ಬೆಂಗಳೂರು: ನಗರದ ಕೆಲ ಖಾಸಗಿ ಆಸ್ಪತ್ರೆಗಳಿಂದ ರೋಗಿಗಳ ಸುಲಿಗೆ ಎಗ್ಗಿಲ್ಲದೆ ನಡೆದಿದೆ. ಕೊರೊನಾ ಟ್ರೀಟ್ಮೆಂಟ್ ಹೆಸರಲ್ಲಿ ಲಕ್ಷ ಲಕ್ಷ ಹಣ ಬಾಚಿಕೊಳ್ತಿವೆ. ಇಂಥದ್ದೇ ಒಂದು ಆರೋಪ ಶೇಷಾದ್ರಿಪುರದಲ್ಲಿರುವ ಅಪೋಲೊ ಆಸ್ಪತ್ರೆ ವಿರುದ್ಧ ಕೇಳಿಬಂದಿದೆ.
ಕೊರೊನಾ ಪಾಸಿಟಿವ್ ಬಂದಿದ್ದ ರೋಗಿ ಚಿಕಿತ್ಸೆಗೆಂದು ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದರು. ಈ ನಡುವೆ ಆಸ್ಪತ್ರೆಯು ರೋಗಿಗೆ ಬರೋಬ್ಬರಿ 5 ಲಕ್ಷ ರೂಪಾಯಿಯ ಬಿಲ್ ಕೈಗಿಟ್ಟಿದೆ. ಈ ಮೂಲಕ ಆಸ್ಪತ್ರೆಯ ಆಡಳಿತ ಮಂಡಳಿ ಸರ್ಕಾರದ ಆದೇಶವನ್ನು ಸಂಪೂರ್ಣವಾಗಿ ಗಾಳಿಗೆ ತೂರಿದೆ ಎಂದು ತಿಳಿದುಬಂದಿದೆ.
ಇನ್ನು ಆಸ್ಪತ್ರೆಯ ಬಿಲ್ ಕಂಡು ಶಾಕ್ ಆದ ಸೋಂಕಿತ ವ್ಯಕ್ತಿ, ಆಸ್ಪತ್ರೆಯವರು ನಿಗದಿತ ದರಕ್ಕಿಂತಲೂ ಹೆಚ್ಚು ಹಣ ಕೇಳುತ್ತಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಜೊತೆಗೆ, ಈಗಾಗಲೇ 4 ಲಕ್ಷ ಬಿಲ್ ಕಟ್ಟಿಸಿಕೊಂಡಿರೋ ಆಸ್ಪತ್ರೆ ಇನ್ನುಳಿದ 1 ಲಕ್ಷ ಹಣವನ್ನು ಕಟ್ಟುವಂತೆ ಒತ್ತಾಯ ಮಾಡುತ್ತಿದೆ ಎಂದು ಹೇಳಿದ್ದಾರೆ. ಹಾಗಾಗಿ, ರೋಗಿಯ ಕುಟುಂಬಸ್ಥರು ಆಸ್ಪತ್ರೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
Published On - 10:33 am, Wed, 29 July 20