AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೇ 17ರ ನಂತ್ರ ಲಾಕ್ ಡೌನ್ 4.O ಜಾರಿ, ಅಧಿಕಾರಿಗಳ ಜತೆ ಮೋದಿ ಚರ್ಚೆ

ದೆಹಲಿ: 3ನೇ ಹಂತದ ಲಾಕ್​ಡೌನ್ ಮುಗಿಯೋಕೆ ಜಸ್ಟ್ ಮೂರೇ ದಿನ ಬಾಕಿ ಉಳಿದಿದೆ. ಇನ್ನೇನ್ 4ನೇ ಹಂತದ ಲಾಕ್​ಡೌನ್ ಕೂಡ ವಿಭಿನ್ನ ರೂಪದಲ್ಲಿ ಬರುತ್ತೆ ಅಂತಾ ಮೋದಿ ಹೇಳಿದ್ದಾರೆ. ನಿನ್ನೆ ಏನೇನ್ ರೂಲ್ಸ್ ಮಾಡ್ಬೇಕು, ಯಾವೆಲ್ಲಾ ಬದಲಾವಣೆಗಳನ್ನ ಜಾರಿಗೆ ತರಬೇಕು ಅಂತಾ ಮೋದಿ ಸಚಿವರೊಂದಿಗೆ ಮೀಟಿಂಗ್ ಮಾಡಿದ್ದಾರೆ. ಲಾಕ್​ಡೌನ್ 3.O ಮುಗೀತಾ ಬಂತು.. 4ನೇ ಹಂತದ ಲಾಕ್​ಡೌನ್​ಗೆ ಇಡೀ ದೇಶವೇ ಸಜ್ಜಾಗ್ತಿದೆ. ಹೊಸ ರೂಪದ ಲಾಕ್​ಡೌನ್ ಹೇಗಿರಲಿದೆ ಅನ್ನೋ ಕುತೂಹಲ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಹೊಸ ಮಾರ್ಗಸೂಚಿ ಬಗ್ಗೆ […]

ಮೇ 17ರ ನಂತ್ರ ಲಾಕ್ ಡೌನ್ 4.O ಜಾರಿ, ಅಧಿಕಾರಿಗಳ ಜತೆ ಮೋದಿ ಚರ್ಚೆ
ಸಾಧು ಶ್ರೀನಾಥ್​
|

Updated on: May 14, 2020 | 6:42 AM

Share

ದೆಹಲಿ: 3ನೇ ಹಂತದ ಲಾಕ್​ಡೌನ್ ಮುಗಿಯೋಕೆ ಜಸ್ಟ್ ಮೂರೇ ದಿನ ಬಾಕಿ ಉಳಿದಿದೆ. ಇನ್ನೇನ್ 4ನೇ ಹಂತದ ಲಾಕ್​ಡೌನ್ ಕೂಡ ವಿಭಿನ್ನ ರೂಪದಲ್ಲಿ ಬರುತ್ತೆ ಅಂತಾ ಮೋದಿ ಹೇಳಿದ್ದಾರೆ. ನಿನ್ನೆ ಏನೇನ್ ರೂಲ್ಸ್ ಮಾಡ್ಬೇಕು, ಯಾವೆಲ್ಲಾ ಬದಲಾವಣೆಗಳನ್ನ ಜಾರಿಗೆ ತರಬೇಕು ಅಂತಾ ಮೋದಿ ಸಚಿವರೊಂದಿಗೆ ಮೀಟಿಂಗ್ ಮಾಡಿದ್ದಾರೆ.

ಲಾಕ್​ಡೌನ್ 3.O ಮುಗೀತಾ ಬಂತು.. 4ನೇ ಹಂತದ ಲಾಕ್​ಡೌನ್​ಗೆ ಇಡೀ ದೇಶವೇ ಸಜ್ಜಾಗ್ತಿದೆ. ಹೊಸ ರೂಪದ ಲಾಕ್​ಡೌನ್ ಹೇಗಿರಲಿದೆ ಅನ್ನೋ ಕುತೂಹಲ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಹೊಸ ಮಾರ್ಗಸೂಚಿ ಬಗ್ಗೆ ಪ್ರಧಾನಿ ನಿನ್ನೆ ಸಚಿವರೊಂದಿಗೆ ಸುದೀರ್ಘ ಸಭೆ ನಡೆಸಿದ್ರು.

ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಸೇರಿದಂತೆ ಕೇಂದ್ರ ಸರ್ಕಾರ ರಚಿಸಿದ್ದ 14 ಟಾಸ್ಕ್​ಫೋರ್ಸ್​ ಮುಖ್ಯಸ್ಥರು ಭಾಗಿಯಾಗಿದ್ರು. ಈ ವೇಳೆ ಲಾಕ್​ಡೌನ್ ಅಂತಿಮ ನಿಯಮಗಳ ರಚನೆ ಬಗ್ಗೆ ಚರ್ಚೆ ನಡೆಸಿದ್ರು. ಅಷ್ಟೇ ಅಲ್ಲದೆ ಹಿರಿಯ ಸಚಿವ್ರ ಅಭಿಪ್ರಾಯ ಪಡೆದಿರೋ ಮೋದಿ, ಲಾಕ್​ಡೌನ್ 4.O ಮಾರ್ಗಸೂಚಿ ರೂಪಿಸುವಂತೆ ಗೃಹ ಇಲಾಖೆಗೆ ಸೂಚಿಸಿದ್ದಾರೆ.

ಇಂದು ಫೈನಲ್ ಆಗುತ್ತಾ ಲಾಕ್​ಡೌನ್ 4.O ರೂಲ್ಸ್? ಇನ್ನು 4ನೇ ಹಂತದ ಲಾಕ್​ಡೌನ್​ನ ಮಾರ್ಗಸೂಚಿ ಇಂದು ಸಂಜೆಯೊಳಗೆ ಫೈನಲ್ ಆಗೋ ಸಾಧ್ಯತೆಯಿದೆ. ಈಗಾಗ್ಲೇ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರಗಳ ವರದಿ ತಲುಪಿದ್ದು, ಎಲ್ಲಾ ರಾಜ್ಯಗಳ ಲಾಕ್​ಡೌನ್ ವಿನಾಯಿತಿ, ಜೋನ್​​ಗಳ ಮರುವಿಂಗಡಣೆ ವಿಧಾನಗಳ ಬಗ್ಗೆ ವರದಿ ಪಡೆಯಲಾಗಿದೆ. ರಾಜ್ಯ ಸರ್ಕಾರಗಳ ವರದಿ ಪರಿಶೀಲಿಸಲಿರೋ ಗೃಹ ಇಲಾಖೆ ಅಂತಿಮ ನಿರ್ಧಾರ ಕೈಗೊಳ್ಳುತ್ತೆ.

ಹೊಸ ರೂಲ್ಸ್ ಏನಿರಬಹುದು? ಕಂಟೇನ್ಮೆಂಟ್ ಜೋನ್​ಗಳಲ್ಲಿ ಮಾತ್ರ ಲಾಕ್​ಡೌನ್ ಮುಂದುವರಿಸೋ ಸಾಧ್ಯತೆಯಿದೆ. ಕಂಟೇನ್ಮೆಂಟ್ ಜೋನ್ ಬಿಟ್ಟು ಬೇರೆ ವಲಯಗಳಲ್ಲಿ ಆರ್ಥಿಕ ಚಟುವಟಿಕೆಗೆ ಅವಕಾಶ ಸಿಗಬಹುದು. ಕಂಪನಿ, ಕಾರ್ಖಾನೆಗಳಲ್ಲಿ ಶೇ.33ರ ಬದಲು ಶೇ.50ರಷ್ಟು ಕಾರ್ಮಿಕರನ್ನ ಬಳಸಿಕೊಳ್ಳಲು ಸೂಚಿಸಬಹುದು.

ಇನ್ನು ನಗರಗಳಲ್ಲಿ & ಗ್ರಾಮೀಣ ಭಾಗದಲ್ಲಿ ಸಾರ್ವಜನಿಕ ಸಂಚಾರ ಆರಂಭಿಸಬಹುದು. ದೊಡ್ಡ ನಗರಗಳಿಗೆ ಆರಂಭವಾದ ರೈಲು ಸಂಚಾರ ಸಣ್ಣ ನಗರಗಳಿಗೂ ವಿಸ್ತರಣೆಯಾಗ್ಬಹುದು. ಅಷ್ಟೇ ಅಲ್ಲದೆ ದೊಡ್ಡ ದೊಡ್ಡ ನಗರಗಳಿಗೆ ದೇಶೀಯ ವಿಮಾನ ಸಂಚಾರ ಆರಂಭ ಸಾಧ್ಯತೆಯಿದೆ. ಜೊತೆಗೆ ನಗರಗಳಲ್ಲಿ ಆಟೋ, ಕ್ಯಾಬ್​ಗಳ ಸಂಚಾರಕ್ಕೆ ಅವಕಾಶ ಸಿಗ್ಬಹುದು. ಹಾಗೂ ಬಹುತೇಕ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ನೀಡುವ ಸಾಧ್ಯತೆಯಿದೆ.

ಒಟ್ನಲ್ಲಿ ಲಾಕ್​ಡೌನ್ 3.Oನ ಅವಧಿ ಮುಗಿಯೋ ಮುನ್ನವೇ ಲಾಕ್​ಡೌನ್ 4.Oನ ಹೊಸ ರೂಲ್ಸ್ ಘೋಷಣೆ ಮಾಡಲಾಗುತ್ತೆ ಅಂತಾ ಮೋದಿ ಹೇಳಿದ್ದಾರೆ. ಹೀಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಇಂದು ಅಥ್ವಾ ನಾಳೆ ಹೊಸ ಮಾರ್ಗಸೂಚಿ ಘೋಷಿಸೋ ಸಾಧ್ಯತೆಯಿದ್ದು, 4ನೇ ಹಂತದ ಲಾಕ್​​ಡೌನ್​ನ ರೂಪುರೇಷೆ ಅದೇನ್ ವಿಭಿನ್ನವಾಗಿರುತ್ತೆ ಅನ್ನೋದನ್ನ ಕಾದು ನೋಡ್ಬೇಕಿದೆ.