
ಸೌತ್ ಸಿನಿದುನಿಯಾದಲ್ಲಿ ತಮ್ಮದೇ ಆದ ಚಾಪು ಮೂಡಿಸಿರೋ ನಟ ಅಂದ್ರೆ ಧನುಷ್. ಕಾಲಿವುಡ್ನ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರೋ ಧನುಷ್, ತಮ್ಮ ವಿಭಿನ್ನ ಶೈಲಿಯ ಸಿನಿಮಾಗಳಿಂದ ಹಾಗೂ ವಿಭಿನ್ನ ಮ್ಯಾನರಿಸಂನಿಂದ ಕಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಕಮಾಲ್ ಮಾಡಿದ್ದಾರೆ.
ಸದ್ಯ ಕಾಲಿವುಡ್ ಸೂಪರ್ ಸ್ಟಾರ್ ಧನುಷ್ ತಮ್ಮ ಸಿನಿ ಕರಿಯರ್‌ನಲ್ಲಿ ಅಚ್ಚರಿಯ ಅವಕಾಶವೊಂದನ್ನ ಗಿಟ್ಟಿಸಿಕೊಂಡು ಎಲ್ಲರೂ ಬೆರಗು ಗಣ್ಣಿನಿಂದ ನೋಡುವಂತೆ ಮಾಡಿದ್ದಾರೆ. ಅಂದಹಾಗೆ ಧನುಷ್ ಹಾಗೂ ಅವರ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗೋಕೆ ಕಾರಣ ಸದ್ಯ ಹಾಲಿವುಡ್‌ನ ದಿ ಗ್ರೇ ಮ್ಯಾನ್ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡಿರೋದು.
ಧನುಷ್ ಗ್ರೇ ಮ್ಯಾನ್ ಆಗೋಕೆ ಅವಕಾಶ:
ದೊಡ್ಡ ದೊಡ್ಡ ಸ್ಟಾರ್ಗಳ ಜೊತೆ ಸ್ಕ್ರೀನ್ ಶೇರ್ ಮಾಡೋ ಚಾನ್ಸ್ ಪಡೆದಿದ್ದಾರೆ ಧನುಷ್. ವಿಶೇಷ ಅಂದ್ರೆ ಅವೆಂಜರ್ಸ್ ಎಂಡ್ ಗೇಮ್. ಅವೆಂಜರ್ಸ್ ಇನ್ ಫಿನಿಟಿ ವಾರ್, ಕ್ಯಾಪ್ಟನ್ ಅಮೇರಿಕಾ, ವಿಂಟರ್ ಸೋಲ್ಜರ್ ಸೇರಿದಂತೆ ಹಲವು ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿರೋ ಜೋ ರಸ್ಸೋ ಹಾಗು ಆಂಟನಿ ರಸ್ಸೋ ಸಹೋದರರು ಆಕ್ಷನ್ ಕಟ್ ಹೇಳ್ತಿರೋ ಸಿನಿಮಾದಲ್ಲಿ ಧನುಷ್ ಗ್ರೇ ಮ್ಯಾನ್ ಆಗೋಕೆ ಅವಕಾಶ ಸಿಕ್ಕಿದೆ.
ಕ್ಯಾಪ್ಟನ್ ಅಮೆರಿಕಾ ಸಿನಿಮಾದಲ್ಲಿ ನಟಿಸಿದ್ದ ಕ್ರಿಸ್ ಇವಾನ್ಸ್ ಹಾಗು ಲಾಲಾ ಲ್ಯಾಂಡ್ ಸಿನಿಮಾದಲ್ಲಿ ನಟಿಸಿದ್ದ ರ್ಯಾನ್ ಗೋಸ್ಲಿಂಗ್ ಕೂಡ ದಿ ಗ್ರೇ ಮ್ಯಾನ್ ಸಿನಿಮಾಲ್ಲಿ ನಟಿಸಲಿದ್ದಾರೆ. ಹೀಗಾಗಿ ಸದ್ಯ ಇಬ್ಬರು ಸ್ಟಾರ್ಗಳ ಜೊತೆ ಧನುಷ್ ಕೂಡ ನಟಿಸ್ತಿರೋದು ಸಿನಿಮಾ ಬಗ್ಗೆ ಮತ್ತಷ್ಟು ಕ್ಯೂರಿಯಾಸಿಟಿ ಹೆಚ್ಚಾಗುವಂತೆ ಮಾಡಿದೆ.
ಮೂಲಗಳ ಪ್ರಕಾರ ರಸ್ಸೋ ಸಹೋದರರು ಆ್ಯಕ್ಷನ್ ಕಟ್ ಹೇಳ್ತಿರೋ ಸಿನಿಮಾದಲ್ಲಿ ಧನುಷ್ ನಟಿಸೋದು ಪಕ್ಕಾ ಆಗಿದ್ದು ಜನವರಿಯಿಂದ ಶೂಟಿಂಗ್ ಆರಂಭ ಆಗಲಿದೆ ಅನ್ನೋ ಮಾಹಿತಿ ಇದೆ. ಹಾಗಾದ್ರೆ ಈ ಹಿಂದೆ ದಿ ಎಕ್ಟ್ರಾರ್ಡಿನರಿ ಜರ್ನಿ ಆಫ್ ಫಕೀರ್ ಸಿನಿಮಾದಲ್ಲಿ ನಟಿಸಿ ಸೈ ಅನ್ನಿಸಿಕೊಂಡಿದ್ದ ಧನುಷ್ ಈಗ ಮತ್ತೆ ಹಾಲಿವುಡ್ ನಲ್ಲಿ ಹೇಗೆ ಮೋಡಿ ಮಾಡ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.
ರೌಡಿ ಬೇಬಿ ಸಾಂಗ್ಗೆ ಸಖತ್ ರೆಸ್ಪಾನ್ಸ್, ಸಕ್ಸಸ್ ಪೋಸ್ಟರ್ ನೋಡಿ ಸಾಯಿಪಲ್ಲವಿ ಫ್ಯಾನ್ಸ್ ಗರಂ!