ಕುಡಿದ ಮತ್ತಿನಲ್ಲಿ ತುಂಬಿ ಹರಿಯುತ್ತಿದ್ದ ನದಿಗೆ ಹಾರಿದ ಕುಡುಕ.. ಮುಂದೇನಾಯ್ತು?

ಬೆಳಗಾವಿ: ತುಂಬಿ ಹರಿಯುತ್ತಿರುವ ನದಿಗೆ ಹಾರಿ ಕುಡುಕ ಹುಚ್ಚಾಟ ಮೆರೆದಿರುವ ಘಟನೆ ಮೂಡಲಗಿ ತಾಲೂಕಿನ ಢವಳೇಶ್ವರ ಬಳಿಯ ಘಟಪ್ರಭಾ ನದಿ ಬಳಿ ನಡೆದಿದೆ. ಢವಳೇಶ್ವರ ಗ್ರಾಮದ ನಿವಾಸಿ ಹಾಲಪ್ಪ ಕುಡಿದ ಮತ್ತಿನಲ್ಲಿ ಉಕ್ಕಿ ಹರಿಯುತ್ತಿರುವ ಘಟಪ್ರಭಾ ನದಿಗೆ ಹಾರಿ ಹುಚ್ಚಾಟ ಪ್ರದರ್ಶಿಸಿದ್ದಾನೆ. ನದಿಗೆ ಹಾರಿದ ಬಳಿಕ ಈಜಲು ಆಗದೆ ಸೇತುವೆ ಕೆಳಭಾಗದಲ್ಲಿ ತೆಲಿ ಹೋಗಿದ್ದಾನೆ. ಸೇತುವೆ ದಾಟಿ ಮತ್ತೆ ನದಿ ನೀರಿನಲ್ಲಿ ಮೇಲೆದಿದ್ದಾನೆ. ನೂರು ಮೀಟರ್ ನಷ್ಟು ಮುಂದೆ ಸಾಗಿ ಈಜಿ ಹೊರ ಬಂದಿದ್ದಾನೆ. ಹಾಲಪ್ಪ ಬೆಳಗಾವಿಯ […]

ಕುಡಿದ ಮತ್ತಿನಲ್ಲಿ ತುಂಬಿ ಹರಿಯುತ್ತಿದ್ದ ನದಿಗೆ ಹಾರಿದ ಕುಡುಕ.. ಮುಂದೇನಾಯ್ತು?

Updated on: Sep 27, 2020 | 8:18 AM

ಬೆಳಗಾವಿ: ತುಂಬಿ ಹರಿಯುತ್ತಿರುವ ನದಿಗೆ ಹಾರಿ ಕುಡುಕ ಹುಚ್ಚಾಟ ಮೆರೆದಿರುವ ಘಟನೆ ಮೂಡಲಗಿ ತಾಲೂಕಿನ ಢವಳೇಶ್ವರ ಬಳಿಯ ಘಟಪ್ರಭಾ ನದಿ ಬಳಿ ನಡೆದಿದೆ.

ಢವಳೇಶ್ವರ ಗ್ರಾಮದ ನಿವಾಸಿ ಹಾಲಪ್ಪ ಕುಡಿದ ಮತ್ತಿನಲ್ಲಿ ಉಕ್ಕಿ ಹರಿಯುತ್ತಿರುವ ಘಟಪ್ರಭಾ ನದಿಗೆ ಹಾರಿ ಹುಚ್ಚಾಟ ಪ್ರದರ್ಶಿಸಿದ್ದಾನೆ. ನದಿಗೆ ಹಾರಿದ ಬಳಿಕ ಈಜಲು ಆಗದೆ ಸೇತುವೆ ಕೆಳಭಾಗದಲ್ಲಿ ತೆಲಿ ಹೋಗಿದ್ದಾನೆ. ಸೇತುವೆ ದಾಟಿ ಮತ್ತೆ ನದಿ ನೀರಿನಲ್ಲಿ ಮೇಲೆದಿದ್ದಾನೆ. ನೂರು ಮೀಟರ್ ನಷ್ಟು ಮುಂದೆ ಸಾಗಿ ಈಜಿ ಹೊರ ಬಂದಿದ್ದಾನೆ. ಹಾಲಪ್ಪ ಬೆಳಗಾವಿಯ ಢವಳೇಶ್ವರದಿಂದ ಬಾಗಲಕೋಟೆಯ ಢವಳೇಶ್ವರಕ್ಕೆ ಸಾರಾಯಿ ತರಲು ಹೋಗಿದ್ದ.

ಕುಡಿದ ಮತ್ತಿನಲ್ಲಿಯೇ‌ ನದಿ ಹಾರಿ ಈಜಿ ದಡ ಸೇರಿದ್ದಾನೆ. ಕುಡುಕನ ಹುಚ್ಚಾಟ ಕಂಡು ಢವಳೇಶ್ವರ ಗ್ರಾಮಸ್ಥರು ದಂಗಾಗಿದ್ದಾರೆ. ಅದೃಷ್ಟವಶಾತ್ ಪ್ರಾಣಹಾನಿ ಸಂಭವಿಸಿಲ್ಲ.