ಯಾರ ಪಾಲಾಗುತ್ತೆ ಹೈದರಾಬಾದ್ ಮಹಾನಗರ ಪಾಲಿಕೆ? ನಾಳೆ 150 ವಾರ್ಡ್ಗಳ ಮತ ಎಣಿಕೆ
ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ ಈ ಭಾರಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಘಟಾನುಘಟಿ ನಾಯಕರು ತಮ್ಮ ಪಕ್ಷದ ಅಭ್ಯರ್ಥಿಯ ಪರವಾಗಿ ಅಖಾಡದಲ್ಲಿ ಪ್ರಚಾರ ನಡೆಸಿದ್ರು. ಆದ್ರೆ ಆಗಿರೋ ಮತದಾನ ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.
ಹೈದರಾಬಾದ್: ತೆಲಂಗಾಣದ ಹೈದರಾಬಾದ್ ಮಹಾನಗರ ಪಾಲಿಕೆಯ ಚುನಾವಣೆಯು ಈ ಬಾರಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಅನೇಕ ಘಟನಾಘಟಿಗಳು ಹೈದರಾಬಾದ್ ಗೆ ಭೇಟಿ ನೀಡಿ, ಪ್ರಚಾರ ಮಾಡಿದ್ದರಿಂದ ಜನರ ಮೇಲೆ ಭಾರಿ ಪರಿಣಾಮ ಬೀರಲಿದೆ.
ಮತದಾರರು ಘಟಾನುಘಟಿಗಳ ಪ್ರಭಾವಕ್ಕೆ ಒಳಗಾಗಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಬಹುದು ಎನ್ನಲಾಗಿತ್ತು. ಆದ್ರೆ, ನಿರೀಕ್ಷೆಗಳೆಲ್ಲ ಹುಸಿಯಾಗಿದ್ದು, ಹೈದರಾಬಾದ್ ಮಹಾನಗರ ಪಾಲಿಕೆಗೆ ನಡೆದ ಎಲೆಕ್ಷನ್‌ನಲ್ಲಿ ಶೇಕಡಾ 46.68ರಷ್ಟು ಮಾತ್ರ ಮತದಾನವಾಗಿದೆ. ಶೇಕಡಾ 50ರಷ್ಟನ್ನು ಸಹ ದಾಟದಿರೋದು ಅನೇಕರ ಅಚ್ಚರಿಗೆ ಕಾರಣವಾಗಿದೆ. ಇದೇ, 4 ರಂದು ಈ ಮತದಾನದ ಫಲಿತಾಂಶ ಹೊರ ಬೀಳಲಿದ್ದು, ಯಾರ ಪರ ಮತದಾರರು ಹಣೆಬರಹ ಬರೆದಿದ್ದಾರೆ ಎನ್ನೋದು ಗೊತ್ತಾಗಲಿದೆ.
ಇಂದು ಹಳೇ ಮಲಕ್ಪೇಟೆ ಪ್ರದೇಶದಲ್ಲಿ ಮರುಮತದಾನ ತಾಂತ್ರಿಕ ದೋಷದಿಂದ ಮತಯಂತ್ರಗಳು ಕೈಕೊಟ್ಟಿದ್ದಕ್ಕೆ ಹಳೇ ಮಲಕ್ಪೇಟೆ ಪ್ರದೇಶದಲ್ಲಿ ಇಂದು ಮರುಮತದಾನ ನಡೆಯಲಿದೆ. ಹಳೇ ಮಲಕ್ಪೇಟೆಯಲ್ಲಿ 54,655 ಮತದಾರರಿದ್ದು, 27,889 ಪುರುಷರು, 26,763 ಮಹಿಳಾ ಮತದಾರರಿದ್ದಾರೆ. ಮತದಾನಕ್ಕಾಗಿ 69 ಮತಗಟ್ಟೆಗಳನ್ನ ತೆರೆಯಲಾಗಿದೆ.
ಒಟ್ನಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಹೈದರಾಬಾದ್ ಮಹಾನಗರ ಪಾಲಿಕೆಯ ಚುನಾವಣೆಯ ಮತದಾನ ನಿರೀಕ್ಷೆಯಂತೆ ಆಗಿಲ್ಲ. ಈ ಕಡಿಮೆ ಮತದಾನ ಆಗಿರೋದು ಯಾರಿಗೆ ವರವಾಗಲಿದೆ, ಯಾರಿಗೆ ಶಾಪ ಆಗಲಿದೆ ಅನ್ನೋದು ನಾಳೆ ಗೊತ್ತಾಗಲಿದೆ.