ಗೋಲಿಬಾರ್​ ಮೃತರಿಗೆ ಮೊದಲು ಕೊವಿಡ್​ ಟೆಸ್ಟ್​, ನಂತರ ಮರಣೋತ್ತರ ಪರೀಕ್ಷೆ

ಬೆಂಗಳೂರು: ನಗರದ ಈಶಾನ್ಯ ಭಾಗದ ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ನಿನ್ನೆ ರಾತ್ರಿ ಪೊಲೀಸ್ ಫೈರಿಂಗ್​ನಲ್ಲಿ ಮೂವರು ಸಾವನ್ನಪ್ಪಿದ್ದರು. ಮೃತಪಟ್ಟ ಮೂವರ ಪೈಕಿ ಇಬ್ಬರು ಡಿ.ಜೆ.ಹಳ್ಳಿ ನಿವಾಸಿಗಳು ಎಂದು ತಿಳಿದುಬಂದಿದೆ. 20 ವರ್ಷದ ವಾಜಿದ್ ಹಾಗೂ ಏರಿಯಾದ ಶಾಂಪುರ ಮುಖ್ಯರಸ್ತೆಯ 22 ವರ್ಷದ ನಿವಾಸಿ ಯಾಸಿನ್ ಪಾಷಾ ಗೋಲಿಬಾರ್​ನಲ್ಲಿ ಮೃತಪಟ್ಟವರು ಎಂದು ತಿಳಿದುಬಂದಿದೆ. ಮೂರನೇ ಮೃತನ ಮಾಹಿತಿ ಇನ್ನು ದೊರೆತಿಲ್ಲ. ಇದಲ್ಲದೆ, ಗೋಲಿಬಾರ್​ನಲ್ಲಿ ಸುಮಾರು 15 ಜನರಿಗೆ ಗುಂಡು ತಗಲಿದೆ ಎಂದು ತಿಳಿದುಬಂದಿದೆ. […]

ಗೋಲಿಬಾರ್​ ಮೃತರಿಗೆ ಮೊದಲು ಕೊವಿಡ್​ ಟೆಸ್ಟ್​, ನಂತರ ಮರಣೋತ್ತರ ಪರೀಕ್ಷೆ

Updated on: Aug 12, 2020 | 12:44 PM

ಬೆಂಗಳೂರು: ನಗರದ ಈಶಾನ್ಯ ಭಾಗದ ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ನಿನ್ನೆ ರಾತ್ರಿ ಪೊಲೀಸ್ ಫೈರಿಂಗ್​ನಲ್ಲಿ ಮೂವರು ಸಾವನ್ನಪ್ಪಿದ್ದರು.

ಮೃತಪಟ್ಟ ಮೂವರ ಪೈಕಿ ಇಬ್ಬರು ಡಿ.ಜೆ.ಹಳ್ಳಿ ನಿವಾಸಿಗಳು ಎಂದು ತಿಳಿದುಬಂದಿದೆ. 20 ವರ್ಷದ ವಾಜಿದ್ ಹಾಗೂ ಏರಿಯಾದ ಶಾಂಪುರ ಮುಖ್ಯರಸ್ತೆಯ 22 ವರ್ಷದ ನಿವಾಸಿ ಯಾಸಿನ್ ಪಾಷಾ ಗೋಲಿಬಾರ್​ನಲ್ಲಿ ಮೃತಪಟ್ಟವರು ಎಂದು ತಿಳಿದುಬಂದಿದೆ. ಮೂರನೇ ಮೃತನ ಮಾಹಿತಿ ಇನ್ನು ದೊರೆತಿಲ್ಲ.

ಇದಲ್ಲದೆ, ಗೋಲಿಬಾರ್​ನಲ್ಲಿ ಸುಮಾರು 15 ಜನರಿಗೆ ಗುಂಡು ತಗಲಿದೆ ಎಂದು ತಿಳಿದುಬಂದಿದೆ. ಇದರಲ್ಲಿ, 5ರಿಂದ 6 ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಕೆಲವರು ಮನೆಯಲ್ಲಿ ಒದ್ದಾಡುತ್ತಿದ್ದಾರೆ ಎಂಬ ಮಾಹಿತಿ ಸಹ ದೊರೆತಿದೆ. ಬಂಧನದ ಭೀತಿಯಿಂದ ಆಸ್ಪತ್ರೆಗೆ ತೆರಳದೆ ಮನೆಯಲ್ಲೇ ನರಳುತ್ತಿದ್ದಾರೆ ಎಂದು ಹೇಳಲಾಗಿದೆ. ಆದರೆ, ಇವರ ಪರಿಚಯ ಪೊಲೀಸರಿಗೂ ಸಹ ಸ್ಪಷ್ಟವಾಗಿ ಸಿಗುತ್ತಿಲ್ಲ.

ಇದೀಗ, ಗೋಲಿಬಾರ್​ನಲ್ಲಿ ಮೃತಪಟ್ಟವರ ಶವ ಪರೀಕ್ಷೆ ನಡೆಯಲಿದೆ. ಬೌರಿಂಗ್ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದ್ದು ಪರೀಕ್ಷೆಗೆ FSL ವೈದ್ಯರ ತಂಡವು ಆಗಮಿಸಿದೆ.

ಮರಣೋತ್ತರ ಪರೀಕ್ಷೆಗೆ ಮುನ್ನ ಮೃತರ ಕೊವಿಡ್ ಟೆಸ್ಟ್​ ಮಾಡಲಾಗುವುದು. ರಿಪೋರ್ಟ್ ಬಂದ ಮೇಲೆ ಶವ ಪರೀಕ್ಷೆ ನಡೆಸಲಾಗುವುದು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಇನ್ನು ಬೌರಿಂಗ್ ಆಸ್ಪತ್ರೆಯ ಶವಾಗಾರದ ಬಳಿ ಮೃತರ ಕುಟುಂಬ ಸದಸ್ಯರು ಬಂದಿದ್ದಾರೆ. ಶವಾಗಾರದ ಬಳಿ ಯಾಸೀನ್, ವಾಜಿದ್​ ಕುಟುಂಬಸ್ಥರು ಆಗಮಿಸಿದರು.

Published On - 11:42 am, Wed, 12 August 20