ನಂಜುಂಡೇಶ್ವರನಿಗೆ ಹಳೆಯ ನೋಟುಗಳ ಕಾಟ: ಹುಂಡಿಯಲ್ಲಿ ನಿಷೇಧಿತ ನೋಟು ಪತ್ತೆ!
ಮೈಸೂರು: ಹಳೆಯ 500 ಹಾಗೂ 1000 ಮುಖಬೆಲೆಯ ನೋಟುಗಳು ಬ್ಯಾನ್ ಆಗಿ 3 ವರ್ಷ ಕಳೆದ್ರೂ ಹಳೆಯ ನೋಟುಗಳ ಕಾಟ ತಪ್ಪಿಲ್ಲ. ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನದ ಹುಂಡಿಯಲ್ಲಿ ಹಳೆಯ ನೋಟುಗಳು ಪತ್ತೆಯಾಗಿವೆ. ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ಹುಂಡಿಯಲ್ಲಿ 1 ಸಾವಿರ ಮುಖಬೆಲೆಯ 8 ನೋಟುಗಳು, 500 ಮುಖಬೆಲೆಯ 55 ನೋಟುಗಳು ಪತ್ತೆಯಾಗಿವೆ. ಬರೋಬ್ಬರಿ 35,500 ರೂಪಾಯಿ ಹಳೆ ನೋಟುಗಳು ಸಿಕ್ಕಿವೆ. ಅಲ್ಲದೆ 13 ವಿದೇಶಿ ಕರೆನ್ಸಿ ಸಹಾ ದೊರೆತಿದೆ. ಒಂದು ತಿಂಗಳ ಅವಧಿಯ ಹುಂಡಿಯಲ್ಲಿ ಒಟ್ಟಾರೆಯಾಗಿ 83,12,484ರೂಪಾಯಿ […]
ಮೈಸೂರು: ಹಳೆಯ 500 ಹಾಗೂ 1000 ಮುಖಬೆಲೆಯ ನೋಟುಗಳು ಬ್ಯಾನ್ ಆಗಿ 3 ವರ್ಷ ಕಳೆದ್ರೂ ಹಳೆಯ ನೋಟುಗಳ ಕಾಟ ತಪ್ಪಿಲ್ಲ. ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನದ ಹುಂಡಿಯಲ್ಲಿ ಹಳೆಯ ನೋಟುಗಳು ಪತ್ತೆಯಾಗಿವೆ.
ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ಹುಂಡಿಯಲ್ಲಿ 1 ಸಾವಿರ ಮುಖಬೆಲೆಯ 8 ನೋಟುಗಳು, 500 ಮುಖಬೆಲೆಯ 55 ನೋಟುಗಳು ಪತ್ತೆಯಾಗಿವೆ. ಬರೋಬ್ಬರಿ 35,500 ರೂಪಾಯಿ ಹಳೆ ನೋಟುಗಳು ಸಿಕ್ಕಿವೆ. ಅಲ್ಲದೆ 13 ವಿದೇಶಿ ಕರೆನ್ಸಿ ಸಹಾ ದೊರೆತಿದೆ.
ಒಂದು ತಿಂಗಳ ಅವಧಿಯ ಹುಂಡಿಯಲ್ಲಿ ಒಟ್ಟಾರೆಯಾಗಿ 83,12,484ರೂಪಾಯಿ ಹಾಗೂ 45 ಗ್ರಾಂ ಚಿನ್ನ, 1ಕೆಜಿ 400 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ಸುಮಾರು ನೂರು ಜನರು ಹುಂಡಿ ಎಣಿಕೆ ಕಾರ್ಯ ನಡೆಸಿದ್ದಾರೆಂದು ನಂಜನಗೂಡು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಶಿವಕುಮಾರಯ್ಯ ಮಾಹಿತಿ ನೀಡಿದ್ದಾರೆ.
Published On - 11:29 am, Wed, 29 January 20