸಲಾಗಿದೆ. ₹4,200 ಕೋಟಿ ಗ್ರಾಮೀಣ ಮೂಲಸೌಕರ್ಯಕ್ಕೆ ನೀಡಿದ್ದೇವೆ. ₹6,700 ಕೋಟಿ ಕೆಲಸದ ಬಂಡವಾಳವನ್ನು ನೀಡಲಾಗಿದೆ. ರಾಜ್ಯದ ಏಜೆನ್ಸಿಗಳಿಗೆ ಕೆಲಸದ ಬಂಡವಾಳ ನೀಡಲಾಗಿದೆ. ಗ್ರಾಮೀಣ ಬಡವರಿಗೆ ಕಳೆದ 2 ತಿಂಗಳಲ್ಲಿ ವಿತರಣೆ. ರಾಜ್ಯ ಸರ್ಕಾರಗಳಿಗೆ SDRF ಅನುದಾನ ಬಳಕೆಗೆ ಅನುಮತಿ. ವಲಸಿಗರಿಗೆ ₹11 ಸಾವಿರ ಕೋಟಿ ಬಳಸಲು ಅನುಮತಿ. ವಲಸೆ ಕಾರ್ಮಿಕರ ಊಟ, ವಸತಿಗೆ ಬಳಸಲು ಅನುಮತಿ. ವಲಸೆ ಕಾರ್ಮಿಕರಿಗೆ 2 ತಿಂಗಳಲ್ಲಿ ದಿನಕ್ಕೆ 3 ಹೊತ್ತು ಊಟ. ನಗರ ಪ್ರದೇಶಗಳಲ್ಲಿ ಮನೆಗಳಿಲ್ಲದವರಿಗೂ ಊಟದ ವ್ಯವಸ್ಥೆ. 12 ಸಾವಿರ ಸ್ವಸಹಾಯ ಸಂಘಗಳಿಂದ 3 ಕೋಟಿ ಮಾಸ್ಕ್.

ಮುದ್ರಾ ಶಿಶು ಸಾಲ ಯೋಜನೆಯಲ್ಲಿ 50 ಸಾವಿರದವರೆಗೆ ಸಾಲ ಪಡೆದವರಿಗೆ ಸೌಲಭ್ಯ. ಶಿಶು ಸಾಲ ಯೋಜನೆಯಲ್ಲಿ ಸಾಲ ಪಡೆದವರ ಶೇ. 2ರಷ್ಟು ಬಡ್ಡಿ ಕೇಂದ್ರ ಸರ್ಕಾರ ಭರಿಸುತ್ತೆ. ಸುಮಾರು 3 ಕೋಟಿ ಅಧಿಕ ಜನ ಮುದ್ರಾ ಶಿಶು ಸಾಲವನ್ನು ಪಡೆದಿದ್ದಾರೆ. ಮುದ್ರಾ ಯೋಜನೆ ಅತಿ ಸಣ್ಣ ವ್ಯಾಪಾರಿಗಳಿಗೆ ನೆರವಾಗಲು ಕೇಂದ್ರ ಸರ್ಕಾರದ ಆದ್ಯತೆ.

50 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ 10 ಸಾವಿರ ರೂ. ಫಿಕ್ಸ್: ಬೀದಿಬದಿ ವ್ಯಾಪಾರಿಗಳಿಗೆ ವ್ಯಾಪಾರ ಆರಂಭಿಸಲು 10 ಸಾವಿರ ರೂ. ಫಿಕ್ಸ್. 50 ಲಕ್ಷ ಬೀದಿಬದಿ ವ್ಯಾಪಾರಿಗಳಿಗೆ ವಿಶೇಷ ಸಾಲ ಸೌಲಭ್ಯಕ್ಕೆ 5 ಸಾವಿರ ಕೋಟಿ ರೂ. ಬೀದಿಬದಿ ವ್ಯಾಪಾರಿಗಳಿಗೆ ಸುಲಭ ವಿಧಾನದಲ್ಲಿ ಸಾಲ ಸೌಲಭ್ಯಕ್ಕೆ ಒತ್ತು.

