ಆರೋಗ್ಯ ಸಚಿವ ರಾಮುಲು ತವರು ಜಿಲ್ಲೆಯಲ್ಲೂ ಕಿಲ್ಲರ್ ಕೊರೊನಾ ಅಟ್ಟಹಾಸ

|

Updated on: Jun 29, 2020 | 2:07 PM

ಬಳ್ಳಾರಿ: ವೈದ್ಯಕೀಯ ಶಿಕ್ಷಣ ಸಚಿವರ ತವರು ಜಿಲ್ಲೆ ಅಷ್ಟೇ ಅಲ್ಲ, ಆರೋಗ್ಯ ಸಚಿವರ ತವರು ಜಿಲ್ಲೆಯಲ್ಲೂ ಸೋಂಕಿತರ ಜೀವವನ್ನು ಕಿಲ್ಲರ್ ಕೊರೊನಾ ಕಸಿಯುತ್ತಿದೆ. ಬಳ್ಳಾರಿ ಜಿಲ್ಲೆಯಲ್ಲಿ ಒಂದೇ ದಿನ 8 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಕೊರೊನಾದಿಂದ ಈವರೆಗೆ 22 ಜನ ಮೃತಪಟ್ಟಿದ್ದಾರೆ. ನೆರೆಯ ಆಂಧ್ರಪ್ರದೇಶ ಮೂಲದ ಕರ್ನೂಲ್ ಜಿಲ್ಲೆಯ ಆದೋನಿಯ  52 ವರ್ಷದ ಮಹಿಳೆ, ಕೊಪ್ಪಳ ಜಿಲ್ಲೆಯ ರಂಗಾಪುರ ಕ್ಯಾಂಪಿನ 43 ವರ್ಷದ ವ್ಯಕ್ತಿ, ಹೊಸಪೇಟೆ ತಾಲೂಕಿನ ಧರ್ಮಸಾಗರದ 56 ವರ್ಷದ ವ್ಯಕ್ತಿ, ಹಾಗೂ ಹೊಸಪೇಟೆಯ ಆಜಾದ್ ನಗರದ […]

ಆರೋಗ್ಯ ಸಚಿವ ರಾಮುಲು ತವರು ಜಿಲ್ಲೆಯಲ್ಲೂ ಕಿಲ್ಲರ್ ಕೊರೊನಾ ಅಟ್ಟಹಾಸ
Follow us on

ಬಳ್ಳಾರಿ: ವೈದ್ಯಕೀಯ ಶಿಕ್ಷಣ ಸಚಿವರ ತವರು ಜಿಲ್ಲೆ ಅಷ್ಟೇ ಅಲ್ಲ, ಆರೋಗ್ಯ ಸಚಿವರ ತವರು ಜಿಲ್ಲೆಯಲ್ಲೂ ಸೋಂಕಿತರ ಜೀವವನ್ನು ಕಿಲ್ಲರ್ ಕೊರೊನಾ ಕಸಿಯುತ್ತಿದೆ. ಬಳ್ಳಾರಿ ಜಿಲ್ಲೆಯಲ್ಲಿ ಒಂದೇ ದಿನ 8 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಕೊರೊನಾದಿಂದ ಈವರೆಗೆ 22 ಜನ ಮೃತಪಟ್ಟಿದ್ದಾರೆ.

ನೆರೆಯ ಆಂಧ್ರಪ್ರದೇಶ ಮೂಲದ ಕರ್ನೂಲ್ ಜಿಲ್ಲೆಯ ಆದೋನಿಯ  52 ವರ್ಷದ ಮಹಿಳೆ, ಕೊಪ್ಪಳ ಜಿಲ್ಲೆಯ ರಂಗಾಪುರ ಕ್ಯಾಂಪಿನ 43 ವರ್ಷದ ವ್ಯಕ್ತಿ, ಹೊಸಪೇಟೆ ತಾಲೂಕಿನ ಧರ್ಮಸಾಗರದ 56 ವರ್ಷದ ವ್ಯಕ್ತಿ, ಹಾಗೂ ಹೊಸಪೇಟೆಯ ಆಜಾದ್ ನಗರದ 66 ವರ್ಷ ಪುರುಷ ಸೇರಿದಂತೆ ಇಂದು 8 ಮಂದಿ ಸಾವಿಗೀಡಾಗಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ಮರಣ ಮೃದಂಗ ಬಾರಿಸುತ್ತಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಇದುವರೆಗೆ 22 ಮಂದಿ ಮೃತಪಟ್ಟಿದ್ದಾರೆ ಎಂದು ಟಿವಿ9ಗೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮಾಹಿತಿ ನೀಡಿದ್ದಾರೆ.

Published On - 2:00 pm, Mon, 29 June 20