ಕಾರ್ಪೊರೇಟರ್ ಗಂಡ ತಪಾಸಣೆಗೆ ಬಂದಾಗ ಸಗಣಿ ಎಸೆದರು

|

Updated on: May 13, 2020 | 1:37 PM

ಬೆಂಗಳೂರು: ಕೆಲ ಕಿಡಿಗೇಡಿಗಳು ಕಾರ್ಪೊರೇಟರ್ ಪತಿ ಮೇಲೆ ಸಗಣಿ ಎಸೆದಿರುವ ಘಟನೆ ಕಲಾಸಿಪಾಳ್ಯದಲ್ಲಿ ನಡೆದಿದೆ. ಕಲಾಸಿಪಾಳ್ಯ ವಾರ್ಡ್ ಕಾರ್ಪೊರೇಟರ್ ಆಗಿರುವ ಪ್ರತಿಭಾ ಧನರಾಜ್​ರ ಪತಿ ಧನರಾಜ್ ಕಲಾಸಿಪಾಳ್ಯದಲ್ಲಿ ಕೆಲವರು ಅಕ್ರಮವಾಗಿ ಅಂಗಡಿಗಳನ್ನ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ಬಿಬಿಎಂಪಿ ಅಧಿಕಾರಿಗಳೊಂದಿಗೆ ತಪಾಸಣೆ‌ಗೆ ಹೋಗಿದ್ದಾಗ ಕಿಡಿಗೇಡಿಗಳು ಕಾರ್ಪೋರೇಟರ್ ಪತಿ ಧನರಾಜ್ ಹಾಗೂ ಮಗನ ಮೇಲೆ ಸಗಣಿ ಎಸೆದಿದ್ದಾರೆ. ಕೆಲ ಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕಿಡಿಗೇಡಿಗಳ ಕೃತ್ಯ ಖಂಡಿಸಿ ಧನರಾಜ್ ಬೆಂಬಲಿಗರು ಕಲಾಸಿಪಾಳ್ಯದ ರಸ್ತೆಯಲ್ಲಿ […]

ಕಾರ್ಪೊರೇಟರ್ ಗಂಡ ತಪಾಸಣೆಗೆ ಬಂದಾಗ ಸಗಣಿ ಎಸೆದರು
Follow us on

ಬೆಂಗಳೂರು: ಕೆಲ ಕಿಡಿಗೇಡಿಗಳು ಕಾರ್ಪೊರೇಟರ್ ಪತಿ ಮೇಲೆ ಸಗಣಿ ಎಸೆದಿರುವ ಘಟನೆ ಕಲಾಸಿಪಾಳ್ಯದಲ್ಲಿ ನಡೆದಿದೆ. ಕಲಾಸಿಪಾಳ್ಯ ವಾರ್ಡ್ ಕಾರ್ಪೊರೇಟರ್ ಆಗಿರುವ ಪ್ರತಿಭಾ ಧನರಾಜ್​ರ ಪತಿ ಧನರಾಜ್ ಕಲಾಸಿಪಾಳ್ಯದಲ್ಲಿ ಕೆಲವರು ಅಕ್ರಮವಾಗಿ ಅಂಗಡಿಗಳನ್ನ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ಹೀಗಾಗಿ ಬಿಬಿಎಂಪಿ ಅಧಿಕಾರಿಗಳೊಂದಿಗೆ ತಪಾಸಣೆ‌ಗೆ ಹೋಗಿದ್ದಾಗ ಕಿಡಿಗೇಡಿಗಳು ಕಾರ್ಪೋರೇಟರ್ ಪತಿ ಧನರಾಜ್ ಹಾಗೂ ಮಗನ ಮೇಲೆ ಸಗಣಿ ಎಸೆದಿದ್ದಾರೆ. ಕೆಲ ಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕಿಡಿಗೇಡಿಗಳ ಕೃತ್ಯ ಖಂಡಿಸಿ ಧನರಾಜ್ ಬೆಂಬಲಿಗರು ಕಲಾಸಿಪಾಳ್ಯದ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ಮೊದಲೇ ಸಗಣಿ ಪಾಕ್ಯೇಟ್​ಗಳನ್ನ ರೆಡಿ ಮಾಡಿ ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

Published On - 8:16 am, Wed, 13 May 20