
ಬೆಂಗಳೂರು: ಡಿ.ಜೆ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯಾಗಿ ಸೈಯದ್ ಅಸನಾನ್ ಹೆಸರನ್ನ ಪೊಲೀಸರು ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.
ಸೈಯದ್ ಅಸನಾನ್ ಪ್ರಕರಣದ ರೂವಾರಿ. ಈತ ಗಲಾಟೆಗೆ ಕುಮ್ಮಕ್ಕು ನೀಡುವ ಜೊತೆಗೆ ಕಲ್ಲುತೂರಾಟದಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ. ಸೈಯದ್ ಅಸನಾನ್ ಮೂಲತಃ ಮದರಸಾದಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದಾನೆ. ಅಸನಾನ್ನನ್ನು ಇಂದು ಬೆಳಗ್ಗೆ 3.30ರ ಸುಮಾರಿಗೆ ಪೊಲೀಸರು ಬಂಧಿಸಿದ್ದರು.