AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nirmala Sitharaman Economic package ಲೋಕಲ್ ರಾಗಿಗೆ ಗ್ಲೋಬಲ್ ಮುಕುಟ

ದೆಹಲಿ: ಪ್ರಧಾನಿ ಮೋದಿ ಘೋಷಿಸಿರುವ 20 ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್ ಪೈಕಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇದುವರೆಗೆ 2 ಕಂತುಗಳಲ್ಲಿ ಸುಮಾರು 16 ಲಕ್ಷ ಕೋಟಿ ರೂಪಾಯಿ ಬಗ್ಗೆ ವಿವರಣೆ ಕೊಟ್ಟಿದ್ದಾರೆ. ಇಂದು ಉಳಿದ ಭಾಗದಲ್ಲಿ ಯಾವ ಬಾಬತ್ತಿಗೆ ಎಷ್ಟು ಹಣ ವಿನಿಯೋಗಿಸಲಾಗುವುದು ಎಂಬುದರ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಆ ಲೆಕ್ಕ ಒಪ್ಪಿಸಿದ್ದಾರೆ. ನಾಳೆಯೂ ನಿರ್ಮಲಾ ಸೀತಾರಾಮನ್ ರಿಂದ ಪ್ಯಾಕೇಜ್ ಘೋಷಣೆ ನಿರ್ಮಲಾ ಸೀತಾರಾಮನ್ ಇಂದು 1.63 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದ್ದಾರೆ. […]

Nirmala Sitharaman Economic package ಲೋಕಲ್ ರಾಗಿಗೆ ಗ್ಲೋಬಲ್ ಮುಕುಟ
ಸಾಧು ಶ್ರೀನಾಥ್​
|

Updated on:May 15, 2020 | 6:03 PM

Share

ದೆಹಲಿ: ಪ್ರಧಾನಿ ಮೋದಿ ಘೋಷಿಸಿರುವ 20 ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್ ಪೈಕಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇದುವರೆಗೆ 2 ಕಂತುಗಳಲ್ಲಿ ಸುಮಾರು 16 ಲಕ್ಷ ಕೋಟಿ ರೂಪಾಯಿ ಬಗ್ಗೆ ವಿವರಣೆ ಕೊಟ್ಟಿದ್ದಾರೆ. ಇಂದು ಉಳಿದ ಭಾಗದಲ್ಲಿ ಯಾವ ಬಾಬತ್ತಿಗೆ ಎಷ್ಟು ಹಣ ವಿನಿಯೋಗಿಸಲಾಗುವುದು ಎಂಬುದರ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಆ ಲೆಕ್ಕ ಒಪ್ಪಿಸಿದ್ದಾರೆ.

ನಾಳೆಯೂ ನಿರ್ಮಲಾ ಸೀತಾರಾಮನ್ ರಿಂದ ಪ್ಯಾಕೇಜ್ ಘೋಷಣೆ ನಿರ್ಮಲಾ ಸೀತಾರಾಮನ್ ಇಂದು 1.63 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಿಸಿದ್ದಾರೆ. ಇನ್ನೂ 1.89 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಣೆ ಬಾಕಿ‌ ಇದೆ. ಹೀಗಾಗಿ ನಾಳೆಯೂ ನಿರ್ಮಲಾ ಸೀತಾರಾಮನ್ ರಿಂದ ಪ್ಯಾಕೇಜ್ ಘೋಷಣೆ ಮುಂದುವರಿಯಲಿದೆ. ಇನ್ನೂ ಸೇವಾ ವಲಯಕ್ಕೆ ಪ್ಯಾಕೇಜ್ ಘೋಷಿಸಿಲ್ಲ‌. ವಾರಾಂತ್ಯದಲ್ಲಿ ಸೇವಾ ವಲಯಕ್ಕೆ ಪ್ಯಾಕೇಜ್ ಘೋಷಣೆ ನಿರೀಕ್ಷೆಯಿದೆ.

