AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದ್ಯದ ದೊರೆ ಭಾರತಕ್ಕೆ ಬರೋದು ಕನ್ಫರ್ಮ್.. ಆದೇಶ ಆಯ್ತು, ಹಸ್ತಾಂತರ ಯಾವಾಗ?

ದೆಹಲಿ: ವಿಜಯ್ ಮಲ್ಯ ಹೆಸರು ಕೇಳಿದ್ರೆ ಸಾಕು ಭಾರತದ ಬ್ಯಾಂಕ್​ಗಳ ಬುಡ ಅಲ್ಲಾಡಿಬಿಡುತ್ತೆ. ಅಷ್ಟರ ಮಟ್ಟಿಗೆ ಮಲ್ಯ ಹೆಸರು ಕುಖ್ಯಾತ. ಸುಮಾರು 9 ಸಾವಿರ ಕೋಟಿ ರೂ ದೋಖಾ ಮಾಡಿ ದೇಶದಿಂದ ಎಸ್ಕೇಪ್ ಆಗಿರುವ ಮಲ್ಯ, ದೇಶಕ್ಕೆ ವಾಪಸ್ ಆಗೋದು ಪಕ್ಕಾ ಆಗಿದೆ. ಮಲ್ಯಗೆ ಕಂಬಿ ಹಿಂದೆ ಸೇರುವ ಆತಂಕ ಕೂಡ ಹೆಚ್ಚಾಗುತ್ತಿದೆ. ಬ್ರಿಟನ್​ನ ಸುಪ್ರೀಂ ಕೋರ್ಟ್‌ನಲ್ಲಿ ಮಲ್ಯ ಮೇಲ್ಮನವಿ ಅರ್ಜಿ ತಿರಸ್ಕೃತವಾಗ್ತಿದ್ದಂತೆ, ಮಾಜಿ ಉದ್ಯಮಿಗೆ ಢವಢವ ಶುರುವಾಗಿದೆ. ಕಾಸು ಕೊಡಲು ರೆಡಿ ಎಂದ ಮದ್ಯದ ದೊರೆ! […]

ಮದ್ಯದ ದೊರೆ ಭಾರತಕ್ಕೆ ಬರೋದು ಕನ್ಫರ್ಮ್.. ಆದೇಶ ಆಯ್ತು, ಹಸ್ತಾಂತರ ಯಾವಾಗ?
ವಿಜಯ್ ಮಲ್ಯ (ಸಂಗ್ರಹ ಚಿತ್ರ)
ಸಾಧು ಶ್ರೀನಾಥ್​
|

Updated on:May 15, 2020 | 11:05 AM

Share

ದೆಹಲಿ: ವಿಜಯ್ ಮಲ್ಯ ಹೆಸರು ಕೇಳಿದ್ರೆ ಸಾಕು ಭಾರತದ ಬ್ಯಾಂಕ್​ಗಳ ಬುಡ ಅಲ್ಲಾಡಿಬಿಡುತ್ತೆ. ಅಷ್ಟರ ಮಟ್ಟಿಗೆ ಮಲ್ಯ ಹೆಸರು ಕುಖ್ಯಾತ. ಸುಮಾರು 9 ಸಾವಿರ ಕೋಟಿ ರೂ ದೋಖಾ ಮಾಡಿ ದೇಶದಿಂದ ಎಸ್ಕೇಪ್ ಆಗಿರುವ ಮಲ್ಯ, ದೇಶಕ್ಕೆ ವಾಪಸ್ ಆಗೋದು ಪಕ್ಕಾ ಆಗಿದೆ. ಮಲ್ಯಗೆ ಕಂಬಿ ಹಿಂದೆ ಸೇರುವ ಆತಂಕ ಕೂಡ ಹೆಚ್ಚಾಗುತ್ತಿದೆ. ಬ್ರಿಟನ್​ನ ಸುಪ್ರೀಂ ಕೋರ್ಟ್‌ನಲ್ಲಿ ಮಲ್ಯ ಮೇಲ್ಮನವಿ ಅರ್ಜಿ ತಿರಸ್ಕೃತವಾಗ್ತಿದ್ದಂತೆ, ಮಾಜಿ ಉದ್ಯಮಿಗೆ ಢವಢವ ಶುರುವಾಗಿದೆ.

