ಸೀಲ್ಡೌನ್ ಏರಿಯಾದಿಂದ ಹೊರಬಂದು ವ್ಯಾಪಾರ: ಜನರಿಗೆ ಶುರುವಾಯ್ತು ಆತಂಕ, ಎಲ್ಲಿ?
ಕೊಡಗು: ಸೀಲ್ಡೌನ್ ಏರಿಯಾದಿಂದ ಹೊರಬಂದ ವರ್ತಕರು ಅಂಗಡಿ ಮುಂಗಟ್ಟುಗಳನ್ನು ತೆರೆದು ವ್ಯಾಪಾರ ನಡೆಸಿರುವ ಘಟನೆ ಜಿಲ್ಲೆಯ ವಿರಾಜಪೇಟೆ ಪಟ್ಟಣದಲ್ಲಿ ಕಂಡು ಬಂದಿದೆ. ದುಬೈನಿಂದ ಹಿಂದಿರುಗಿದ್ದ ಸ್ಥಳೀಯನಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಟ್ಟಣದ ಮೀನುಪೇಟೆ ಬಡಾವಣೆಯನ್ನ ಸೀಲ್ಡೌನ್ ಮಾಡಲಾಗಿತ್ತು. ಆದರೆ, ಇದೇ ಬಡಾವಣೆಯ ವರ್ತಕರೊಬ್ಬರು ಹೊರಬಂದು ಪಟ್ಟಣದಲ್ಲಿರುವ ತಮ್ಮ ದಿನಸಿ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವ ದೃಶ್ಯ ಸ್ಥಳೀಯರ ಕಣ್ಣಿಗೆ ಬಿತ್ತು. ಕೂಡಲೇ ಅಧಿಕಾರಿಗಳಿಗೆ ಕರೆಮಾಡಿದ ಸ್ಥಳೀಯರು ಅವರನ್ನು ತರಾಟೆಗೆ ತೆಗೆದುಕೊಂಡರು. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ವಿರಾಜಪೇಟೆ ತಹಶಿಲ್ದಾರ್ ನಂದೀಶ್ […]
ಕೊಡಗು: ಸೀಲ್ಡೌನ್ ಏರಿಯಾದಿಂದ ಹೊರಬಂದ ವರ್ತಕರು ಅಂಗಡಿ ಮುಂಗಟ್ಟುಗಳನ್ನು ತೆರೆದು ವ್ಯಾಪಾರ ನಡೆಸಿರುವ ಘಟನೆ ಜಿಲ್ಲೆಯ ವಿರಾಜಪೇಟೆ ಪಟ್ಟಣದಲ್ಲಿ ಕಂಡು ಬಂದಿದೆ.
ದುಬೈನಿಂದ ಹಿಂದಿರುಗಿದ್ದ ಸ್ಥಳೀಯನಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಟ್ಟಣದ ಮೀನುಪೇಟೆ ಬಡಾವಣೆಯನ್ನ ಸೀಲ್ಡೌನ್ ಮಾಡಲಾಗಿತ್ತು. ಆದರೆ, ಇದೇ ಬಡಾವಣೆಯ ವರ್ತಕರೊಬ್ಬರು ಹೊರಬಂದು ಪಟ್ಟಣದಲ್ಲಿರುವ ತಮ್ಮ ದಿನಸಿ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವ ದೃಶ್ಯ ಸ್ಥಳೀಯರ ಕಣ್ಣಿಗೆ ಬಿತ್ತು. ಕೂಡಲೇ ಅಧಿಕಾರಿಗಳಿಗೆ ಕರೆಮಾಡಿದ ಸ್ಥಳೀಯರು ಅವರನ್ನು ತರಾಟೆಗೆ ತೆಗೆದುಕೊಂಡರು.
ತಕ್ಷಣವೇ ಸ್ಥಳಕ್ಕೆ ಆಗಮಿಸಿದ ವಿರಾಜಪೇಟೆ ತಹಶಿಲ್ದಾರ್ ನಂದೀಶ್ ಅಂಗಡಿ ಬಾಗಿಲು ಬಂದ್ ಮಾಡಿಸಿದರು. ಜೊತೆಗೆ ವರ್ತಕರನ್ನ ಹೋಂ ಕ್ವಾರಂಟೈನ್ ಆಗಲು ಸೂಚಿಸಿದರು. ಜೊತೆಗೆ ಸೀಲ್ಡೌನ್ ಏರಿಯಾದಿಂದ ಹೊರಬಂದ ವ್ಯಾಪಾರಿಗಳ ಅಂಗಡಿ ಲೈಸೆನ್ಸ್ ರದ್ದು ಮಾಡಲು ಸೂಚನೆ ನೀಡಿದರು.
Published On - 2:32 pm, Mon, 29 June 20