ಕೋಲು ಎಸೆದಿದ್ದಕ್ಕೆ ಬಾಲಕನ ಮೇಲೆ ದಾಳಿ ಮಾಡಿದ ನಾಯಿ.. ಎಲ್ಲಿ?

ನೆಲಮಂಗಲ: ಬೀದಿ ನಾಯಿ ಬಾಲಕನ ಮೇಲೆ ದಾಳಿ ಮಾಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾದವಾರ ಗ್ರಾಮದಲ್ಲಿ ನಡೆದಿದೆ. ಶಫೀರ್ (11) ನಾಯಿಯಿಂದ ದಾಳಿಗೆ ಒಳಪಟ್ಟ ಬಾಲಕ. ರಸ್ತೆಯಲ್ಲಿ ನಿಂತಿದ್ದ ನಾಯಿಗೆ ಕೋಲು ಎಸೆದ ಕಾರಣ ರೊಚ್ಚಿಗೆದ್ದ ನಾಯಿ ಬಾಲಕನ ಮೇಲೆ ಪ್ರತಿ ದಾಳಿ ನಡೆಸಿದೆ. ಈ ವೇಳೆ ಬಾಲಕ ಶಫೀರ್​ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ. ಘಟನೆಯ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಮಾದನಾಯಕನಹಳ್ಳಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕೋಲು ಎಸೆದಿದ್ದಕ್ಕೆ ಬಾಲಕನ ಮೇಲೆ ದಾಳಿ ಮಾಡಿದ ನಾಯಿ.. ಎಲ್ಲಿ?

Updated on: Oct 01, 2020 | 8:31 AM

ನೆಲಮಂಗಲ: ಬೀದಿ ನಾಯಿ ಬಾಲಕನ ಮೇಲೆ ದಾಳಿ ಮಾಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾದವಾರ ಗ್ರಾಮದಲ್ಲಿ ನಡೆದಿದೆ. ಶಫೀರ್ (11) ನಾಯಿಯಿಂದ ದಾಳಿಗೆ ಒಳಪಟ್ಟ ಬಾಲಕ.

ರಸ್ತೆಯಲ್ಲಿ ನಿಂತಿದ್ದ ನಾಯಿಗೆ ಕೋಲು ಎಸೆದ ಕಾರಣ ರೊಚ್ಚಿಗೆದ್ದ ನಾಯಿ ಬಾಲಕನ ಮೇಲೆ ಪ್ರತಿ ದಾಳಿ ನಡೆಸಿದೆ. ಈ ವೇಳೆ ಬಾಲಕ ಶಫೀರ್​ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ. ಘಟನೆಯ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಮಾದನಾಯಕನಹಳ್ಳಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.