ದುರ್ಗಾದೇವಿ ಜಾತ್ರೆಯಲ್ಲಿ ಕೋಳಿಗಳ ದರ್ಬಾರ್: ಇಂದು ಡಿಕೆಶಿ ಭೇಟಿ!

ಯಾದಗಿರಿ: ಜಾತ್ರೆ ಅಂದ್ರೆ ಸುತ್ತಮುತ್ತಲ ಜನರಿಗೆ ಸಂಭ್ರಮದ ಕ್ಷಣ. ಅದ್ರಲ್ಲೂ ಒಂದೊಂದು ಕಡೆ ಒಂದೊಂದು ವಿಶೇಷತೆ ಇರುತ್ತೆ. ಯಾದಗಿರಿಯಲ್ಲೂ ನಡೆದ ದುರ್ಗಾದೇವಿ ಜಾತ್ರೆ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ಮೈತುಂಬಾ ಭಕ್ತಿಯ ಭಂಡಾರ.. ಹೆಜ್ಜೆ ಹೆಜ್ಜೆಗೂ ಚೆಲ್ಲಿರೋ ಅರಿಶಿನ ಕುಂಕುಮ. ದೇವರಧ್ಯಾನದಲ್ಲಿ ಮುಳುಗಿರೋ ಭಕ್ತಸಾಗರ. ನೋಡ ನೋಡುತ್ತಲೇ ಜನರ ನಡುವೆ ದೇವರ ಪಲ್ಲಕ್ಕಿ ಸಾಗಿ ಬಂದಿತ್ತು. ಕೇಕೆ ಶಿಳ್ಳೆ ಮೂಲಕ ಜನ ಕೂಡ ಅಬ್ಬರಿಸಿದ್ರು. ಜಾತ್ರೆ ಅಂದ್ಮೇಲೆ ಇಷ್ಟೊಂದ್ ಜೋಶ್ ಇರ್ಲೇಬೇಕು ಬಿಡಿ. ಬಟ್ ಅದಕ್ಕಿಂತ ಇಲ್ಲಿ ಸ್ಪೆಷಲ್ […]

ದುರ್ಗಾದೇವಿ ಜಾತ್ರೆಯಲ್ಲಿ ಕೋಳಿಗಳ ದರ್ಬಾರ್: ಇಂದು ಡಿಕೆಶಿ ಭೇಟಿ!
Follow us
ಸಾಧು ಶ್ರೀನಾಥ್​
|

Updated on:Jan 29, 2020 | 9:04 AM

ಯಾದಗಿರಿ: ಜಾತ್ರೆ ಅಂದ್ರೆ ಸುತ್ತಮುತ್ತಲ ಜನರಿಗೆ ಸಂಭ್ರಮದ ಕ್ಷಣ. ಅದ್ರಲ್ಲೂ ಒಂದೊಂದು ಕಡೆ ಒಂದೊಂದು ವಿಶೇಷತೆ ಇರುತ್ತೆ. ಯಾದಗಿರಿಯಲ್ಲೂ ನಡೆದ ದುರ್ಗಾದೇವಿ ಜಾತ್ರೆ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ.

ಮೈತುಂಬಾ ಭಕ್ತಿಯ ಭಂಡಾರ.. ಹೆಜ್ಜೆ ಹೆಜ್ಜೆಗೂ ಚೆಲ್ಲಿರೋ ಅರಿಶಿನ ಕುಂಕುಮ. ದೇವರಧ್ಯಾನದಲ್ಲಿ ಮುಳುಗಿರೋ ಭಕ್ತಸಾಗರ. ನೋಡ ನೋಡುತ್ತಲೇ ಜನರ ನಡುವೆ ದೇವರ ಪಲ್ಲಕ್ಕಿ ಸಾಗಿ ಬಂದಿತ್ತು. ಕೇಕೆ ಶಿಳ್ಳೆ ಮೂಲಕ ಜನ ಕೂಡ ಅಬ್ಬರಿಸಿದ್ರು. ಜಾತ್ರೆ ಅಂದ್ಮೇಲೆ ಇಷ್ಟೊಂದ್ ಜೋಶ್ ಇರ್ಲೇಬೇಕು ಬಿಡಿ. ಬಟ್ ಅದಕ್ಕಿಂತ ಇಲ್ಲಿ ಸ್ಪೆಷಲ್ ಅಂದ್ರೆ ಇದೇ ಕೊಕ್ಕೊಕ್ಕೋ ಕೋಳಿಗಳು. ಖಡಕ್ ಹುಂಜದಿಂದ ಹಿಡ್ದು ಗುಂಡು ಗುಂಡು ಕೋಳಿಗಳವರೆಗೂ ಎಲ್ರ ಕೈಯಲ್ಲೂ ಕೋಳಿಗಳದ್ದೇ ದರ್ಬಾರ್.

