ಹಾಸನ: ಕೊರೊನಾ ಕರ್ತವ್ಯ ಒತ್ತಡದಿಂದ ವೈದ್ಯ ಮೃತಪಟ್ಟಿರುವ ಆರೋಪ ಹಾಸನದಲ್ಲಿ ಕೇಳಿ ಬಂದಿದೆ. ನಿರಂತರವಾಗಿ ರಜೆಯೇ ಇಲ್ಲದೆ ಮೂರು ತಿಂಗಳಿನಿಂದ ಕೆಲಸ ಮಾಡಿ ಒತ್ತಡಕ್ಕೆ ಒಳಗಾಗಿ ಸಾವು ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಡಾ.ಶಿವಕಿರಣ್ ಆಲೂರು ತಾಲೂಕಿನ ವೈದ್ಯ. ವಾರದ ಹಿಂದೆ ಕರ್ತವ್ಯದ ವೇಳೆಯೇ ಕುಸಿದು ಬಿದ್ದಿದ್ದರು. ಚಿಕಿತ್ಸೆ ಫಲಿಸದೆ ಇಂದು ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಮಹಾಮಾರಿ ಕೊರೊನಾ ವಿರುದ್ಧ ವೈದ್ಯರು ನಿರಂತರ ಯುದ್ಧ ಮಾಡುತ್ತಿದ್ದಾರೆ. ಈ ಯುದ್ಧದಲ್ಲಿ ವೈದ್ಯರಿಗೆ ರಜೆಯೇ ಸಿಗದಂತಾಗಿದೆ. ಹೀಗಾಗಿ ಒತ್ತಡ ನಡುವೆ ವೈದ್ಯರ ಕೆಲಸ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಈಗ ಸಂಭವಿಸಿರುವ ಸಾವು ಇದೇ ಕಾರಣದಿಂದ ಎಂಬ ಆರೋಪಗಳಿದ್ದು, ಸೂಕ್ತ ಪರಿಹಾರಕ್ಕೆ ವೈದ್ಯಾಧಿಕಾರಿಗಳ ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
Published On - 11:06 am, Wed, 10 June 20