
ಕಲಬುರಗಿ: ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದೆ. ರಸ್ತೆಗಳು, ಮೆನೆಗಳಲ್ಲಿ ನೀರು ತುಂಬಿ ಹರಿಯುತ್ತಿದೆ. ಈ ನಡುವೆ ಮೂಕ ಪ್ರಾಣಿಗಳ ರೋಧನೆಯನ್ನ ನೋಡುವವರಿಲ್ಲದಂತಾಗಿದೆ. ಮಳೆಯ ಪ್ರವಾಹದಲ್ಲಿ ರಸ್ತೆ ದಾಟುವಾಗ ನೀರಿನ ರಭಸಕ್ಕೆ ಹಸು ಕೊಚ್ಚಿ ಹೋಗಿ ನಂತರ ಹರಸಾಹಸದಿಂದ ದಡ ಸೇರಿದ ಘಟನೆ ಕಲಬುರಗಿ ನಗರದ ತೇಲ್ಕರ್ ಕಾಲೋನಿಯಲ್ಲಿ ನಡೆದಿದೆ.
ಅಲ್ಲಿನ ಜನ ಪ್ರವಾಹಗಳಿಗೆ ತುತ್ತಾಗಿ ಸಾವು ನೋವುಗಳನ್ನು ಅನುಭವಿಸುತ್ತಲೇ ಇರುತ್ತಾರೆ. ಆದರೆ ಈ ಬಗ್ಗೆ ಯಾವುದೇ ಮುಂಜಾಗ್ರತೆ ಕ್ರಮಗಳನ್ನು ಮಾತ್ರ ತೆಗೆದುಕೊಳ್ಳುತ್ತಿಲ್ಲ. ಮಳೆ ಬಂದಾಗ ಅತಿ ಹೆಚ್ಚು ರೋಧನೆ ಅನುಭವಿಸುವುದು ಈ ಮೂಕ ಪ್ರಾಣಿಗಳು..
Published On - 2:48 pm, Wed, 14 October 20