
ದೇವನಹಳ್ಳಿ: ದುಬೈನಿಂದ ಅಕ್ರಮವಾಗಿ ಸಾಗಿಸುತ್ತಿದ್ದ 13 ಲಕ್ಷ ಮೌಲ್ಯದ ಚಿನ್ನ ಮತ್ತು ವಿದೇಶಿ ಸಿಗರೇಟ್ಗಳನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ದುಬೈನಿಂದ ಬಂದಿದ್ದ ಪ್ರಯಾಣಿಕರೊಬ್ಬರು ಫುಡ್ ಪ್ಯಾಕೆಟ್ಗಳ ರೀತಿಯಲ್ಲಿ ಚಿನ್ನ ಮತ್ತು ಫಾರಿನ್ ಸಿಗರೇಟ್ಗಳನ್ನು ಸಾಗಿಸುತ್ತಿದ್ದರು. ಲಗೇಜ್ ಸ್ಕ್ಯಾನ್ ಮಾಡಿದ ವೇಳೆ ಅನುಮಾನ ಬಂದು ಪರಿಶೀಲಿಸಿದಾಗ ₹ 13.02 ಲಕ್ಷ ಮೌಲ್ಯದ 165.89 ಗ್ರಾಂ ಚಿನ್ನ ಹಾಗೂ 12 ಸಾವಿರ ಗ್ರಾಂನಷ್ಟು ಸಿಗರೇಟ್ ಪತ್ತೆಯಾಗಿದೆ. ಸದ್ಯ ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕನನ್ನು ವಶಪಡಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಮುತ್ತೂಟ್ ಫೈನಾನ್ಸ್ ದರೋಡೆ: 18 ಗಂಟೆಯಲ್ಲಿ ಉತ್ತರ ಭಾರತದ ಕಳ್ಳರು ಅಂದರ್, 25 ಕೆ. ಜಿ. ಚಿನ್ನ ವಶಕ್ಕೆ..!
Published On - 12:49 pm, Mon, 25 January 21