ಕಾನೂನಿಗೆ ಕಣ್ಣಿಲ್ಲ ಅಂತಾರೆ.. ಆದ್ರೆ ಇಲ್ಲಿ, ನ್ಯಾಯವೇ ದಿವ್ಯಾಂಗನ ಬಳಿ ನಡೆದು ಬಂದಿದೆ ‘ನೋಡಿ’!
ಕೋಲಾರ: ದಿವ್ಯ ಚೇತನ ವ್ಯಕ್ತಿಯೊಬ್ಬರ ಸಮಸ್ಯೆಯನ್ನು ಆಲಿಸಲು ಖುದ್ದು ನ್ಯಾಯಾಧೀಶರೇ ಕೋರ್ಟ್ ಆವರಣಕ್ಕೆ ಆಗಮಿಸಿದ ಘಟನೆ ಜಿಲ್ಲೆಯ ಮುಳಬಾಗಿಲಿನ JMFC ಕೋರ್ಟ್‌ನಲ್ಲಿ ನಡೆದಿದೆ. ನ್ಯಾ. ಹಾಜಿ ಹುಸೇನ್ ಸಾಬ್ ಯಾದವಾಡ ಅವರು ದಿವ್ಯ ಚೇತನ ವ್ಯಕ್ತಿಯ ಸಮಸ್ಯೆ ಆಲಿಸಲು ಸ್ವತಃ ತಾವೇ ಕೋರ್ಟ್ ಆವರಣಕ್ಕೆ ಆಗಮಿಸಿದರು. ಮನೆ ಕಿಟಕಿ ಒತ್ತುವರಿ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಮುಳಬಾಗಿಲು ನಿವಾಸಿ ದೇವರಾಜಾಚಾರ್ JMFC ಕೋರ್ಟ್ ಮೊರೆಹೋಗಿದ್ದರು. ಈ ನಡುವೆ, ಕೇಸ್ಅನ್ನು ವಿಚಾರಣೆಗೆಂದು ಕೈಗೆತ್ತಿಕೊಂಡ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಹಾಜಿ ಹುಸೇನ್ ಸಾಬ್ […]

ಕೋಲಾರ: ದಿವ್ಯ ಚೇತನ ವ್ಯಕ್ತಿಯೊಬ್ಬರ ಸಮಸ್ಯೆಯನ್ನು ಆಲಿಸಲು ಖುದ್ದು ನ್ಯಾಯಾಧೀಶರೇ ಕೋರ್ಟ್ ಆವರಣಕ್ಕೆ ಆಗಮಿಸಿದ ಘಟನೆ ಜಿಲ್ಲೆಯ ಮುಳಬಾಗಿಲಿನ JMFC ಕೋರ್ಟ್‌ನಲ್ಲಿ ನಡೆದಿದೆ. ನ್ಯಾ. ಹಾಜಿ ಹುಸೇನ್ ಸಾಬ್ ಯಾದವಾಡ ಅವರು ದಿವ್ಯ ಚೇತನ ವ್ಯಕ್ತಿಯ ಸಮಸ್ಯೆ ಆಲಿಸಲು ಸ್ವತಃ ತಾವೇ ಕೋರ್ಟ್ ಆವರಣಕ್ಕೆ ಆಗಮಿಸಿದರು.
ಮನೆ ಕಿಟಕಿ ಒತ್ತುವರಿ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಮುಳಬಾಗಿಲು ನಿವಾಸಿ ದೇವರಾಜಾಚಾರ್ JMFC ಕೋರ್ಟ್ ಮೊರೆಹೋಗಿದ್ದರು. ಈ ನಡುವೆ, ಕೇಸ್ಅನ್ನು ವಿಚಾರಣೆಗೆಂದು ಕೈಗೆತ್ತಿಕೊಂಡ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಹಾಜಿ ಹುಸೇನ್ ಸಾಬ್ ಯಾದವಾಡ ಖುದ್ದು ನ್ಯಾಯಾಲಯದ ಗೇಟ್ ಮುಂದೆ ಬಂದು ದೇವರಾಜಾಚಾರ್ರ ಮೊರೆಯನ್ನ ಆಲಿಸಿದರು. ಎರಡೂ ಕಡೆಯ ಕಕ್ಷಿದಾರರನ್ನು ಕರೆಸಿ ವಿಚಾರಣೆ ನಡೆಸಿದರು.
ಇಬ್ಬರ ವಾದವನ್ನು ಸಮನಾಗಿ ಆಲಿಸಿದ ನ್ಯಾ. ಹಾಜಿ ಹುಸೇನ್ ಸಾಬ್ ಯಾದವಾಡ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ಸಹ ನೀಡಿದರಂತೆ. ಒಟ್ನಲ್ಲಿ, ಕಾನೂನಿಗೆ ಕಣ್ಣಿಲ್ಲ ಅಂತಾರೆ. ಆದರೆ, ಇಲ್ಲಿ ಸ್ವತಃ ನ್ಯಾಯವೇ ದಿವ್ಯಾಂಗ ವ್ಯಕ್ತಿಯ ಮೊರೆ ಆಲಿಸಲು ಆತನ ಬಳಿ ಬಂದಿರುವುದು ನಿಜಕ್ಕೂ ಮೆಚ್ಚುಗೆಗೆ ಅರ್ಹ. -ರಾಜೇಂದ್ರ ಸಿಂಹ
Published On - 4:03 pm, Sat, 7 November 20



