ಯಾದಗಿರಿ: ಜಾತ್ರೆ ಅಂದ್ರೆ ಸುತ್ತಮುತ್ತಲ ಜನರಿಗೆ ಸಂಭ್ರಮದ ಕ್ಷಣ. ಅದ್ರಲ್ಲೂ ಒಂದೊಂದು ಕಡೆ ಒಂದೊಂದು ವಿಶೇಷತೆ ಇರುತ್ತೆ. ಯಾದಗಿರಿಯಲ್ಲೂ ನಡೆದ ದುರ್ಗಾದೇವಿ ಜಾತ್ರೆ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ.
ಮೈತುಂಬಾ ಭಕ್ತಿಯ ಭಂಡಾರ.. ಹೆಜ್ಜೆ ಹೆಜ್ಜೆಗೂ ಚೆಲ್ಲಿರೋ ಅರಿಶಿನ ಕುಂಕುಮ. ದೇವರಧ್ಯಾನದಲ್ಲಿ ಮುಳುಗಿರೋ ಭಕ್ತಸಾಗರ. ನೋಡ ನೋಡುತ್ತಲೇ ಜನರ ನಡುವೆ ದೇವರ ಪಲ್ಲಕ್ಕಿ ಸಾಗಿ ಬಂದಿತ್ತು. ಕೇಕೆ ಶಿಳ್ಳೆ ಮೂಲಕ ಜನ ಕೂಡ ಅಬ್ಬರಿಸಿದ್ರು. ಜಾತ್ರೆ ಅಂದ್ಮೇಲೆ ಇಷ್ಟೊಂದ್ ಜೋಶ್ ಇರ್ಲೇಬೇಕು ಬಿಡಿ. ಬಟ್ ಅದಕ್ಕಿಂತ ಇಲ್ಲಿ ಸ್ಪೆಷಲ್ ಅಂದ್ರೆ ಇದೇ ಕೊಕ್ಕೊಕ್ಕೋ ಕೋಳಿಗಳು. ಖಡಕ್ ಹುಂಜದಿಂದ ಹಿಡ್ದು ಗುಂಡು ಗುಂಡು ಕೋಳಿಗಳವರೆಗೂ ಎಲ್ರ ಕೈಯಲ್ಲೂ ಕೋಳಿಗಳದ್ದೇ ದರ್ಬಾರ್.
ಕೋಳಿಗಳನ್ನ ಪಲ್ಲಕ್ಕಿ ಮೇಲೆ ಎಸೆದು ಹರಕೆ ತೀರಿಸಿದ ಭಕ್ತರು:
ದುರ್ಗಾದೇವಿ ದರ್ಶನ ಪಡೆಯಲಿರುವ ಡಿಕೆಶಿ:
ಇನ್ನು ಎರಡು ದಿನಗಳ ಈ ಉತ್ಸವ ನಿನ್ನೆಯಿಂದ ಶುರುವಾಗಿದ್ದು, ಇವತ್ತು ಕನಕಪುರದ ಬಂಡೆ ಡಿ.ಕೆ.ಶಿವಕುಮಾರ್ ದುರ್ಗಾದೇವಿ ದರ್ಶನ ಪಡೆಯಲಿದ್ದಾರೆ. ಕಳೆದ ವರ್ಷ ಡಿಕೆಶಿ ಜಾತ್ರೆಗೆ ಬರುತ್ತೇನೆಂದು ಬಾರದಿದ್ದಕ್ಕೆ ಇಡಿ ಸಂಕಷ್ಟ ಎದುರಾಗಿತ್ತು ಅಂತಿದ್ದಾರೆ ಇಲ್ಲಿನ ಅರ್ಚಕರು. ಹೀಗಾಗಿ ಈ ಬಾರಿ ಜಾತ್ರೆಯಲ್ಲಿ ಭಾಗಿಯಾಗಿ ಡಿಕೆಶಿ ದೇವಿಗೆ ಪೂಜೆ ಸಲ್ಲಿಸಲಿದ್ದಾರಂತೆ. ಹತ್ತೂರ ಮಂದಿ ಪಾಲಿಗೆ ಶಕ್ತಿ ದೇವತೆ ಆಗಿರೋ ಗಡ್ಡಿ ದುರ್ಗಾದೇವಿ ಜಾತ್ರೆ ಅದ್ಧೂರಿಯಾಗಿ ನಡೀತಿದೆ. ಅದ್ರಲ್ಲೂ ಈ ಉತ್ಸವದಲ್ಲಿ ಕೋಳಿ, ಹುಂಜ ತೂರೋದೇ ಒಂದು ಸ್ಪೆಷಾಲಿಟಿ.
Published On - 9:02 am, Wed, 29 January 20