ಸಚಿವೆ ನಿರ್ಮಲಾ ಸುದ್ದಿಗೋಷ್ಠಿ ಮುಖ್ಯಾಂಶಗಳು:   ಕೃಷಿಯಲ್ಲಿ ಆಡಳಿತಾತ್ಮಕ ಸುಧಾರಣೆಗಳ ಬಗ್ಗೆ ಪ್ರಸ್ತಾಪ ಮಾಡಲಾಗಿದ್ದು, ಮೂಲಸೌಕರ್ಯ, ಸಾಮರ್ಥ್ಯ ವೃದ್ಧಿ ಬಗ್ಗೆ 8 ತೀರ್ಮಾನಗಳು ಮತ್ತು ಸರ್ಕಾರ, ಆಡಳಿತಾತ್ಮಕ ಸುಧಾರಣೆಗಳ ಬಗ್ಗೆ 3 ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಚಿವೆ ನಿರ್ಮಲಾ ಹೇಳಿದ್ದಾರೆ.

ಕೃಷಿ ಮೂಲಸೌಕರ್ಯ ವೃದ್ಧಿಗಾಗಿ 1 ಲಕ್ಷ ಕೋಟಿ ರೂ. ಮೂಲಸೌಕರ್ಯ ವೃದ್ಧಿಗಾಗಿ 1 ಲಕ್ಷ ಕೋಟಿ ನೀಡ್ತೇವೆ. ಕೃಷಿ ಉತ್ಪಾದಕ ಸಂಘಗಳು ಸೇರಿ ಕ್ಲಸ್ಟರ್ ಆಧಾರಿತ ಕೃಷಿಗೆ 10 ಸಾವಿರ ಕೋಟಿ ರೂ. ಕೃಷಿ ಉತ್ಪನ್ನಗಳ ಸಾಗಾಟಕ್ಕೆ 10 ಸಾವಿರ ಕೋಟಿ ರೂ. ವಿನಿಯೋಗಿಸಲಾಗುವುದು. 1 ಲಕ್ಷ ಕೋಟಿ ರೂಪಾಯಿ ಕೃಷಿ ಮೂಲ ಸೌಕರ್ಯಕ್ಕೆ ಮೀಸಲು. ಸಾವಯವ ಕೃಷಿ, ಹರ್ಬಲ್‌ ಕೃಷಿಕರಿಗೆ ನೆರವು ನೀಡ್ತೇವೆ. ವನ್ಯ ಸಂಪತ್ತು ಯೋಜನೆಗೂ ಹಣ ನೀಡಲಾಗುತ್ತೆ.

ಕರ್ನಾಟಕದ ರಾಗಿಗೆ ಇನ್ಮುಂದೆ ಗ್ಲೋಬಲ್ ಬ್ರ್ಯಾಂಡಿಂಗ್ ಮುಕುಟ 1 ಲಕ್ಷ ಕೋಟಿ ರೂಪಾಯಿ ನಿಧಿಯಲ್ಲಿ ಕೃಷಿ ಉತ್ಪನ್ನಗಳ ಉಗ್ರಾಣಗಳು, ಕೃಷಿ ಉದ್ಯಮಿಗಳಿಗೆ ಕೃಷಿ ಸ್ಟಾರ್ಟ್​ಅಪ್​ಗಳಿಗೆ ಉತ್ತೇಜನ ನೀಡಲಾಗುವುದು. 10 ಸಾವಿರ ಕೋಟಿ ರೂಪಾಯಿ ದೇಸಿ ಕೃಷಿ ಉತ್ಪನ್ನಗಳ ಮಾರಾಟ ಸೌಲಭ್ಯಕ್ಕೆ ಮೀಸಲಿಡಲಾಗುವುದು. ಪ್ರಾದೇಶಿಕವಾರು ದೇಶೀಯ ಆಹಾರ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆಗೆ ಒತ್ತು.