ಮಧ್ಯಮ ಆದಾಯ ವರ್ಗದವರಿಗೆ ಗೃಹಸಾಲ ಸಬ್ಸಿಡಿ: 6-18ಲಕ್ಷ ಆದಾಯದ ಮಧ್ಯಮ ಆದಾಯ ವರ್ಗದವರಿಗೆ ಗೃಹಸಾಲ ಸಬ್ಸಿಡಿ.  ಕ್ರೆಡಿಟ್ ಲಿಂಕ್ಡ್​ ಸಬ್ಸಿಡಿ ಸ್ಕೀಂ 2021ರ ಮಾ.31ರವರೆಗೆ ವಿಸ್ತರಣೆ. 2.5 ಲಕ್ಷ ಕುಟುಂಬಗಳಿಗೆ ಹೆಚ್ಚುವರಿಯಾಗಿ ಇದರ ಲಾಭ. ಗೃಹ ಸಾಲ ಸೌಲಭ್ಯಕ್ಕಾಗಿ 70,000 ಕೋಟಿ ರೂ. ಮೀಸಲು.

ಬುಡಕಟ್ಟು ಮತ್ತು ಆದಿವಾಸಿಗಳಿಗೆ ಉದ್ಯೋಗ ಸೃಷ್ಟಿಗೆ ಕ್ರಮ:  ಬುಡಕಟ್ಟು, ಆದಿವಾಸಿಗಳ ಉದ್ಯೋಗಕ್ಕೆ ₹6 ಸಾವಿರ ಕೋಟಿ. ರಾಜ್ಯಗಳಿಂದ ಪ್ರಸ್ತಾವನೆ ಬಂದರೆ ಹೆಚ್ಚಿನ ಹಣ ನೀಡಲು ಸಿದ್ಧ.

ಸಣ್ಣ ಮತ್ತು ಅತಿಸಣ್ಣ ರೈತರಿಗೆ ಹೆಚ್ಚುವರಿಯಾಗಿ 30 ಸಾವಿರ ಕೋಟಿ ಸಾಲ: 2 ಲಕ್ಷ ಕೋಟಿ ರೂಪಾಯಿ ಕಿಸಾನ್ ಕ್ರೆಡಿಟ್​ ಕಾರ್ಡ್​ದಾರರಿಗೆ ಸಾಲ ನೀಡಲಾಗುತ್ತೆ. 2.5 ಕೋಟಿ ರೈತರಿಗೆ ಇದರಿಂದ ಅನುಕೂಲವಾಗಲಿದೆ. ಪಿಎಂ ಕಿಸಾನ್​ ಸಮ್ಮಾನ್​ ಯೋಜನೆಯ 2.5 ಕೋಟಿ ಜನರಿಗೆ ಕಿಸಾನ್ ಕ್ರೆಡಿಟ್​ ಕಾರ್ಡ್ ಇಲ್ಲ. ಹೈನುಗಾರರಿಗೆ, ಮೀನುಗಾರರಿಗೆ ಕಿಸಾನ್ ಕ್ರೆಡಿಟ್​ ವಿತರಣೆ ಮಾಡಲಾಗುವುದು.

ರೈತರಿಗೆ 30,000 ಕೋಟಿ ರೂಪಾಯಿ ತುರ್ತು ಸಾಲ. 90 ಸಾವಿರ ಕೋಟಿ ರೂಪಾಯಿ ವಾರ್ಷಿಕವಾಗಿ ಸಾಲ ನೀಡಲಾಗುತ್ತಿತ್ತು. ಈಗ ಹೆಚ್ಚುವರಿಯಾಗಿ 30 ಸಾವಿರ ಕೋಟಿ ರೂಪಾಯಿ ಸಾಲ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮಾತ್ರ ಇದರ ಅನುಕೂಲ

Published On - 4:10 pm, Thu, 14 May 20

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!