ವಿದ್ಯುತ್ ಲೈನ್ ದುರಸ್ತಿ ವೇಳೆ ಅವಘಡ, ಯುವ Power Man ಸಾವು

ಕೊಡಗು: ವಿದ್ಯುತ್ ಅವಘಡ ಸಂಭವಿಸಿ, ಯುವ ಪವರ್​ಮ್ಯಾನ್ (ಲೈನ್ ಮೆನ್) ಒಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಉಲ್ಲಾಸ್ (23) ಮೃತ ಲೈನ್ ಮೆನ್. 11 ಕೆ.ವಿ. ಸಾಮರ್ಥ್ಯದ ವಿದ್ಯುತ್ ಲೈನ್ ದುರಸ್ತಿ ಮಾಡುವ ವೇಳೆ ವಿದ್ಯುತ್ ಪ್ರವಹಿಸಿ ಈ ದುರ್ಘಟನೆ ಸಂಭವಿಸಿದೆ. ಸೋಮವಾರಪೇಟೆ ತಾಲೂಕಿನ ಶಾಂತಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಮೃತ ದುರ್ದೈವಿ ಉಲ್ಲಾಸ್ ಚಿಕ್ಕಮಗಳೂರು ಜಿಲ್ಲೆ ಕುಪ್ಪಲ್ ಗ್ರಾಮದ ನಿವಾಸಿ‌. ಉಲ್ಲಾಸ್, ನಾಲ್ಕು ವರ್ಷಗಳಿಂದ ಕೊಡ್ಲಿಪೇಟೆ ಚೆಸ್ಕಾಂ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ರು. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ […]

ವಿದ್ಯುತ್ ಲೈನ್ ದುರಸ್ತಿ ವೇಳೆ ಅವಘಡ, ಯುವ Power Man ಸಾವು

Updated on: Oct 02, 2020 | 11:07 AM

ಕೊಡಗು: ವಿದ್ಯುತ್ ಅವಘಡ ಸಂಭವಿಸಿ, ಯುವ ಪವರ್​ಮ್ಯಾನ್ (ಲೈನ್ ಮೆನ್) ಒಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಉಲ್ಲಾಸ್ (23) ಮೃತ ಲೈನ್ ಮೆನ್.

11 ಕೆ.ವಿ. ಸಾಮರ್ಥ್ಯದ ವಿದ್ಯುತ್ ಲೈನ್ ದುರಸ್ತಿ ಮಾಡುವ ವೇಳೆ ವಿದ್ಯುತ್ ಪ್ರವಹಿಸಿ ಈ ದುರ್ಘಟನೆ ಸಂಭವಿಸಿದೆ. ಸೋಮವಾರಪೇಟೆ ತಾಲೂಕಿನ ಶಾಂತಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಮೃತ ದುರ್ದೈವಿ ಉಲ್ಲಾಸ್ ಚಿಕ್ಕಮಗಳೂರು ಜಿಲ್ಲೆ ಕುಪ್ಪಲ್ ಗ್ರಾಮದ ನಿವಾಸಿ‌.

ಉಲ್ಲಾಸ್, ನಾಲ್ಕು ವರ್ಷಗಳಿಂದ ಕೊಡ್ಲಿಪೇಟೆ ಚೆಸ್ಕಾಂ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ರು. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ.