ಕೊರೊನಾ ಮಧ್ಯೆ ತುಮಕೂರಲ್ಲಿ ಶುರುವಾಯ್ತು ಮತ್ತೊಂದು ಹಾವಳಿ

|

Updated on: Jul 05, 2020 | 7:02 PM

ತುಮಕೂರು: ಜಿಲ್ಲೆಯಲ್ಲಿ ಇತ್ತೀಚೆಗೆ ನಕಲಿ ಔಷಧಿ ಮಾರುವವರ ಹಾವಳಿ ಹೆಚ್ಚಾಗಿದೆ. ಎಲ್ಲೆಂದರಲ್ಲಿ ಎಲ್ಲಾ ಕಾಯಿಲೆಗಳಿಗೆ ಮದ್ದು ನೀಡ್ತೀವಿ ಅಂತಾ ನಕಲಿ ಔಷಧಿ ನೀಡಿ ಜನರಿಗೆ ಮೋಸ ಮಾಡ್ತಿದ್ದಾರೆ. ಅಂಥದ್ದೇ ಒಂದು ಘಟನೆ ಜಿಲ್ಲೆಯ ಪಾವಗಡದಲ್ಲಿ ‌ನಡೆದಿದೆ. ಪಾವಗಡ ಪಟ್ಟಣದ ಶಾರದಾ ವಿದ್ಯಾಪೀಠದ ಮುಂಭಾಗದಲ್ಲಿ ಕೆಲವರು ತಾಲೂಕು ಮತ್ತು ಆಂಧ್ರದಿಂದ ಬರುವ ಜನರಿಗೆ ಬಾಳೆಹಣ್ಣಿನಲ್ಲಿ ನಾಟಿ ಔಷಧಿ ನೀಡುವುದಾಗಿ ತಿಳಿಸಿ ಅವರಿಂದ ಸಾವಿರಾರು ರೂಪಾಯಿ ಹಣ ವಸೂಲಿ ಮಾಡುತ್ತಿದ್ದಾರಂತೆ. ಈ ಬಗ್ಗೆ ಸ್ಥಳೀಯರು ತಹಶೀಲ್ದಾರ್ ಮತ್ತು ತಾಲೂಕು ವೈದ್ಯಾಧಿಕಾರಿಗಳಿಗೆ […]

ಕೊರೊನಾ ಮಧ್ಯೆ ತುಮಕೂರಲ್ಲಿ ಶುರುವಾಯ್ತು ಮತ್ತೊಂದು ಹಾವಳಿ
Follow us on

ತುಮಕೂರು: ಜಿಲ್ಲೆಯಲ್ಲಿ ಇತ್ತೀಚೆಗೆ ನಕಲಿ ಔಷಧಿ ಮಾರುವವರ ಹಾವಳಿ ಹೆಚ್ಚಾಗಿದೆ. ಎಲ್ಲೆಂದರಲ್ಲಿ ಎಲ್ಲಾ ಕಾಯಿಲೆಗಳಿಗೆ ಮದ್ದು ನೀಡ್ತೀವಿ ಅಂತಾ ನಕಲಿ ಔಷಧಿ ನೀಡಿ ಜನರಿಗೆ ಮೋಸ ಮಾಡ್ತಿದ್ದಾರೆ. ಅಂಥದ್ದೇ ಒಂದು ಘಟನೆ ಜಿಲ್ಲೆಯ ಪಾವಗಡದಲ್ಲಿ ‌ನಡೆದಿದೆ.

ಪಾವಗಡ ಪಟ್ಟಣದ ಶಾರದಾ ವಿದ್ಯಾಪೀಠದ ಮುಂಭಾಗದಲ್ಲಿ ಕೆಲವರು ತಾಲೂಕು ಮತ್ತು ಆಂಧ್ರದಿಂದ ಬರುವ ಜನರಿಗೆ ಬಾಳೆಹಣ್ಣಿನಲ್ಲಿ ನಾಟಿ ಔಷಧಿ ನೀಡುವುದಾಗಿ ತಿಳಿಸಿ ಅವರಿಂದ ಸಾವಿರಾರು ರೂಪಾಯಿ ಹಣ ವಸೂಲಿ ಮಾಡುತ್ತಿದ್ದಾರಂತೆ. ಈ ಬಗ್ಗೆ ಸ್ಥಳೀಯರು ತಹಶೀಲ್ದಾರ್ ಮತ್ತು ತಾಲೂಕು ವೈದ್ಯಾಧಿಕಾರಿಗಳಿಗೆ ದೂರು ನೀಡಿದ್ದರೂ ಏನು ಪ್ರಯೋಜನವಾಗಿಲ್ಲವಂತೆ.

ಈ ಮಧ್ಯೆ ಮಹಾಮಾರಿಯ ಸಂದರ್ಭದಲ್ಲಿಯೂ ಸಹ ನಾಟಿ ಔಷಧಿ ನೀಡುತ್ತೇವೆ ಎಂದು ಈ ತಂಡವು ಹೇಳಿಕೊಂಡಿದ್ದಾರಂತೆ. ಹಾಗಾಗಿ ಬಹಳಷ್ಟು ಜನರು ಇಲ್ಲಿಗೆ ಬರುತ್ತಿದ್ದಾರೆ. ಇದಲ್ಲದೆ, ನೆರೆಯ ಆಂಧ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುತ್ತಿರುವುದರಿಂದ ಕೊರೊನಾ ಹರಡುವ ಸಂಭವವೂ ಇದೆ. ಇಷ್ಟಿದ್ದರೂ ಆಡಳಿತವಾಗಲಿ ಅಥವಾ ಪೊಲೀಸ್ ಇಲಾಖೆಯಾಗಲಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂಬುದು ಸ್ಥಳೀಯರ ಮಾತು.

ಸ್ಥಳೀಯರೇ ಖುದ್ದು ಈ ಬಗ್ಗೆ ಪ್ರಶ್ನಿಸಲು ಔಷಧಿ ಮಾರುವವರ ಬಳಿ ಹೋದರೇ ಅವರನ್ನ ಮನಬಂದಂತೆ ‌ನಿಂದಿಸುತ್ತಾರಂತೆ. ಸದ್ಯ ಪಾವಗಡದಲ್ಲಿ ಹಾಗೂ ಪಕ್ಕದ ಆಂಧ್ರದಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಇಂಥ ವೇಳೆಯಲ್ಲಿ ನಾಟಿ ಔಷಧಿ ನೀಡುವ ನೆಪದಲ್ಲಿ ಜನರಿಗೆ ಮೋಸ ಮಾಡುತ್ತಿರುವುದು ಎಷ್ಟು ಸರಿ‌ ಅನ್ನೋ ಮಾತುಗಳು ಕೇಳಿಬರುತ್ತವೆ. ಹೀಗಾಗಿ, ಇವರ ವಿರುದ್ಧ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

Published On - 7:00 pm, Sun, 5 July 20