
ಬೆಂಗಳೂರು: ಕೊರೊನಾ ಹೆಮ್ಮಾರಿಯಿಂದಾಗಿ ಹಬ್ಬ ಹರಿದಿನ ಆಚರಿಸುವುದು ಕೂಡಾ ಈಗ ದುಸ್ತರವಾಗುತ್ತಿದೆ. ಇದಕ್ಕೆ ಲೆಟೆಸ್ಟ್ ಸೇರ್ಪಡೆ ಬಕ್ರೀದ್ ಹಬ್ಬ. ಬಕ್ರೀದ್ ಹಬ್ಬದಲ್ಲಿ ಕುರಿಗಳಿಗೆ ಭಾರಿ ಬೇಡಿಕೆಯಿರುತ್ತದೆ. ಆದ್ರೆ ಬಕ್ರೀದ್ ಹಬ್ಬಕ್ಕೂ ಈಗ ಕೊರೊನಾಘಾತ ತಟ್ಟಿದೆ.
ಹಾಗಾಗಿ, ಬೆಂಗಳೂರಿನ ಈದ್ಗಾ ಮೈದಾನದಲ್ಲಿ ನಡೆಯುತ್ತಿದ್ದ ಕುರಿಗಳ ಮಾರಾಟಕ್ಕೆ ಬ್ರೇಕ್ ಹಾಕಲಾಗಿದೆ. ಈ ಬಾರಿ ಕುರಿ ಮಾರಾಟ ಮಾಡುವಂತಿಲ್ಲ ಎಂದು ಈದ್ಗಾ ಮೈದಾನದಲ್ಲಿ ನಡೆಯುತ್ತಿದ್ದ ಕುರಿ ಮಾರಾಟಕ್ಕೆ ಕೊಕ್ಕೆ ಹಾಕಲಾಗಿದೆ. ಬಾಗಲಕೋಟೆ, ಜಮಖಂಡಿ, ಮಳವಳ್ಳಿ, ಮಂಡ್ಯ, ಮದ್ದೂರು, ಹೊಸಕೋಟೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಕುರಿ ಮಾರಾಟಕ್ಕೆ ಬಂದವರು ಈಗ ವಾಪಸಾಗುತ್ತಿದ್ದಾರೆ.
ಬೆಂಗಳೂರಿನಲ್ಲಿ ಕೊರೊನಾ ಹೆಚ್ಚಳ ಹಿನ್ನೆಲೆಯಲ್ಲಿ ಪೊಲೀಸರು ಈದ್ಗಾ ಮೈದಾನದಲ್ಲಿ ಕುರಿ ಮಾರಾಟಕ್ಕೆ ಅವಕಾಶ ನೀಡಿಲ್ಲ. ಬೆಳಿಗ್ಗೆಯಿಂದಲೇ ಆರಂಭವಾಗಿದ್ದ ಕುರಿ ಮಾರಾಟ ಸಂತೆಯನ್ನ ಪೊಲೀಸರು ತೆರವುಗೊಳಿಸಿದ್ದಾರೆ. ಹೀಗಾಗಿ ಲಕ್ಷ ಲಕ್ಷ ಬೆಲೆಯ ಕುರಿಗಳನ್ನ ಮಾರಾಟಕ್ಕೆ ಅಂತಾ ತಂದಿದ್ದ ರೈತರು ಈಗ ನಿರಾಶೆಯಿಂದ ವಾಪಸ್ ಹೋಗುತ್ತಿದ್ದಾರೆ.
Published On - 2:20 pm, Fri, 24 July 20