My Lord! ಪಡ್ಡೆ ಯುವಕನಂತೆ ಹಾರ್ಲೆ ಬೈಕ್​ ಮೇಲೆ ಕುಳಿತ ಇವರು ಯಾರು ಗೊತ್ತಾ!?

ಪಡ್ಡೆ ಯುವಕನಂತೆ ಹಾರ್ಲೆ ಡೇವಿಡ್​ಸನ್ ಬೈಕ್​ ಮೇಲೆ ಕುಳಿತಿರುವ ಇವರನ್ನು ಗುರುತಿಸಿ ನೋಡೋಣಾ!? ಹೀಗೊಂದು ಸವಾಲ್ ಕೊಟ್ಟರೆ ತಕ್ಷಣಕ್ಕೆ ನೀವು ಆತ ಸಿನಿಮಾ ನಟ ಅಂತಲೋ ಅಥವಾ ಕ್ರೀಡಾಪಟು ಅಂತಲೂ ಅಥವಾ ಮತ್ಯಾರೋ ಸಖತ್ ದುಡ್ಡಿರುವ ಆಸಾಮಿ ಎಂದು ಯೋಚಿಸತೊಡಗುತ್ತೀರಿ. ಇನ್ನು ಕಣ್ಣಲ್ಲಿ ಕಣ್ಣಿಟ್ಟು ಯಾರಿರಬಹುದು ಈತ ಅಂತಾ ನೋಡಿದರೂ ತಕ್ಷಣಕ್ಕೆ ಆತ ಯಾರು ಅಂತಾ ಹೇಳುವುದಕ್ಕೆ ಆಗುವುದಿಲ್ಲ. ಯಾಕೆ ಅಂದ್ರೆ ಆ ವ್ಯಕ್ತಿ ಅಂತಿಂಥವರಲ್ಲ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರು!​ ಏನಪ್ಪಾ […]

My Lord! ಪಡ್ಡೆ ಯುವಕನಂತೆ ಹಾರ್ಲೆ ಬೈಕ್​ ಮೇಲೆ ಕುಳಿತ ಇವರು ಯಾರು ಗೊತ್ತಾ!?
Follow us
ಸಾಧು ಶ್ರೀನಾಥ್​
|

Updated on: Jun 29, 2020 | 2:57 PM

ಪಡ್ಡೆ ಯುವಕನಂತೆ ಹಾರ್ಲೆ ಡೇವಿಡ್​ಸನ್ ಬೈಕ್​ ಮೇಲೆ ಕುಳಿತಿರುವ ಇವರನ್ನು ಗುರುತಿಸಿ ನೋಡೋಣಾ!? ಹೀಗೊಂದು ಸವಾಲ್ ಕೊಟ್ಟರೆ ತಕ್ಷಣಕ್ಕೆ ನೀವು ಆತ ಸಿನಿಮಾ ನಟ ಅಂತಲೋ ಅಥವಾ ಕ್ರೀಡಾಪಟು ಅಂತಲೂ ಅಥವಾ ಮತ್ಯಾರೋ ಸಖತ್ ದುಡ್ಡಿರುವ ಆಸಾಮಿ ಎಂದು ಯೋಚಿಸತೊಡಗುತ್ತೀರಿ. ಇನ್ನು ಕಣ್ಣಲ್ಲಿ ಕಣ್ಣಿಟ್ಟು ಯಾರಿರಬಹುದು ಈತ ಅಂತಾ ನೋಡಿದರೂ ತಕ್ಷಣಕ್ಕೆ ಆತ ಯಾರು ಅಂತಾ ಹೇಳುವುದಕ್ಕೆ ಆಗುವುದಿಲ್ಲ.

ಯಾಕೆ ಅಂದ್ರೆ ಆ ವ್ಯಕ್ತಿ ಅಂತಿಂಥವರಲ್ಲ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರು!​ ಏನಪ್ಪಾ ಸುಪ್ರೀಂ ಅಂಗಳದಿಂದ ಹೊರಬಂದು ಪಡ್ಡೆ ಹುಡುಗರಂತೆ ಐಷಾರಾಮಿ ಹಾರ್ಲೆ ಡೇವಿಡ್​ಸನ್ ಬೈಕ್ ಏರಿಕುಳಿತಿದ್ದಾರೆ ಎಂದು ನೀವು ಮೂಗುಮುರಿಯಬಹುದು. ಆದ್ರೆ ನಮ್ಮ ಸಿಜೆಐ ಬೊಬ್ಡೆ ಅವರಿಗೆ ಈ Harley Davidson ಬೈಕ್​ ಗೀಳು ಬಹಳ ಬಹಳ.

ಸಾಕ್ಷಾತ್​ ನ್ಯಾಯದೇವತೆಯ ಅಧಿಪೀಠದ ಮೇಲೆ ಗಜ ಗಾಂಭೀರ್ಯದಿಂದ ಕುಳಿತು ನ್ಯಾಯದ ತಕ್ಕಡಿ ತೂಗುವ CJI Bobde ಅವರು ಫಾರ್​ ಎ ಚೇಂಜ್ ಹೀಗೆ.. ಟೀ ಷರ್ಟ್​ ತೊಟ್ಟು, ಸ್ಪೋರ್ಟ್​ ಶೂ ಹಾಕಿಕೊಂಡು ರೊಯ್ಯಂತಾ ಹಾರ್ಲೆ ಡೇವಿಡ್​ಸನ್ ಬೈಕ್ ಅನ್ನು ತಮ್ಮ ಸ್ವಂತ ಊರಾದ ನಾಗಪುರದಲ್ಲಿ ಓಡಿಸಿದ್ದಾರೆ.