ಮೇಲುಕೋಟೆಯಲ್ಲಿ ಕೃಷ್ಣರಾಜಮುಡಿ ಜಾತ್ರೆ: ಮಾಸ್ಕ್ ಧರಿಸದೆ ‘ದಿವ್ಯ’ ನಿರ್ಲಕ್ಷ್ಯ

ಮಂಡ್ಯ: ಜಿಲ್ಲೆಯ ಐತಿಹಾಸಿಕ ಮೇಲುಕೋಟೆ ಕೃಷ್ಣರಾಜಮುಡಿ ಜಾತ್ರೆಯಲ್ಲಿ ಭಕ್ತರು ಮಾಸ್ಕ್​ ಧರಿಸದೆ ಹಾಗೂ ಸಾಮಾಜಿಕ ಅಂತರ ಪಾಲಿಸದೆ ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ. ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯ ಇತಿಹಾಸ ಪ್ರಸಿದ್ಧ ಚಲುವನಾರಾಯಣಸ್ವಾಮಿ ದೇಗುಲದಲ್ಲಿ ಕೃಷ್ಣರಾಜಮುಡಿ ಜಾತ್ರೆಯನ್ನು ಆಚರಿಸಲಾಯಿತು. ಹೀಗಾಗಿ, ಬೆಳಗ್ಗೆಯೇ ಚಲುವನಾರಾಯಣಸ್ವಾಮಿಗೆ ಪೂಜೆ ಮತ್ತು ಅಭಿಷೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕೊರೊನಾ ಇರುವುದರಿಂದ ದೇವಸ್ಥಾನದ ಒಳಭಾಗದಲ್ಲಿ ಮಾತ್ರ ಜಾತ್ರಾ ಮಹೋತ್ಸವನ್ನ ಹಮ್ಮಿಕೊಳ್ಳಲಾಗಿತ್ತು. ಆದರೆ, ಜಾತ್ರೆಯಲ್ಲಿ ಪಾಲ್ಗೊಂಡ ಹಲವಾರು ಭಕ್ತರು ಮಾಸ್ಕ್​ ಧರಿಸದೆ ದರ್ಶನ ಪಡೆದರು. ಇದಲ್ಲದೆ, ದರ್ಶನದ ವೇಳೆ […]

ಮೇಲುಕೋಟೆಯಲ್ಲಿ ಕೃಷ್ಣರಾಜಮುಡಿ ಜಾತ್ರೆ: ಮಾಸ್ಕ್ ಧರಿಸದೆ ‘ದಿವ್ಯ’ ನಿರ್ಲಕ್ಷ್ಯ
Updated By: ಸಾಧು ಶ್ರೀನಾಥ್​

Updated on: Jul 07, 2020 | 12:18 PM

ಮಂಡ್ಯ: ಜಿಲ್ಲೆಯ ಐತಿಹಾಸಿಕ ಮೇಲುಕೋಟೆ ಕೃಷ್ಣರಾಜಮುಡಿ ಜಾತ್ರೆಯಲ್ಲಿ ಭಕ್ತರು ಮಾಸ್ಕ್​ ಧರಿಸದೆ ಹಾಗೂ ಸಾಮಾಜಿಕ ಅಂತರ ಪಾಲಿಸದೆ ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ.

ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯ ಇತಿಹಾಸ ಪ್ರಸಿದ್ಧ ಚಲುವನಾರಾಯಣಸ್ವಾಮಿ ದೇಗುಲದಲ್ಲಿ ಕೃಷ್ಣರಾಜಮುಡಿ ಜಾತ್ರೆಯನ್ನು ಆಚರಿಸಲಾಯಿತು. ಹೀಗಾಗಿ, ಬೆಳಗ್ಗೆಯೇ ಚಲುವನಾರಾಯಣಸ್ವಾಮಿಗೆ ಪೂಜೆ ಮತ್ತು ಅಭಿಷೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕೊರೊನಾ ಇರುವುದರಿಂದ ದೇವಸ್ಥಾನದ ಒಳಭಾಗದಲ್ಲಿ ಮಾತ್ರ ಜಾತ್ರಾ ಮಹೋತ್ಸವನ್ನ ಹಮ್ಮಿಕೊಳ್ಳಲಾಗಿತ್ತು.

ಆದರೆ, ಜಾತ್ರೆಯಲ್ಲಿ ಪಾಲ್ಗೊಂಡ ಹಲವಾರು ಭಕ್ತರು ಮಾಸ್ಕ್​ ಧರಿಸದೆ ದರ್ಶನ ಪಡೆದರು. ಇದಲ್ಲದೆ, ದರ್ಶನದ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆತರು. ದೇವಸ್ಥಾನದ ಮುಜರಾಯಿ ಅಧಿಕಾರಿಗಳು ಸಹ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಿಲ್ಲ ಎಂದು ತಿಳಿದುಬಂದಿದೆ.

Published On - 11:53 am, Tue, 7 July 20