ಕರ್ನಾಟಕದಲ್ಲಿ ರಾಗಿ ಬೆಳೆಯ ಬಗ್ಗೆ ಪ್ರಸ್ತಾಪಿಸಿದ ನಿರ್ಮಲಾ ಸಾವಯವ ಪದ್ಧತಿಯಲ್ಲಿ ರಾಗಿ ಬೆಳೆಯಲು ಪ್ರೋತ್ಸಾಹ ನೀಡಲಾಗುವುದು ಎಂದರು. ಕರ್ನಾಟಕದ ರಾಗಿಗೆ ಇನ್ಮುಂದೆ ಗ್ಲೋಬಲ್ ಬ್ರ್ಯಾಂಡಿಂಗ್ ಮುಕುಟ. ಬ್ರ್ಯಾಂಡಿಂಗ್ ಮೂಲಕ ಆಹಾರ ಉತ್ಪನ್ನಗಳ ಮಾರಾಟಕ್ಕೆ ಹೆಚ್ಚಿನ ಒತ್ತು.

ಪಶುಸಂಗೋಪನೆಗೆ 15 ಸಾವಿರ ಕೋಟಿ ರೂಪಾಯಿ ಪಶುಸಂಗೋಪನೆ ಮೂಲ ಸೌಕರ್ಯ ಅಭಿವೃದ್ಧಿಗಾಗಿ 15 ಸಾವಿರ ಕೋಟಿ ರೂಪಾಯಿ ನೆರವು ನೀಡಲಾಗುವುದು. ಎಲ್ಲ ಪಶುಗಳಿಗೆ ಶೇ. 100 ರಷ್ಟು ರೋಗ ನಿರೋಧಕ ಲಸಿಕೆ ನೀಡಲಾಗುತ್ತದೆ. 1.5 ಕೋಟಿ ಹಸು ಮತ್ತು ಎಮ್ಮೆಗಳಿಗೆ ರೋಗ ನಿರೋಧಕ ಲಸಿಕೆ ನೀಡಲಾಗಿದೆ. ಒಟ್ಟಾರೆ, 53 ಕೋಟಿ ಜಾನುವಾರಗಳಿಗೆ ಲಸಿಕೆ ಹಾಕಲಾಗುವುದು. ಲಸಿಕೆ ಹಾಕಲು 13,343 ಕೋಟಿ ನೀಡಲಾಗುವುದು. 15,000 ಕೋಟಿ ರೂ. ಹೈನುಗಾರಿಕೆ ಮೂಲಸೌಕರ್ಯಕ್ಕೆ ಮೀಸಲು.

ಮೀನು ಸಾಕಣೆ, ಮೀನುಗಾರರಿಗೆ ಉಪಕರಣ ಖರೀದಿಗೆ 20 ಸಾವಿರ ಕೋಟಿ ರೂ ಮೀಸಲು ಮತ್ಸ್ಯ ಸಂಪದ ಯೋಜನೆ ಮೂಲಕ ಮೀನುಗಾರಿಕೆಗೆ ಒತ್ತು. ಮೀನುಗಳ ಸಾಕಣೆ, ಮೀನುಗಾರರಿಗೆ ಹೊಸ ಉಪಕರಣಗಳ ಖರೀದಿಗೆ 20 ಸಾವಿರ ಕೋಟಿ ರೂಪಾಯಿ ಮೀಸಲು. ಮೀನುಗಾರಿಕೆಯಲ್ಲಿ 55 ಲಕ್ಷ ಉದ್ಯೋಗ ಸೃಷ್ಟಿಯ ಗುರಿ ಹೊಂದಲಾಗಿದೆ.

ಔಷಧೀಯ ಸಸ್ಯಗಳ ಕೃಷಿಗೆ ಉತ್ತೇಜನ ಔಷಧೀಯ ಸಸ್ಯಗಳ ಮಾರಾಟದಿಂದ 5 ಸಾವಿರ ಕೋಟಿ ರೂಪಾಯಿ ಆದಾಯದ ನಿರೀಕ್ಷೆ. ಔಷಧೀಯ ಸಸ್ಯಗಳ ಕೃಷಿ ಉತ್ತೇಜನಕ್ಕೆ 4 ಸಾವಿರ ಕೋಟಿ ರೂಪಾಯಿ ಮೀಸಲು.

