ಎರಡು ಚಿರತೆ ಸಾವು, ಔಷಧ ಮಿಶ್ರಿತ ಆಹಾರ ತಿಂದು ಸಾವನ್ನಪ್ಪಿರುವ ಶಂಕೆ

ಎರಡು ವರ್ಷದ ಹಾಗೂ ಒಂದು ವರ್ಷದ ಎರಡು ಚಿರತೆಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕಲ್ಲುಂಡಿ ಗ್ರಾಮದ ಬಳಿ ನಡೆದಿದೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಪಶು ವೈದ್ಯಾಧಿಕಾರಿಗಳಾದ ಹರೀಶ್ ಹಾಗೂ ವರದರಾಜ್ ಸ್ಥಳಕ್ಕೆ ಭೇಟಿ ನೀಡಿದ್ದು, ಚಿರತೆಗಳು ಔಷಧ ಮಿಶ್ರಿತ ಆಹಾರ ತಿಂದು ಸಾವನ್ನಪ್ಪಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಅರಣ್ಯಾಧಿಕಾರಿಗಳು ಮೃತ ಚಿರತೆಗಳ ಮರಣೊತ್ತರ ಪರೀಕ್ಷೆ ನಡೆಸಿ, ತನಿಖೆಗೆ ಮುಂದಾಗಿದ್ದಾರೆ.

ಎರಡು ಚಿರತೆ ಸಾವು, ಔಷಧ ಮಿಶ್ರಿತ ಆಹಾರ ತಿಂದು ಸಾವನ್ನಪ್ಪಿರುವ ಶಂಕೆ

Updated on: Nov 07, 2020 | 3:33 PM

ಎರಡು ವರ್ಷದ ಹಾಗೂ ಒಂದು ವರ್ಷದ ಎರಡು ಚಿರತೆಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕಲ್ಲುಂಡಿ ಗ್ರಾಮದ ಬಳಿ ನಡೆದಿದೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಪಶು ವೈದ್ಯಾಧಿಕಾರಿಗಳಾದ ಹರೀಶ್ ಹಾಗೂ ವರದರಾಜ್ ಸ್ಥಳಕ್ಕೆ ಭೇಟಿ ನೀಡಿದ್ದು, ಚಿರತೆಗಳು ಔಷಧ ಮಿಶ್ರಿತ ಆಹಾರ ತಿಂದು ಸಾವನ್ನಪ್ಪಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಅರಣ್ಯಾಧಿಕಾರಿಗಳು ಮೃತ ಚಿರತೆಗಳ ಮರಣೊತ್ತರ ಪರೀಕ್ಷೆ ನಡೆಸಿ, ತನಿಖೆಗೆ ಮುಂದಾಗಿದ್ದಾರೆ.

Published On - 3:32 pm, Sat, 7 November 20