ಗಣಿನಾಡು ರೈತರಿಗೆ ಕಣ್ಣೀರು ತರಿಸಿದ ಈರುಳ್ಳಿಯ ರೋಗಬಾಧೆ.!

| Updated By: Guru

Updated on: Aug 09, 2020 | 5:58 PM

ಬಳ್ಳಾರಿ: ಸತತ ಮಹಾಮಳೆಗೆ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಈರುಳ್ಳಿ ಬೆಳೆಗೆ ರೋಗ ಬಾಧೆ ಶುರುವಾಗಿದೆ. ಮತ್ತೊಂದೆಡೆ ಬೆಂಬಲ ಬೆಲೆ ಕೂಡ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ.‌ ಹೀಗಾಗಿ, ಗಣಿ ಜಿಲ್ಲೆಯ ಈರುಳ್ಳಿ ಬೆಳೆಗಾರರು ಕಣ್ಣೀರು ಹಾಕುತ್ತಿದ್ದಾರೆ. ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲೂಕಿನ ನಾನಾ ಗ್ರಾಮಗಳಲ್ಲಿ ಬೆಳೆದ ಈರುಳ್ಳಿಗೆ ರೋಗದ ಗುಣಲಕ್ಷಣ ಕಂಡು ಬಂದ ಹಿನ್ನಲೆಯಲ್ಲಿ ಚಿಗುರೊಡೆದು ಈರುಳ್ಳಿ ಫಸಲು ಬಾರದೇ ಈ ಬೆಳೆಯು ನಾಶವಾಗಿದೆ. ಕೊಟ್ಟೂರು ತಾಲೂಕಿನ ಲೊಟ್ಟನಕೇರಿ, ಹ್ಯಾಳ್ಯಾ, ಮೋತಿಕಲ್ ತಾಂಡಾ, ಹರಾಳು, ಕೆ.ಅಯ್ಯನಹಳ್ಳಿ, ಬೋರನಹಳ್ಳಿ […]

ಗಣಿನಾಡು ರೈತರಿಗೆ ಕಣ್ಣೀರು ತರಿಸಿದ ಈರುಳ್ಳಿಯ ರೋಗಬಾಧೆ.!
Follow us on

ಬಳ್ಳಾರಿ: ಸತತ ಮಹಾಮಳೆಗೆ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಈರುಳ್ಳಿ ಬೆಳೆಗೆ ರೋಗ ಬಾಧೆ ಶುರುವಾಗಿದೆ. ಮತ್ತೊಂದೆಡೆ ಬೆಂಬಲ ಬೆಲೆ ಕೂಡ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ.‌ ಹೀಗಾಗಿ, ಗಣಿ ಜಿಲ್ಲೆಯ ಈರುಳ್ಳಿ ಬೆಳೆಗಾರರು ಕಣ್ಣೀರು ಹಾಕುತ್ತಿದ್ದಾರೆ.

ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲೂಕಿನ ನಾನಾ ಗ್ರಾಮಗಳಲ್ಲಿ ಬೆಳೆದ ಈರುಳ್ಳಿಗೆ ರೋಗದ ಗುಣಲಕ್ಷಣ ಕಂಡು ಬಂದ ಹಿನ್ನಲೆಯಲ್ಲಿ ಚಿಗುರೊಡೆದು ಈರುಳ್ಳಿ ಫಸಲು ಬಾರದೇ ಈ ಬೆಳೆಯು ನಾಶವಾಗಿದೆ.

ಕೊಟ್ಟೂರು ತಾಲೂಕಿನ ಲೊಟ್ಟನಕೇರಿ, ಹ್ಯಾಳ್ಯಾ, ಮೋತಿಕಲ್ ತಾಂಡಾ, ಹರಾಳು, ಕೆ.ಅಯ್ಯನಹಳ್ಳಿ, ಬೋರನಹಳ್ಳಿ ಗ್ರಾಮಗಳ ಸುತ್ತಲಿನ ನೂರಾರು ಎಕರೆಯ ಪ್ರದೇಶದಲ್ಲಿ  ಈರುಳ್ಳಿ ಬಿತ್ತನೆ ಮಾಡಿದ್ದು, ಈ ಬೆಳೆ ಕೈಗೆ ಬರುವ ಹೊತ್ತಿಗೆ ಈರುಳ್ಳಿ ಬೆಳೆ ಈಗ ತಿರಣಿ ರೋಗದಿಂದ ಬಾಧಿಸುತ್ತಿದೆ.

ಕಳೆದೊಂದು ವಾರದಿಂದ ಉಂಟಾದ ಜಿಟಿ ಜಿಟಿ ಮಳೆಯಿಂದ ಈರುಳ್ಳಿ ಫಸಲಿನ ಬೇರುಗಳಿಗೆ ನೀರು ಹೆಚ್ಚಾದ ಪರಿಣಾಮ ನೆಲ ತಂಪಾಗಿ ಈರುಳ್ಳಿ ಫಸಲು ರೋಗಕ್ಕೆ ತುತ್ತಾಗಿ, ಈರುಳ್ಳಿ ಫಸಲು ಹಳದಿ ಬಣ್ಣಕ್ಕೆ ತಿರುಗಿ ಹಂತಹಂತವಾಗಿ ಕೊಳೆತು ಹೋಗುತ್ತಿದೆ.

ಮೂರು ಎಕರೆ ಹೊಲದಲ್ಲಿ ಈ ಈರುಳ್ಳಿ ಬೆಳೆಯನ್ನು ಬಿತ್ತನೇ ಮಾಡಿದ್ದೇವೆ. ಸತತ ಮಳೆಯಿಂದ  ಈರುಳ್ಳಿಗೆ ರೋಗ ಬಾಧೆ ಕಾಣಿಸಿ ಕೊಂಡಿದ್ದರಿಂದ ಹೊಲದಲ್ಲೇ ಕೊಳೆತು ಹೋಗಿದೆ . ಈರುಳ್ಳಿ ಬಿತ್ತನೆ ಮಾಡಲು ಸರಿ ಸುಮಾರು 40 ರಿಂದ 50 ಸಾವಿರದವರೆಗೆ ವ್ಯಯ ಮಾಡಲಾಗಿದೆ. ಸದ್ಯ ಉಂಟಾದ ಪ್ರಕೃತಿ ವಿಕೋಪದಿಂದ ಅಪಾರ ಪ್ರಮಾಣದ ಬೆಳೆನಷ್ಟ ಉಂಟಾಗಿದೆ ಎಂದು ಹ್ಯಾಳ್ಯಾ ಗ್ರಾಮದ ರೈತ ನಾಗೇಶ ತಮಗಾದ ನೋವನ್ನ ತೋಡಿಕೊಂಡಿದ್ದಾರೆ.