‘ನಾರಾಯಣಗೌಡ್ರು ಸೀರೆ, ಮೂಗು ಬೊಟ್ಟು ತಂದಿದ್ದಾರೆ, ಆದ್ರೆ ಜನ ಮಾರುಹೋಗಲ್ಲ’

|

Updated on: Nov 24, 2019 | 4:51 PM

ಮಂಡ್ಯ: ಕೆ.ಆರ್.ಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ವ್ಯಾಪಾರ ಮಾಡಲು ಮುಂಬೈಗೆ ಹೋದ್ರು. ಅಲ್ಲಿ ವ್ಯಾಪಾರ ಮಾಡಲು ಆಗಲಿಲ್ಲ. ಇಲ್ಲಿಗೆ ವ್ಯಾಪಾರ ಮಾಡಲು ಬಂದಿದ್ರು. ಈಗ ದೊಡ್ಡ ವ್ಯಾಪಾರ ಮಾಡಿಕೊಂಡಿದ್ದಾರೆ. ಅದೇ ವ್ಯಾಪಾರದ ದುಡ್ಡಲ್ಲಿ ಹಳೆಯ ಮಾಡಲ್ ಸೀರೆ, ರೋಲ್‌ ಗೋಲ್ಡ್ ಮೂಗಬೊಟ್ಟು, ಡೂಪ್ಲಿಕೇಟ್ ರಾಡೋ ವಾಚ್ ಬಂದಿವೆ. ಇವುಗಳಿಗೆ ನಮ್ಮ ಜನ ಮಾರುಹೋಗಲ್ಲ ಎಂದು ಮಾಜಿ ಸಚಿವ ಸಿ.ಎಸ್​.ಪುಟ್ಟರಾಜು ವಾಗ್ದಾಳಿ ನಡೆಸಿದರು. ಕೆ.ಸಿ.ನಾರಾಯಣಗೌಡ ಅವರ ಆಮಿಷಗಳಿಗೆ ಕ್ಷೇತ್ರದ ಜನರು ಮಾರುಹೋಗುವುದಿಲ್ಲ. ಅವರ ವ್ಯಾಪಾರದ ದುಡ್ಡಿನಿಂದ ಒಂದೆರಡು […]

‘ನಾರಾಯಣಗೌಡ್ರು ಸೀರೆ, ಮೂಗು ಬೊಟ್ಟು ತಂದಿದ್ದಾರೆ, ಆದ್ರೆ ಜನ ಮಾರುಹೋಗಲ್ಲ’
Follow us on

ಮಂಡ್ಯ: ಕೆ.ಆರ್.ಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ವ್ಯಾಪಾರ ಮಾಡಲು ಮುಂಬೈಗೆ ಹೋದ್ರು. ಅಲ್ಲಿ ವ್ಯಾಪಾರ ಮಾಡಲು ಆಗಲಿಲ್ಲ. ಇಲ್ಲಿಗೆ ವ್ಯಾಪಾರ ಮಾಡಲು ಬಂದಿದ್ರು. ಈಗ ದೊಡ್ಡ ವ್ಯಾಪಾರ ಮಾಡಿಕೊಂಡಿದ್ದಾರೆ. ಅದೇ ವ್ಯಾಪಾರದ ದುಡ್ಡಲ್ಲಿ ಹಳೆಯ ಮಾಡಲ್ ಸೀರೆ, ರೋಲ್‌ ಗೋಲ್ಡ್ ಮೂಗಬೊಟ್ಟು, ಡೂಪ್ಲಿಕೇಟ್ ರಾಡೋ ವಾಚ್ ಬಂದಿವೆ. ಇವುಗಳಿಗೆ ನಮ್ಮ ಜನ ಮಾರುಹೋಗಲ್ಲ ಎಂದು ಮಾಜಿ ಸಚಿವ ಸಿ.ಎಸ್​.ಪುಟ್ಟರಾಜು ವಾಗ್ದಾಳಿ ನಡೆಸಿದರು.

ಕೆ.ಸಿ.ನಾರಾಯಣಗೌಡ ಅವರ ಆಮಿಷಗಳಿಗೆ ಕ್ಷೇತ್ರದ ಜನರು ಮಾರುಹೋಗುವುದಿಲ್ಲ. ಅವರ ವ್ಯಾಪಾರದ ದುಡ್ಡಿನಿಂದ ಒಂದೆರಡು ಸಾವಿರ ವೋಟ್ ತಗೋಬಹುದು ಅಷ್ಟೇ. ಅವರು ಇಂತಹ ಗಿಮಿಕ್​ಗಳಿಂದ ರಾಜಕಾರಣ ಮಾಡಲು ಆಗಲ್ಲ. ಮತ್ತೆ ಅವರನ್ನು ಇಲ್ಲಿಯ ಜನರು ಯಾವ ರೀತಿ ಮುಂಬೈಗೆ ಕಳಿಸ್ತಾರೆ ನೋಡಿ ಎಂದು ಮಡುವಿನ ಕೋಡಿ ಗ್ರಾಮದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ರು.

ಬಿಜೆಪಿ ದೇವೇಗೌಡರ ಮನೆ ಬಾಗಿಲು ತಟ್ಟುತ್ತೆ:
ಉಪಚುನಾವಣೆಯಲ್ಲಿ ಬಿಜೆಪಿ 2-3 ಸೀಟ್ ಗೆಲ್ಲದಿದ್ರೆ ಏನ್ ಆಗುತ್ತೆ. ಫಲಿತಾಂಶದ ಬಳಿಕ ಬಿಜೆಪಿಯವರು ದೇವೇಗೌಡರ ಮನೆ ಬಾಗಿಲು ತಟ್ಟೋದನ್ನ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಡಿ.5ರ ಮೇಲೆ ನಮ್ಮ ರಾಜಕೀಯ ಲೆಕ್ಕಾಚಾರ ತಿಳಿಸುತ್ತೇವೆ. ನೂರಕ್ಕೆ ನೂರು ಭಾಗ ಚುನಾವಣೆ ಬಳಿಕ ಬಿಜೆಪಿ ದೇವೇಗೌಡರ ಮನೆಗೆ ಬರೋದನ್ನ ತಪ್ಪಿಸಲು ಆಗುವುದಿಲ್ಲ ಎಂದರು.

Published On - 4:46 pm, Sun, 24 November 19