ಕೋಳಿಗಳನ್ನ ಪಲ್ಲಕ್ಕಿ ಮೇಲೆ ಎಸೆದು ಹರಕೆ ತೀರಿಸಿದ ಭಕ್ತರು: ಯಾದಗಿರಿ ಜಿಲ್ಲೆ ವಡಗೇರ ತಾಲೂಕಿನ ಗೋನಾಳ್ ಗ್ರಾಮದ ಗಡ್ಡೆ ದುರ್ಗಾದೇವಿ ಜಾತ್ರೆಯಲ್ಲಿ ನಡೆದ ಪಲ್ಲಕ್ಕಿ ಉತ್ಸವದ ನೋಟವಿದು. ದೇವಿಯನ್ನ ಪಲ್ಲಕ್ಕಿಯಲ್ಲಿ ಕರೆದೊಯ್ದು ಕೃಷ್ಣಾ ನದಿಯಲ್ಲಿ ಗಂಗಾಸ್ನಾನ ಮಾಡಿಸಿ ಮೆರವಣಿಗೆ ಮೂಲಕ ಕರೆ ತರುತ್ತಾರೆ. ಬಳಿಕ ದೇವಿಯ ಪಲ್ಲಕಿಯನ್ನ ಅದ್ಧೂರಿಯಾಗಿ ಮೆರವಣಿಗೆ ಮಾಡಲಾಗುತ್ತೆ. ಇನ್ನು ದೇವಸ್ಥಾನದ ಮುಂದೆ ರೆಡಿಯಾದ ಕೆಂಡದಲ್ಲಿ ದೇಗುಲದ ಪೂಜಾರಿ ಹಾಗೂ ಪಲ್ಲಕ್ಕಿಯ ಪ್ರವೇಶವಾಗುತ್ತೆ. ಇದೆ ವೇಳೆ ನೂರಾರು ಭಕ್ತರು ತಂದಿರುವ ಕೋಳಿ ಮತ್ತು ಹುಂಜಗಳನ್ನ ಪಲ್ಲಕ್ಕಿ ಮೇಲೆ ಎಸೆದು ಹರಕೆ ತೀರಿಸ್ತಾರೆ. ಶಕ್ತಿ ದೇವತೆ ಗಡ್ಡಿ ದುರ್ಗಾದೇವಿ ದರ್ಶನ ಪಡೆಯಲು ರಾಜ್ಯ ಸೇರಿದಂತೆ ರಾಜ್ಯದ ನೂರಾರು ಭಕ್ತರು ಬರುತ್ತಾರೆ.

ದುರ್ಗಾದೇವಿ ದರ್ಶನ ಪಡೆಯಲಿರುವ ಡಿಕೆಶಿ: ಇನ್ನು ಎರಡು ದಿನಗಳ ಈ ಉತ್ಸವ ನಿನ್ನೆಯಿಂದ ಶುರುವಾಗಿದ್ದು, ಇವತ್ತು ಕನಕಪುರದ ಬಂಡೆ ಡಿ.ಕೆ.ಶಿವಕುಮಾರ್ ದುರ್ಗಾದೇವಿ ದರ್ಶನ ಪಡೆಯಲಿದ್ದಾರೆ. ಕಳೆದ ವರ್ಷ ಡಿಕೆಶಿ ಜಾತ್ರೆಗೆ ಬರುತ್ತೇನೆಂದು ಬಾರದಿದ್ದಕ್ಕೆ ಇಡಿ ಸಂಕಷ್ಟ ಎದುರಾಗಿತ್ತು ಅಂತಿದ್ದಾರೆ ಇಲ್ಲಿನ ಅರ್ಚಕರು. ಹೀಗಾಗಿ ಈ ಬಾರಿ ಜಾತ್ರೆಯಲ್ಲಿ ಭಾಗಿಯಾಗಿ ಡಿಕೆಶಿ ದೇವಿಗೆ ಪೂಜೆ ಸಲ್ಲಿಸಲಿದ್ದಾರಂತೆ. ಹತ್ತೂರ ಮಂದಿ ಪಾಲಿಗೆ ಶಕ್ತಿ ದೇವತೆ ಆಗಿರೋ ಗಡ್ಡಿ ದುರ್ಗಾದೇವಿ ಜಾತ್ರೆ ಅದ್ಧೂರಿಯಾಗಿ ನಡೀತಿದೆ. ಅದ್ರಲ್ಲೂ ಈ ಉತ್ಸವದಲ್ಲಿ ಕೋಳಿ, ಹುಂಜ ತೂರೋದೇ ಒಂದು ಸ್ಪೆಷಾಲಿಟಿ.

Published On - 9:02 am, Wed, 29 January 20

ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