AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘Covid Emergency ದೇವಸ್ಥಾನಗಳ ಚಿನ್ನವನ್ನು ಸರ್ಕಾರ ತಕ್ಷಣವೇ ಪಡೆದುಕೊಳ್ಳಲಿ’

ಮುಂಬೈ: ಕೊರೊನಾ ಕ್ರಿಮಿಗೆ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಮಹಾಮಾರಿಯಿಂದ ಆರ್ಥಿಕತೆಯೂ ಪಾತಾಳಕ್ಕೆ ಕುಸಿದಿದೆ. ಈ ನಡುವೆ ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್‌ ಚೌಹಾಣ್ ವಿವಾದಾತ್ಮಕ ಹೇಳಿಕೆಯೊಂದನ್ನ ನೀಡಿದ್ದಾರೆ. ವರ್ಲ್ಡ್ ಗೋಲ್ಡ್ ಕೌನ್ಸಿಲ್ ಮಾಹಿತಿ ಪ್ರಕಾರ ದೇಶದ ದೇವಾಲಯಗಳಲ್ಲಿ ಒಂದು ಟ್ರಿಲಿಯನ್ ಡಾಲರ್ ಅಂದ್ರೆ 75 ಲಕ್ಷ ಕೋಟಿ ಮೌಲ್ಯದ ಚಿನ್ನ ಇದೆ. ದೇಶದಲ್ಲಿ ಇದು ತುರ್ತು […]

‘Covid Emergency ದೇವಸ್ಥಾನಗಳ ಚಿನ್ನವನ್ನು ಸರ್ಕಾರ ತಕ್ಷಣವೇ ಪಡೆದುಕೊಳ್ಳಲಿ’
ಸಾಧು ಶ್ರೀನಾಥ್​
|

Updated on:May 15, 2020 | 2:48 PM

Share

ಮುಂಬೈ: ಕೊರೊನಾ ಕ್ರಿಮಿಗೆ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಮಹಾಮಾರಿಯಿಂದ ಆರ್ಥಿಕತೆಯೂ ಪಾತಾಳಕ್ಕೆ ಕುಸಿದಿದೆ. ಈ ನಡುವೆ ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್‌ ಚೌಹಾಣ್ ವಿವಾದಾತ್ಮಕ ಹೇಳಿಕೆಯೊಂದನ್ನ ನೀಡಿದ್ದಾರೆ.

ವರ್ಲ್ಡ್ ಗೋಲ್ಡ್ ಕೌನ್ಸಿಲ್ ಮಾಹಿತಿ ಪ್ರಕಾರ ದೇಶದ ದೇವಾಲಯಗಳಲ್ಲಿ ಒಂದು ಟ್ರಿಲಿಯನ್ ಡಾಲರ್ ಅಂದ್ರೆ 75 ಲಕ್ಷ ಕೋಟಿ ಮೌಲ್ಯದ ಚಿನ್ನ ಇದೆ. ದೇಶದಲ್ಲಿ ಇದು ತುರ್ತು ಪರಿಸ್ಥಿತಿ ಸಂದರ್ಭವಾಗಿದೆ. ಹಾಗಾಗಿ ಕಡಿಮೆ ಬಡ್ಡಿ ದರಕ್ಕೆ ಗೋಲ್ಡ್ ಪಡೆದುಕೊಳ್ಳಬಹುದು‌‌. ದೇವಾಲಯ, ಧಾರ್ಮಿಕ ಟ್ರಸ್ಟ್​ಗಳಲ್ಲಿರುವ ಚಿನ್ನವನ್ನು ಸರ್ಕಾರ ತಕ್ಷಣವೇ ಪಡೆದುಕೊಳ್ಳಲಿ ಎಂದು ಪೃಥ್ವಿರಾಜ್‌ ಚೌಹಾಣ್ ಟ್ವೀಟ್ ಮಾಡಿದ್ದಾರೆ.

ಚೌಹಾಣ್ ಟ್ವೀಟ್​ಗೆ ಬಿಜೆಪಿ ಆಕ್ಷೇಪ:

ಕಾಂಗ್ರೆಸ್ ಯಾವಾಗಲೂ ಹಿಂದೂ ದೇವಾಲಯಗಳ ಚಿನ್ನದ ಮೇಲೆಯೇ ಕಣ್ಣಿಟ್ಟಿದೆ ಎಂದು ಪೃಥ್ವಿರಾಜ್‌ ಚೌಹಾಣ್ ಟ್ವೀಟ್​ಗೆ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚಿನ್ನ ಅಡಮಾನ ಯೋಜನೆಯನ್ನ ವಾಜಪೇಯಿ ಸರ್ಕಾರವೇ ಆರಂಭಿಸಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ.

ಕೇಂದ್ರ ಸರ್ಕಾರವೇ ಲೋಕಸಭೆಗೆ ನೀಡಿರುವ ಮಾಹಿತಿ ಪ್ರಕಾರ ಬಹಳಷ್ಟು ದೇವಾಲಯಗಳು ಈಗಾಗಲೇ ಚಿನ್ನ ಅಡಮಾನ ಮಾಡಿವೆ ಎಂದು ದಾಖಲೆ ಬಿಡುಗಡೆ ಮಾಡಿದರು. ಇದೇ ವೇಳೆ ನನ್ನ ಹೇಳಿಕೆಗೆ ಉದ್ದೇಶಪೂರ್ವಕವಾಗಿ ಕೋಮು ಬಣ್ಣ ನೀಡಿದರೆ ಸೂಕ್ತ ಕ್ರಮ ಕೈಗೊಳ್ಳುವೆ ಎಂದು ಚೌಹಾಣ್ ಎಚ್ಚರಿಕೆ ನೀಡಿದ್ದಾರೆ.

Published On - 2:47 pm, Fri, 15 May 20