ಕಾಸು ಕೊಡಲು ರೆಡಿ ಎಂದ ಮದ್ಯದ ದೊರೆ! ಸಾಲ-ಸೋಲ ಮಾಡಿ ಎಸ್ಕೇಪ್ ಆಗಿರುವ ವಿಜಯ್ ಮಲ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ, ಉದ್ಯಮಿ ಹಸ್ತಾಂತರಿಸುವ ಸಂಬಂಧ ಭಾರತಕ್ಕೆ ಬೃಹತ್ ಗೆಲುವು ಸಿಕ್ಕಿದೆ. ಲಂಡನ್‌ ಹೈಕೋರ್ಟ್‌ ಆದೇಶದ ವಿರುದ್ಧ ಉದ್ಯಮಿ ಮಲ್ಯ ಬ್ರಿಟನ್‌ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ ಮೇಲ್ಮನವಿಗೆ ನಿನ್ನೆ ಸೋಲಾಗಿದೆ. ಕಳೆದ ತಿಂಗಳು ಮಲ್ಯ ಬ್ರಿಟನ್​ನ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ವಜಾ ಆದ ನಂತರ, ಸುಪ್ರೀಂ ಮೆಟ್ಟಿಲೇರಿದ್ರು. ಏಪ್ರಿಲ್‌ 20ರಂದು ಹೈಕೋರ್ಟ್‌ ಆದೇಶ ನೀಡಿತ್ತು.

ಈ ಆದೇಶದ ವಿರುದ್ಧ ಅರ್ಜಿ ಸಲ್ಲಿಸಲು ಮಲ್ಯಗೆ 14 ದಿನಗಳ ಕಾಲಾವಕಾಶ ನೀಡಲಾಗಿತ್ತು. ಆದರೆ ಮಲ್ಯ ಮನವಿ ತಿರಸ್ಕಾರವಾಗಿದ್ದು, ಭಾರತಕ್ಕೆ ಹಸ್ತಾಂತರವಾಗೋದು ಪಕ್ಕಾ ಆಗಿದೆ. ಇದು ಗೊತ್ತಾಗ್ತಿದ್ದಂತೆ ನನ್ನ ಬಾಕಿ ಹಣ ಕೊಟ್ಟುಬಿಡ್ತೀನಿ ಅಂತಾ ಮಲ್ಯ ಕೇಳಿಕೊಳ್ತಿದ್ದು, ಮತ್ತೊಂದು ಕಡೆ ಉದ್ಯಮಿಯ ಗಡಿಪಾರಿಗೆ ಬ್ರಿಟನ್​ನಲ್ಲಿ ಸಿದ್ಧತೆ ಆರಂಭವಾಗಿದೆ. ಇದು ವಿಜಯ್ ಮಲ್ಯ ಎದೆ ಬಡಿತವನ್ನ ಮತ್ತಷ್ಟು ಹೆಚ್ಚುವಂತೆ ಮಾಡಿದೆ.

ಆದೇಶ ಸಿಕ್ಕಿದ್ದಾಯ್ತು, ಮಲ್ಯ ಹಸ್ತಾಂತರ ಯಾವಾಗ? ಅಂದಹಾಗೆ ಬ್ರಿಟನ್ ಗೃಹ ಸಚಿವರಾದ ಪ್ರೀತಿ ಪಟೇಲ್‌ ಮುಂದಿನ ಆದೇಶದ ಅನುಸಾರ 28 ದಿನದ ಒಳಗಾಗಿ ಭಾರತಕ್ಕೆ ಮಲ್ಯ ಹಸ್ತಾಂತರಿಸುವ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗಿದೆ.  ಇನ್ನು ವಿಜಯ್ ಮಲ್ಯ ಭಾರತಕ್ಕೆ ಹಸ್ತಾಂತರ ಆಗಿದ್ದೇ ಆದಲ್ಲಿ ದೇಶದ ತನಿಖಾ ಸಂಸ್ಥೆಗಳು ಮಲ್ಯರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಿವೆ. ಬಂಧನ ಭೀತಿ ಹಿನ್ನೆಲೆ ಮಲ್ಯ ಭಾರತಕ್ಕೆ ಬರುವುದನ್ನ ತಪ್ಪಿಸಿಕೊಳ್ಳಲು ಮತ್ತೆ ನಾನಾ ಕಸರತ್ತು ಆರಂಭಿಸಿದ್ದಾರೆ. ಆದ್ರೆ ಅದ್ಯಾವುದೂ ವರ್ಕೌಟ್ ಆಗಲ್ಲ ಅನ್ನೋದು ಭಾಗಶಃ ಕನ್ಫರ್ಮ್ ಆಗಿದೆ.

ಒಟ್ನಲ್ಲಿ ಭಾರತದಲ್ಲಿ ಸಾಕಷ್ಟು ಸುದ್ದಿಯಾಗಿದ್ದ ಮಲ್ಯ ಪ್ರಕರಣಕ್ಕೆ ತೆರೆ ಬೀಳುವ ಕಾಲ ಸನ್ನಿಹಿತವಾಗಿದೆ. ಸದ್ಯದ ಆದೇಶದ ಹಿನ್ನೆಲೆ ಮಲ್ಯ ವಿಚಾರಣೆಗೆ ಭಾರತ ಯಾವ ರೀತಿ ಸಿದ್ಧತೆ ನಡೆಸಲಿದೆ ಅನ್ನೋದನ್ನ ಕಾದು ನೋಡಬೇಕಿದೆ.

Published On - 7:06 am, Fri, 15 May 20

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?