ವಿಷ ಕುಡಿದಿದ್ದ ಮಹಿಳೆಗೆ ಇಡೀ ರಾತ್ರಿ ಕಾದರೂ ಚಿಕಿತ್ಸೆ ನೀಡಿಲ್ಲ.. ಜಿಲ್ಲಾಸ್ಪತ್ರೆ ವಿರುದ್ಧ ಸಂಬಂಧಿಕರ ಆಕ್ರೋಶ

|

Updated on: Nov 08, 2020 | 7:34 AM

ದಾವಣಗೆರೆ: ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ನಾನ್ ಕೊವಿಡ್ ರೋಗಿ ಹೋರಾಟ ನಡಿಸಿದಂತ ಘಟನೆ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ವಿಷ ಸೇವಿಸಿದ್ದ ಮಹಿಳೆಯನ್ನ ಸಂಬಂಧಿಕರು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆದೆರ ಇಡೀ ರಾತ್ರಿ ಕಾದರೂ ಮಹಿಳೆಗೆ ಚಿಕಿತ್ಸೆ ನೀಡಿಲ್ಲವಂತೆ. ವಿಷ ಸೇವಿಸಿದ್ದಾಳೆ ಎಂದು ದಾವಣಗೆರೆ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದ್ವಿ ಆದರೆ ಇಡೀ ರಾತ್ರಿ ಕಾದರೂ ವೈದ್ಯರು ಚಿಕಿತ್ಸೆಯೇ ನೀಡಿಲ್ಲ. ಹೀಗಾಗಿ ನಾವು ಶಿವಮೊಗ್ಗಕ್ಕೆ ಕರೆದುಕೊಂಡು ಹೋದ್ವಿ ಎಂದು ಅಸ್ವಸ್ಥ ಮಹಿಳೆಯ ಸಂಬಂಧಿಕರು ದಾವಣಗೆರೆ ಜಿಲ್ಲಾಸ್ಪತ್ರೆಯ ವಿರುದ್ಧ […]

ವಿಷ ಕುಡಿದಿದ್ದ ಮಹಿಳೆಗೆ ಇಡೀ ರಾತ್ರಿ ಕಾದರೂ ಚಿಕಿತ್ಸೆ ನೀಡಿಲ್ಲ.. ಜಿಲ್ಲಾಸ್ಪತ್ರೆ ವಿರುದ್ಧ ಸಂಬಂಧಿಕರ ಆಕ್ರೋಶ
Follow us on

ದಾವಣಗೆರೆ: ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ನಾನ್ ಕೊವಿಡ್ ರೋಗಿ ಹೋರಾಟ ನಡಿಸಿದಂತ ಘಟನೆ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ವಿಷ ಸೇವಿಸಿದ್ದ ಮಹಿಳೆಯನ್ನ ಸಂಬಂಧಿಕರು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆದೆರ ಇಡೀ ರಾತ್ರಿ ಕಾದರೂ ಮಹಿಳೆಗೆ ಚಿಕಿತ್ಸೆ ನೀಡಿಲ್ಲವಂತೆ.

ವಿಷ ಸೇವಿಸಿದ್ದಾಳೆ ಎಂದು ದಾವಣಗೆರೆ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದ್ವಿ ಆದರೆ ಇಡೀ ರಾತ್ರಿ ಕಾದರೂ ವೈದ್ಯರು ಚಿಕಿತ್ಸೆಯೇ ನೀಡಿಲ್ಲ. ಹೀಗಾಗಿ ನಾವು ಶಿವಮೊಗ್ಗಕ್ಕೆ ಕರೆದುಕೊಂಡು ಹೋದ್ವಿ ಎಂದು ಅಸ್ವಸ್ಥ ಮಹಿಳೆಯ ಸಂಬಂಧಿಕರು ದಾವಣಗೆರೆ ಜಿಲ್ಲಾಸ್ಪತ್ರೆಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಮತ್ತೊಬ್ಬ ರೋಗಿಗೂ ಇದೇ ರೀತಿ ಕಾಟಾಚಾರಕ್ಕೆ ಚಿಕಿತ್ಸೆ ನೀಡಿದ ಆರೋಪ ಕೆಳಿ ಬಂದಿದೆ. ಒಟ್ಟಿನಲ್ಲಿ ಜಿಲ್ಲಾಸ್ಪತ್ರೆಯ ವೈದ್ಯರು ನಾನ್ ಕೊವಿಡ್ ರೋಗಿಗಳಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂಬ ಮಾತುಗಳು, ಆರೋಪಗಳು ಹೇಳಿ ಬರುತ್ತಿವೆ. ದೊಡ್ಡ ಮಟ್ಟಿಗೆ ಯಾವುದೇ ಅನಾಹುತ ಸಂಭವಿಸುವ ಮುನ್ನ ವೈದ್ಯರು ಎಚ್ಚೆತ್ತುಕೊಳ್ಳಬೇಕು.