
ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿತ ಫೇಸ್ಬುಕ್ ನವೀನ್ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಜೈಲಿನಿಂದ ಹೊರಬಂದು ಮಾತನಾಡಿದ ನವೀನ್ ‘ನಾನು ಆ ಪೋಸ್ಟ್ ಹಾಕಿದ್ದು ತಪ್ಪು. ನನ್ನ ತಪ್ಪು ನಾನು ಒಪ್ಪಿಕೊಳ್ಳುತ್ತೇನೆ. ನನ್ನಿಂದ ಸಾರ್ವಜನಿಕರಿಗೆ ಹಾಗೂ ಹಲವರಿಗೆ ಸಮಸ್ಯೆಯಾಗಿದೆ. ಈ ವಿಚಾರವಾಗಿ ನಾನು ಕ್ಷಮೆ ಯಾಚಿಸುತ್ತೇನೆ’ ಎಂದು ಹೇಳಿದ್ದಾನೆ.
ಆದರೆ ನಾನು ಫೊಸ್ಟ್ ಹಾಕಿರಲಿಲ್ಲ
ಆದರೆ ನಾನು ಫೊಸ್ಟ್ ಹಾಕಿರಲಿಲ್ಲ. ಬದಲಿಗೆ ಫಿರೋಜ್ ಪಾಷಾ ಎಂಬಾತ ಹಾಕಿದ್ದ ಪೊಸ್ಟ್ ಗೆ ನಾನು ರಿಪ್ಲೇ ಮಾಡಿದ್ದೆ. ಗೂಗಲ್ ನಿಂದ ಡೌನ್ ಲೋಡ್ ಮಾಡಿ ನಾನು ಆ ರಿಪ್ಲೇ ಪೊಸ್ಟ್ ಮಾಡಿದ್ದೆ. ಆ ಪೊಸ್ಟ್ ನಂತರ ಕೆಲವೇ ಗಂಟೆಗಳಲ್ಲಿ ನಾನು ಡಿಲಿಟ್ ಮಾಡಿದ್ದೆ. ಆದರೆ ಅದು ಇಷ್ಟು ದೊಡ್ಡ ಗಲಭೆಗೆ ಕಾರಣ ಆಗತ್ತೆ ಅಂತ ನನಗೆ ಗೊತ್ತಿರಲಿಲ್ಲ ಎಂದು ಹೇಳಿದ್ದಾನೆ.
ಸಿಸಿಬಿ ಪೊಲೀಸರು ಜಾರ್ಜ್ ಶೀಟ್ ಸಲ್ಲಿಸಿದ್ದಾರೆ. ಅದ್ರಲ್ಲಿ ಯಾರ ಕೆಲಸ ಇದು ಅಂತಾ ಕೂಡ ತಿಳಿಸಿದ್ದಾರೆ. ರಾಜಕೀಯವಾಗಿ ನನ್ನ ಮಾವ ಅಖಂಡ ಶ್ರೀನಿವಾಸರವರ ಮುಗಿಸಬೇಕು ಅಂತ ಮಾಡಿದ ಪಿತೂರಿ ಅಂತ ಗೊತ್ತಾಗಿದೆ ಎಂದೂ ನವೀನ್ ಹೇಳಿದ್ದಾನೆ.
Published On - 5:16 pm, Fri, 23 October 20