Townhall ಬಳಿ ಯಾರೂ ಬರಬೇಡಿ, ವದಂತಿಗೆ ಕಿವಿಗೊಡಬೇಡಿ: ಶಾಸಕ ಜಮೀರ್ ಹೀಗ್ಯಾಕೆ ಮನವಿ ಮಾಡಿದ್ರು?

ಬೆಂಗಳೂರು:ಕೆ.ಜಿ. ಹಳ್ಳಿ-ಡಿ.ಜೆ ಹಳ್ಳಿ ಹಿಂಸಾಚಾರ ಪ್ರಕರಣ ಕ್ಷಣಕೊಂದು ತಿರುವು ಪಡೆಯುತ್ತಿದ್ದು, ಈಗ ಮುಸ್ಲಿಂ ಸಮುದಾಯದ ನಡುವೆ ಮತ್ತೊಂದು ವದಂತಿ ಹರಡಿರುವ ವಿಚಾರ ಬೆಳಕಿಗೆ ಬಂದಿದೆ. ಮುಸ್ಲಿಂ ಸಮುದಾಯದವರು ಟೌನ್ ಹಾಲ್ ಬಳಿ ಸಭೆ ಸೇರಬೇಕೆಂದು ಷರಿಯತ್​ನಿಂದ ಸಂದೇಶ ಬಂದಿದೆ ಎಂದು ವದಂತಿಯೊಂದು ಎಲ್ಲೆಡೆ ಹಬ್ಬುತ್ತಿದೆ. ಈ ವಿಚಾರ ತಿಳಿದ ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಹೇಳಿಕೆ ನೀಡಿದ್ದು, ಟೌನ್ ಹಾಲ್ ಬಳಿ ಸಭೆ ಸೇರುವುದು ಕೇವಲ ಒಂದು ವದಂತಿಯಾಗಿದೆ, ಯಾರೂ ಸಹ ಟೌನ್ ಹಾಲ್ […]

Townhall ಬಳಿ ಯಾರೂ ಬರಬೇಡಿ, ವದಂತಿಗೆ ಕಿವಿಗೊಡಬೇಡಿ: ಶಾಸಕ ಜಮೀರ್ ಹೀಗ್ಯಾಕೆ ಮನವಿ ಮಾಡಿದ್ರು?
ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಖಾನ್ ಭವ್ಯ ಬಂಗಲೆ ಮೇಲೆ ಐಟಿ ದಾಳಿ; ಶಾಸಕ ಜಮೀರ್ ಆಸ್ತಿಪಾಸ್ತಿ ಎಷ್ಟಿದೆ? ವಿವರ ಇಲ್ಲಿದೆ

Updated on: Aug 12, 2020 | 3:01 PM

ಬೆಂಗಳೂರು:ಕೆ.ಜಿ. ಹಳ್ಳಿ-ಡಿ.ಜೆ ಹಳ್ಳಿ ಹಿಂಸಾಚಾರ ಪ್ರಕರಣ ಕ್ಷಣಕೊಂದು ತಿರುವು ಪಡೆಯುತ್ತಿದ್ದು, ಈಗ ಮುಸ್ಲಿಂ ಸಮುದಾಯದ ನಡುವೆ ಮತ್ತೊಂದು ವದಂತಿ ಹರಡಿರುವ ವಿಚಾರ ಬೆಳಕಿಗೆ ಬಂದಿದೆ.

ಮುಸ್ಲಿಂ ಸಮುದಾಯದವರು ಟೌನ್ ಹಾಲ್ ಬಳಿ ಸಭೆ ಸೇರಬೇಕೆಂದು ಷರಿಯತ್​ನಿಂದ ಸಂದೇಶ ಬಂದಿದೆ ಎಂದು ವದಂತಿಯೊಂದು ಎಲ್ಲೆಡೆ ಹಬ್ಬುತ್ತಿದೆ. ಈ ವಿಚಾರ ತಿಳಿದ ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಹೇಳಿಕೆ ನೀಡಿದ್ದು, ಟೌನ್ ಹಾಲ್ ಬಳಿ ಸಭೆ ಸೇರುವುದು ಕೇವಲ ಒಂದು ವದಂತಿಯಾಗಿದೆ, ಯಾರೂ ಸಹ ಟೌನ್ ಹಾಲ್ ಬಳಿ ಬರಬೇಡಿ ಎಂದು ಮನವಿ ಮಾಡಿದ್ದಾರೆ.

ಜೊತೆಗೆ ಮಹಮ್ಮದ್ ಪೈಗಂಬರರ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಯುವಕನನ್ನು ಪೊಲೀಸರು ಈಗಾಗಲೇ ಬಂಧಿಸಿರುವುದರಿಂದ, ಯಾರೂ ಸಹ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಮುಸ್ಲಿಂ ಸಮುದಾಯದವರಲ್ಲಿ ಮನವಿ ಮಾಡಿದ್ದಾರೆ.

Published On - 3:00 pm, Wed, 12 August 20