ಅಧ್ಯಕ್ಷರಾಗಿ ಮೊದಲ ಬೈಎಲೆಕ್ಷನ್: ಸಾಹುಕಾರನ ಅಂಗಳದಲ್ಲಿ ಅಂಗಡಿ ತೆರೆದ ಕನಕಪುರ ಬಂಡೆ

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಗೆಲ್ಲಲು ಕಸರತ್ತು ನಡೆಯುತ್ತಿದೆ. ಸಾಹುಕಾರ್ ಸಾಮ್ರಾಜ್ಯದಲ್ಲಿ ಕನಕಪುರ ಬಂಡೆ ಎಂಟ್ರಿ ಕೊಟ್ಟಿದ್ದಾರೆ. ರಮೇಶ್ ಜಾರಕಿಹೊಳಿ‌ ತವರು ಜಿಲ್ಲೆಯಲ್ಲಿ ಪ್ರಭಾವ ಬೀರಲು ಸಾಕ್ಷಾತ್ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಯತ್ನಿಸುತ್ತಿದ್ದಾರೆ. ಹೀಗಾಗಿ ರಾಜಕೀಯ ತಂತ್ರ ಬಳಸಲಿದ್ದಾರೆ. ಬೆಳಗಾವಿಗೆ ಬಂದ ವೇಳೆಯೇ ಡಿಕೆಶಿ, ಸುರೇಶ್ ಅಂಗಡಿ ಸಾವಿನ ದಾಳ ಉರುಳಿಸಿದ್ದಾರೆ. ದೆಹಲಿಯಲ್ಲಿ ಕೊರೊನಾದಿಂದ ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನರಾದ್ರು. ಸುರೇಶ್ ಅಂಗಡಿ‌ ಪಾರ್ಥಿವ ಶರೀರ ಬೆಳಗಾವಿಗೆ ತರದ ವಿಚಾರದ ಬಗ್ಗೆ ಡಿಕೆಶಿ […]

ಅಧ್ಯಕ್ಷರಾಗಿ ಮೊದಲ ಬೈಎಲೆಕ್ಷನ್: ಸಾಹುಕಾರನ ಅಂಗಳದಲ್ಲಿ ಅಂಗಡಿ ತೆರೆದ ಕನಕಪುರ ಬಂಡೆ
Updated By: ಸಾಧು ಶ್ರೀನಾಥ್​

Updated on: Oct 02, 2020 | 11:29 AM

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಗೆಲ್ಲಲು ಕಸರತ್ತು ನಡೆಯುತ್ತಿದೆ. ಸಾಹುಕಾರ್ ಸಾಮ್ರಾಜ್ಯದಲ್ಲಿ ಕನಕಪುರ ಬಂಡೆ ಎಂಟ್ರಿ ಕೊಟ್ಟಿದ್ದಾರೆ. ರಮೇಶ್ ಜಾರಕಿಹೊಳಿ‌ ತವರು ಜಿಲ್ಲೆಯಲ್ಲಿ ಪ್ರಭಾವ ಬೀರಲು ಸಾಕ್ಷಾತ್ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಯತ್ನಿಸುತ್ತಿದ್ದಾರೆ. ಹೀಗಾಗಿ ರಾಜಕೀಯ ತಂತ್ರ ಬಳಸಲಿದ್ದಾರೆ. ಬೆಳಗಾವಿಗೆ ಬಂದ ವೇಳೆಯೇ ಡಿಕೆಶಿ, ಸುರೇಶ್ ಅಂಗಡಿ ಸಾವಿನ ದಾಳ ಉರುಳಿಸಿದ್ದಾರೆ.

ದೆಹಲಿಯಲ್ಲಿ ಕೊರೊನಾದಿಂದ ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನರಾದ್ರು. ಸುರೇಶ್ ಅಂಗಡಿ‌ ಪಾರ್ಥಿವ ಶರೀರ ಬೆಳಗಾವಿಗೆ ತರದ ವಿಚಾರದ ಬಗ್ಗೆ ಡಿಕೆಶಿ ಪ್ರಸ್ತಾಪಿಸಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ‌ನಡೆಸಿದ್ದಾರೆ. ಹಾಗಾದ್ರೆ ಈ ವಿಚಾರ ಪ್ರಸ್ತಾಪದ ಹಿಂದೆ ರಾಜಕೀಯ ತಂತ್ರಗಾರಿಕೆ ಅಡಗಿದೆ ಎನ್ನಲಾಗುತ್ತಿದೆ.

ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಉಪಚುನಾವಣೆ
ಉಪಚುನಾವಣೆ ದಿನಾಂಕ ಘೋಷಣೆಗೂ ಮುನ್ನ ಬೆಳಗಾವಿಯಲ್ಲಿ ಪ್ರಭುತ್ವ ಸಾಧಿಸಲು ಡಿಕೆಶಿ ಕಸರತ್ತು ನಡೆಸುತ್ತಿದ್ದಾರೆ. ಗಾಂಧಿ ಜಯಂತಿ ಕಾರ್ಯಕ್ರಮ ನೆಪದಲ್ಲಿ ಇಂದು ಜಿಲ್ಲಾ ಕಾಂಗ್ರೆಸ್ ಭವನ ಉದ್ಘಾಟನೆ ಇದೆ. ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ಹೀಗಾಗಿ ಸಾಹುಕಾರ್ ಕ್ಷೇತ್ರ ಗೋಕಾಕ್ ತಾಲೂಕಿನ ಘಟಪ್ರಭಾದಲ್ಲಿ ಡಿಕೆ ಮೊದಲ ಕಾರ್ಯಕ್ರಮದಲ್ಲೇ ತಮ್ಮ ಪ್ರಾಬಲ್ಯ ಸಾಧಿಸಲು ಮುಂದಾಗಿದ್ದಾರೆ.


Published On - 11:17 am, Fri, 2 October 20