ಗಲಭೆಗೆ ಅಯೋಧ್ಯೆಯ ಭೂಮಿ ಪೂಜೆ ಕಾರಣವಾಯ್ತಾ?

ಮೈಸೂರು: ಅತ್ತ ಬೆಂಗಳೂರಿನ ಕಾವಲ್​ ಭೈರಸಂದ್ರದಲ್ಲಿ ಗಲಭೆ ಪ್ರಕರಣ ನಡೆಯುತ್ತಿದ್ದಂತೆ ಇತ್ತ ಮೈಸೂರು ನಗರದಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್​ ಭದ್ರತೆ ಹೆಚ್ಚಿಸಲಾಗಿದೆ. ನರಸಿಂಹರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಾಂತಿನಗರ, ಮಂಡಿ ಮೊಹಲ್ಲಾ, ಕ್ಯಾತಮಾರನಹಳ್ಳಿ ಮತ್ತು ಗಾಂಧಿನಗರದಲ್ಲಿ ಪೊಲೀಸ್​ ಪಹರೆ ಹೆಚ್ಚಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚುವರಿ ಪೊಲೀಸ್​ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ. ಗಲಭೆಗೆ ಅಯೋಧ್ಯೆಯ ಭೂಮಿ ಪೂಜೆ ಕಾರಣವಾಯ್ತಾ? ಇನ್ನು ಗಲಭೆಗೆ ಅಯೋಧ್ಯೆಯಲ್ಲಿ ಜರುಗಿದ ಭೂಮಿ ಪೂಜೆ ಕಾರಣವಾಯ್ತಾ ಎಂಬ ಪ್ರಶ್ನೆ ಕಳೆದ ಐದಾರು ದಿನದಿಂದ […]

ಗಲಭೆಗೆ ಅಯೋಧ್ಯೆಯ ಭೂಮಿ ಪೂಜೆ ಕಾರಣವಾಯ್ತಾ?
ತನ್ವೀರ್ ಸೇಠ್

Updated on: Aug 12, 2020 | 1:22 PM

ಮೈಸೂರು: ಅತ್ತ ಬೆಂಗಳೂರಿನ ಕಾವಲ್​ ಭೈರಸಂದ್ರದಲ್ಲಿ ಗಲಭೆ ಪ್ರಕರಣ ನಡೆಯುತ್ತಿದ್ದಂತೆ ಇತ್ತ ಮೈಸೂರು ನಗರದಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್​ ಭದ್ರತೆ ಹೆಚ್ಚಿಸಲಾಗಿದೆ.

ನರಸಿಂಹರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಾಂತಿನಗರ, ಮಂಡಿ ಮೊಹಲ್ಲಾ, ಕ್ಯಾತಮಾರನಹಳ್ಳಿ ಮತ್ತು ಗಾಂಧಿನಗರದಲ್ಲಿ ಪೊಲೀಸ್​ ಪಹರೆ ಹೆಚ್ಚಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚುವರಿ ಪೊಲೀಸ್​ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ.

ಗಲಭೆಗೆ ಅಯೋಧ್ಯೆಯ ಭೂಮಿ ಪೂಜೆ ಕಾರಣವಾಯ್ತಾ?
ಇನ್ನು ಗಲಭೆಗೆ ಅಯೋಧ್ಯೆಯಲ್ಲಿ ಜರುಗಿದ ಭೂಮಿ ಪೂಜೆ ಕಾರಣವಾಯ್ತಾ ಎಂಬ ಪ್ರಶ್ನೆ ಕಳೆದ ಐದಾರು ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಲ್ಲಿದೆ ಎಂದು ಮಾಜಿ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ.

ಜಾಲತಾಣಗಳಲ್ಲಿ ಅಂಥ ಚಟುವಟಿಕೆಗಳು ಆರಂಭವಾಗಿತ್ತು. ಇದೀಗ ಈ ರೀತಿಯ ಪೋಸ್ಟ್ ಅಖಂಡ ಶ್ರೀನಿವಾಸ್ ಮೂರ್ತಿಯ ಸಂಬಂಧಿ ಹಾಕಿರುವುದರಿಂದ ಗಲಭೆಯಾಗಿದೆ. ಮುಂದೇನಾಗುತ್ತೆಂದು ಗುಪ್ತಚರ ಇಲಾಖೆಗೆ ಮಾಹಿತಿ ಇರಬೇಕು. ಆದರೆ, ಗುಪ್ತಚರ ಇಲಾಖೆಯ ವೈಫಲ್ಯದಿಂದ ಇಂಥ ಅನಾಹುತವಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

ಜೊತೆಗೆ, ಸಾಮಾಜಿಕ ಜಾಲತಾಣವನ್ನ ಜಾಗರೂಕತೆಯಿಂದ ಬಳಸಬೇಕು. ಧರ್ಮ ಮತ್ತು ಜಾತಿ ವಿಚಾರದಲ್ಲಿ ಯಾರಿಗೂ ನೋವಾಗದಂತೆ ಉಪಯೋಗಿಸಬೇಕು. ಆನ್​ಲೈನ್ ​ಕ್ಲಾಸ್​ ಹೆಸರಲ್ಲಿ ಚಿಕ್ಕ ಮಕ್ಕಳ ಕೈಗೆ ಮೊಬೈಲ್ ನೀಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ತನ್ವೀರ್​ ಸೇಠ್​ ಹೇಳಿದ್ದಾರೆ.

ಜೊತೆಗೆ, ತಪ್ಪಿತಸ್ಥರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ತನ್ವೀರ್ ಸೇಠ್ ಹೇಳಿಕೆ ನೀಡಿದ್ದಾರೆ.