
ಕೊಪ್ಪಳ: ಒಂದು ಕಡೆ ವೈದ್ಯರ ವಿರುದ್ಧ ಆಕ್ರೋಶ.. ಮತ್ತೊಂದು ಕಡೆ ಪೊಲೀಸರ ವಿರುದ್ಧ ವೈದ್ಯರ ಧಿಕ್ಕಾರ. ನಡುವೆ ಹಲ್ಲೆಗೊಳಗಾದ ವೈದ್ಯನ ಆಕ್ರಂದನ. ನಿನ್ನೆ ರಾತ್ರಿ ಕೊಪ್ಪಳ ಜಿಲ್ಲಾ ಆಸ್ಪತ್ರೆ ಆವರಣ ಅಕ್ಷರಶಃ ರಣಾಂಗಣವಾಗಿತ್ತು. ಇದಕ್ಕೆಲ್ಲಾ ಕಾರಣವಾಗಿದ್ದು ಹೆಡ್ ಕಾನ್ಸ್‌ಟೇಬಲ್ ಒಬ್ಬರ ಸಾವು.
ವಿಷ್ಯ ತಿಳಿಯುತ್ತಿದ್ದಂತೆ ಕೊಪ್ಪಳ ಜಿಲ್ಲಾಸ್ಪತ್ರೆ ವೈದ್ಯರು, ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ರು. ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದ್ರು. ಸ್ಥಳಕ್ಕೆ ಡಿಸಿ ಬರಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ರು. ಈ ವೇಳೆ ಮಾತನಾಡಿದ ವೈದ್ಯ ವೀರೇಶ್, ನಮ್ಮದೇನು ತಪ್ಪಿಲ್ಲ. ರೋಗಿ ಸ್ಥಿತಿ ಗಂಭೀರವಾಗುತ್ತಿದ್ದಂತೆ ಕುಟುಂಬಸ್ಥರ ಸಂಪರ್ಕಕ್ಕೆ ಪ್ರಯತ್ನಿಸಿದ್ವಿ. ಆದ್ರೆ ಅವರು ನೀಡಿದ್ದ ಮೊಬೈಲ್ ನಂಬರ್ ಸ್ವಿಚ್ ಆಫ್ ಆಗಿತ್ತು. ಈ ಸಂಬಂಧ ನಮ್ಮ ಬಳಿ ದಾಖಲೆಗಳಿವೆ ಅಂದ್ರು.
ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಕೊಪ್ಪಳ ಜಿಲ್ಲಾಧಿಕಾರಿ ಹಾಗೂ ಕಿಮ್ಸ್ ನಿರ್ದೇಶಕ ವಿಜಯನಾಥ್ ಇಟಗಿ ದೌಡಾಯಿಸಿ ಬಂದ್ರು. ಪರಿಸ್ಥಿತಿಯನ್ನು ಹತೋಟಿಗೆ ತಂದ್ರು. ವೈದ್ಯರು ಮತ್ತೆ ಕರ್ತವ್ಯಕ್ಕೆ ಮರಳುವಂತೆ ಮನವೊಲಿಸಿದ್ರು. ಒಟ್ನಲ್ಲಿ, ಕಾನ್ಸ್‌ಟೇಬಲ್ ಸಾವಿನ ವಿಚಾರದಲ್ಲಿ ಪೊಲೀಸರು ಮತ್ತು ವೈದ್ಯರು ಕಿತ್ತಾಟ ಮಾತ್ರ ಜನರಲ್ಲಿ ಚಿಂತೆ ಉಂಟುಮಾಡಿತ್ತು.
Published On - 8:38 am, Thu, 3 September 20