ಜೇನು ಮೇಣದ ರಫ್ತಿಗೆ ಕಡಿವಾಣ ಜೇನಿನಿಂದ ಉತ್ಪತ್ತಿಯಾಗುವ ಮೇಣದ ರಫ್ತು ಕಡಿಮೆ ಮಾಡಲು ಸರ್ಕಾರದ ಯತ್ನ. ಈ ಮೂಲಕ ಮಹಿಳೆಯರಿಗೆ ಜೇನಿನ ಮೇಣದಿಂದ ಉದ್ಯೋಗ ಮತ್ತು ಆದಾಯ ಹೆಚ್ಚಳಕ್ಕೆ ಒತ್ತು. ಜೇನು ಸಾಕಾಣಿಕೆಗೆ 500 ಕೋಟಿ ರೂಪಾಯಿ ಮೀಸಲು.

ಅಗತ್ಯ ವಸ್ತುಗಳ ಕಾಯ್ದೆ ಎಣ್ಣೆಕಾಳುಗಳು, ಬೇಳೆಕಾಳುಗಳು, ಆಲೂಗಡ್ಡೆ, ಈರುಳ್ಳಿ ನಿರ್ದಿಷ್ಟ ಸಂಗ್ರಹದ ಮೇಲಿನ ನಿಷೇಧ ರದ್ದು. 500 ಕೋಟಿ ರೂಪಾಯಿ ಟೊಮ್ಯಾಟೋ, ಈರುಳ್ಳಿ, ಆಲೂಗಡ್ಡೆ ಸಾಗಣೆ, ಸಂಗ್ರಹಣೆಗೆ ಮೀಸಲು. ಪ್ರಾಯೋಗಿಕವಾಗಿ 6 ತಿಂಗಳು ಈ ಯೋಜನೆ ಜಾರಿ.

ರೈತರ ಬೆಳೆಗಳ ಅಂತಾರಾಜ್ಯ ಮುಕ್ತ ಮಾರಾಟಕ್ಕೆ ಅವಕಾಶ ರೈತರ ಬೆಳೆಗಳಿಗೆ ಉತ್ತಮ ಬೆಲೆ ಸಿಗಲು ಕಾಯ್ದೆಗೆ ತಿದ್ದುಪಡಿ. ಅಗತ್ಯ ವಸ್ತುಗಳನ್ನು ಸಂಗ್ರಹಿಸಲು ಯಾವುದೇ ಮಿತಿ ಇಲ್ಲ. ಕೃಷಿ ಮಾರುಕಟ್ಟೆಯಲ್ಲಿ ಸುಧಾರಣೆಗೆ ಕ್ರಮ. ಎಪಿಎಂಸಿಯಲ್ಲಿ ಲೈಸೆನ್ಸ್‌ ಇರುವವರಿಗೆ ಮಾತ್ರ ಮಾರಾಟ. ಆದ್ರೆ ಕೈಗಾರಿಕೆ ಉತ್ಪನ್ನ ಮಾರಾಟಕ್ಕೆ ಈ ನಿಯಮವಿಲ್ಲ. ತಮಗೆ ಇಷ್ಟ ಬಂದ ಕಡೆ ರೈತರು ಉತ್ಪನ್ನ ಮಾರಬಹುದು. ಅಂತಾರಾಜ್ಯ ಮುಕ್ತ ಮಾರಾಟಕ್ಕೆ ಅವಕಾಶ. ಇ-ಟ್ರೇಿಡಿಂಗ್‌ಗೆ ಅವಕಾಶ ನೀಡಲು ಹೊಸ ಕಾಯ್ದೆ ಜಾರಿ.

ನಿಗದಿತ ಆದಾಯ ನಿಟ್ಟಿನಲ್ಲಿ ಕೃಷಿ ಉತ್ಪನ್ನದ ಬೆಲೆ ಮತ್ತು ಗುಣಮಟ್ಟದ ಭರವಸೆ. ರೈತರ ಉತ್ಪನ್ನ ದೊಡ್ಡ ಮಟ್ಟದಲ್ಲಿ ಮಾರಾಟಕ್ಕೆ ಕಾನೂನಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವೆ ನಿರ್ಮಲಾ ಸುದ್ದಿಗಾರರಿಗೆ ತಿಳಿಸಿದರು.

Published On - 4:07 pm, Fri, 15 May 20

ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