ಸೋಂಕಿತರ ಚಿಕಿತ್ಸೆಗೆ ವೈದ್ಯರನ್ನು ಕೊಡದಿದ್ರೆ ಆತ್ಮಹತ್ಯೆ: ಕಾರ್ಪೋರೇಟರ್‌ ಬೆದರಿಕೆ

[lazy-load-videos-and-sticky-control id=”MvC_W_tKxgk”] ಬೆಂಗಳೂರು: ತಮ್ಮ ವಾರ್ಡ್‌ನಲ್ಲಿ ಕೋವಿಡ್ ನಿರ್ವಹಣೆಗೆ ಬಿಬಿಎಂಪಿ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಕಾರ್ಪೋರೇಟರ್‌ ಒಬ್ಬರು ಸೀಮೆ ಎಣ್ಣೆ ತಂದು ಆತ್ಮಹತ್ಯೆ ಬೆದರಿಕೆ ಹಾಕಿದ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ. ಹೌದು ಯಶವಂತಪುರ ಕಾರ್ಪೊರೇಟರ್ ಜಿ ಕೆ ವೆಂಕಟೇಶ್ ಅವರೇ ಹೀಗೆ ಬೆದರಿಕೆ ಹಾಕಿರೋದು. ಆರ್ ಆರ್ ನಗರ ಬಿಬಿಎಂಪಿ ಜೆಸಿ ಕಚೇರಿಗೆ ಸೀಮೆ ಎಣ್ಣೆ ಕ್ಯಾನ್ ತಂದಿದ್ದ ಜಿಕೆ ವೆಂಕಟೇಶ್, ತಮ್ಮ ವಾರ್ಡ್ ನಲ್ಲಿ 72 ಮಂದಿಗೆ ಕರೋನಾ ಬಂದಿದೆ. 5 ಜನ […]

ಸೋಂಕಿತರ ಚಿಕಿತ್ಸೆಗೆ ವೈದ್ಯರನ್ನು ಕೊಡದಿದ್ರೆ ಆತ್ಮಹತ್ಯೆ: ಕಾರ್ಪೋರೇಟರ್‌ ಬೆದರಿಕೆ
Follow us
Guru
| Updated By:

Updated on:Jul 25, 2020 | 8:16 PM

[lazy-load-videos-and-sticky-control id=”MvC_W_tKxgk”]

ಬೆಂಗಳೂರು: ತಮ್ಮ ವಾರ್ಡ್‌ನಲ್ಲಿ ಕೋವಿಡ್ ನಿರ್ವಹಣೆಗೆ ಬಿಬಿಎಂಪಿ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಕಾರ್ಪೋರೇಟರ್‌ ಒಬ್ಬರು ಸೀಮೆ ಎಣ್ಣೆ ತಂದು ಆತ್ಮಹತ್ಯೆ ಬೆದರಿಕೆ ಹಾಕಿದ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ.

ಹೌದು ಯಶವಂತಪುರ ಕಾರ್ಪೊರೇಟರ್ ಜಿ ಕೆ ವೆಂಕಟೇಶ್ ಅವರೇ ಹೀಗೆ ಬೆದರಿಕೆ ಹಾಕಿರೋದು. ಆರ್ ಆರ್ ನಗರ ಬಿಬಿಎಂಪಿ ಜೆಸಿ ಕಚೇರಿಗೆ ಸೀಮೆ ಎಣ್ಣೆ ಕ್ಯಾನ್ ತಂದಿದ್ದ ಜಿಕೆ ವೆಂಕಟೇಶ್, ತಮ್ಮ ವಾರ್ಡ್ ನಲ್ಲಿ 72 ಮಂದಿಗೆ ಕರೋನಾ ಬಂದಿದೆ. 5 ಜನ ಕೊರೊನಾದಿಂದ ಸಾವಿಗೀಡಾಗಿದ್ದಾರೆ.

ಪರಿಸ್ಥಿತಿ ನಿರ್ವಹಿಸಲು ನಮ್ಮ ಬಳಿ ಡಾಕ್ಟರ್ಸ್ ಆಗಲಿ ನರ್ಸ್ ಆಗಲಿ ಇಲ್ಲ. ಕೇವಲ ಒಬ್ಬರು ಡಾಕ್ಟರ್ ಮತ್ತು ಓರ್ವ ನರ್ಸ್ ಇದ್ದಾರೆ. ಹೀಗಾಗಿ ಪಿಪಿಇ ಕಿಟ್, ಅಡಿಷನಲ್ ಡಾಕ್ಟರ್ಸ್, ಆಶಾ ಕಾರ್ಯಕರ್ತೆಯರು ಹಾಗೂ ಸ್ಟಾಫ್ ನರ್ಸ್‌ಗಳನ್ನು ತಮ್ಮ ವಾರ್ಡ್‌ಗೆ ಕಳಿಸಿ, ಇಲ್ಲದಿದ್ರೆ ಇಲ್ಲಿಯೇ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದರು.

ಕಾರ್ಪೊರೇಟರ್ ಸೀಮೆ ಎಣ್ಣೆ ತರ್ತಿದ್ದಂತೆ ಎಚ್ಚೆತ್ತುಕೊಂಡ ಬಿಬಿಎಂಪಿ ಆರ್ ಆರ್ ನಗರ ವಲಯ ಅಧಿಕಾರಿ ಜಗದೀಶ್, ನಿಮ್ಮ ಎಲ್ಲಾ ಸಮಸ್ಯೆ ಬಗೆಹರಿಸುತ್ತೇವೆ, ಫುಡ್ ಕಿಟ್ ಕೂಡಾ ಕೊಡಿಸುತ್ತೇವೆ ಎಂದು ಭರವಸೆ ನೀಡಿದರು. ಆಗ ಪ್ರತಿಭಟನೆ ಕೈಬಿಟ್ಟ ಕಾರ್ಪೊರೇಟರ್ ಜಿಕೆ ವೆಂಕಟೇಶ್, ಡಾಕ್ಟರ್, ರೇಷನ್ ಕಿಟ್ ಕೊಟ್ಟಿಲ್ಲ ಅಂದ್ರೆ ಮತ್ತೆ ಬಂದು ಜೆಸಿ ಕಚೇರಿ ಮುಂದೆ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಎಚ್ಚರಿಸಿದರು.

Published On - 2:36 pm, Fri, 24 July 20

ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?