ನೀರು ಕುಡಿಯಲು ನದಿಗೆ ಇಳಿದಿದ್ದ ಬಾಲಕ ಮೊಸಳೆ ಪಾಲು..

ಕೃಷ್ಣ ನದಿಯಲ್ಲಿ‌ ಮೊಸಳೆ ದಾಹಕ್ಕೆ ಬಾಲಕ ಬಲಿಯಾಗಿರುವ ಹೃದಯ ವಿದ್ರಾವಕ ಘಟನೆ ಡೊಂಗಾರಾಂಪುರ ಗ್ರಾಮದಲ್ಲಿ ನಡೆದಿದೆ. ಮಲ್ಲಿಕಾರ್ಜುನ (12) ಮೊಸಳೆಗೆ ಬಲಿಯಾದ ಬಾಲಕ.

ನೀರು ಕುಡಿಯಲು ನದಿಗೆ ಇಳಿದಿದ್ದ ಬಾಲಕ ಮೊಸಳೆ ಪಾಲು..
ಕೃಷ್ಣ ನದಿಯಲ್ಲಿ‌ ಮೊಸಳೆ ದಾಹಕ್ಕೆ ಬಾಲಕ ಬಲಿ

Updated on: Dec 03, 2020 | 8:02 AM

ರಾಯಚೂರು: ಕೃಷ್ಣ ನದಿಯಲ್ಲಿ‌ ಮೊಸಳೆ ದಾಹಕ್ಕೆ ಬಾಲಕ ಬಲಿಯಾಗಿರುವ ಹೃದಯ ವಿದ್ರಾವಕ ಘಟನೆ ಡೊಂಗಾರಾಂಪುರ ಗ್ರಾಮದಲ್ಲಿ ನಡೆದಿದೆ. ಮಲ್ಲಿಕಾರ್ಜುನ (12) ಮೊಸಳೆಗೆ ಬಲಿಯಾದ ಬಾಲಕ.

ಬುಧವಾರದಂದು 12 ವರ್ಷದ ಬಾಲಕ ಮಲ್ಲಿಕಾರ್ಜುನ ತನ್ನ ಸ್ನೇಹಿತರೊಂದಿಗೆ ದನ ಮೇಯಿಸಲು ಬಂದಿದ್ದ. ಈ ವೇಳೆ ಅವನಿಗೆ ಬಾಯಾರಿಕೆಯಾದ ಹಿನ್ನೆಲೆಯಲ್ಲಿ ಕೃಷ್ಣ ನದಿಯಲ್ಲಿ ನೀರು‌ ಕುಡಿಯಲು ಇಳಿದಿದ್ದ. ಆಗ ಮೊಸಳೆಯೊಂದು ಅವನ ಮೇಲೆ ದಾಳಿ ನಡೆಸಿದೆ. ಇದನ್ನು ನೋಡುತ್ತಿದ್ದ ಮಲ್ಲಿಕಾರ್ಜುನನ ಸ್ನೇಹಿತರು ವಿಷಯವನ್ನು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಬಾಲಕನನ್ನು ಎಳೆದೊಯ್ದ ಮೊಸಳೆ ಬಾಲಕನ ದೇಹವನ್ನ ಸಂಪೂರ್ಣವಾಗಿ ತಿಂದು ತಲೆ ಬುರುಡೆ ಮಾತ್ರ ಬಿಟ್ಟಿದೆ. ನಿನ್ನೆ ರಾತ್ರಿ ಬಾಲಕನ ತಲೆ ಬುರುಡೆ ಪತ್ತೆಯಾಗಿದೆ.

ನೀರು ಕುಡಿಯಲು ಬಂದವ ಮೊಸಳೆಗೆ ಆಹಾರವಾದ:
ವಿದ್ಯಾಗಮ್ ಯೋಜನೆ ಬಂದ್ ಆದ ನಂತರ ಮಲ್ಲಿಕಾರ್ಜುನ ನಿತ್ಯ ಕೂಲಿ ಕೆಲಸಕ್ಕೆ ತೆರಳ್ತಿದ್ದ. ಆದರೆ ಬಾಲ ಕಾರ್ಮಿಕರನ್ನ ಪತ್ತೆ ಹಚ್ಚಿ‌ ಕೇಸ್ ದಾಖಲಿಸ್ತಿದ್ದ ಹಿನ್ನೆಲೆಯಲ್ಲಿ ನಿನ್ನೆ ಕೂಲಿ ಕೆಲಸ ಬಿಟ್ಟು ದನ ಕಾಯಲು ತೆರಳಿದ್ದ. ಮಧ್ಯಾಹ್ನ ಉಟ ಮಾಡಿ ನದಿ ದಂಡೆಯಲ್ಲಿ ನೀರು ಕುಡಿಯಲು ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ಯಾಪಲದಿನ್ನಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಹಿರ್ದೆಸೆಗೆ ನದಿ ತೀರಕ್ಕೆ ಹೋದವ ಮೊಸಳೆಗೆ ತುತ್ತಾದ, ಎಲ್ಲಿ?