AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ ರಾಜೇಶ್ವರಿನಗರ ಅಸೆಂಬ್ಲಿ ಕ್ಷೇತ್ರದಲ್ಲಿ BJPಗೆ ಒಳ ಏಟು ಬೀಳುವ ಆತಂಕ

ಬೆಂಗಳೂರು: RR ನಗರ ವಿಧಾನಸಭೆ ಉಪ ಚುನಾವಣೆ ವಿಚಾರವಾಗಿ BJP ಟಿಕೆಟ್ ಪಡೆಯುವ ವಿಚಾರದಲ್ಲಿ ಪಕ್ಷದ ನಾಯಕ ಮುನಿರತ್ನಗೆ ಸ್ವಲ್ಪ ಹಿನ್ನಡೆಯಾಗಿದೆ ಎಂದು ತಿಳಿದುಬಂದಿದೆ. ಟಿಕೆಟ್ ಘೋಷಣೆ ವೇಳೆ ತನ್ನ ಹೆಸರು ಮಾತ್ರ ಇರುತ್ತದೆ. RR ನಗರಕ್ಕೆ ತನ್ನ ಹೆಸರೇ ಫೈನಲ್ ಎಂದು ಮುನಿರತ್ನ ನಂಬಿದ್ರು. ಆದ್ರೆ ಈಗ ಎರಡು ಹೆಸರು ಇರುವ ಕಾರಣ ಮುನಿರತ್ನಗೆ ಟೆನ್ಷನ್ ಶುರುವಾಗಿದೆ. ರಾಜ್ಯ ನಾಯಕರನ್ನು ಟಿಕೆಟ್ ವಿಚಾರದಲ್ಲಿ ಸಂಪೂರ್ಣವಾಗಿ ನಂಬುವಂತಿಲ್ಲ. ಮತ್ತೊಬ್ಬ ಬಿಜೆಪಿ ನಾಯಕ ತುಳಸಿ ಮುನಿರಾಜು ಗೌಡಗೆ ವರಿಷ್ಠರ […]

ರಾಜ ರಾಜೇಶ್ವರಿನಗರ ಅಸೆಂಬ್ಲಿ ಕ್ಷೇತ್ರದಲ್ಲಿ BJPಗೆ ಒಳ ಏಟು ಬೀಳುವ ಆತಂಕ
Follow us
KUSHAL V
|

Updated on: Oct 02, 2020 | 10:41 AM

ಬೆಂಗಳೂರು: RR ನಗರ ವಿಧಾನಸಭೆ ಉಪ ಚುನಾವಣೆ ವಿಚಾರವಾಗಿ BJP ಟಿಕೆಟ್ ಪಡೆಯುವ ವಿಚಾರದಲ್ಲಿ ಪಕ್ಷದ ನಾಯಕ ಮುನಿರತ್ನಗೆ ಸ್ವಲ್ಪ ಹಿನ್ನಡೆಯಾಗಿದೆ ಎಂದು ತಿಳಿದುಬಂದಿದೆ.

ಟಿಕೆಟ್ ಘೋಷಣೆ ವೇಳೆ ತನ್ನ ಹೆಸರು ಮಾತ್ರ ಇರುತ್ತದೆ. RR ನಗರಕ್ಕೆ ತನ್ನ ಹೆಸರೇ ಫೈನಲ್ ಎಂದು ಮುನಿರತ್ನ ನಂಬಿದ್ರು. ಆದ್ರೆ ಈಗ ಎರಡು ಹೆಸರು ಇರುವ ಕಾರಣ ಮುನಿರತ್ನಗೆ ಟೆನ್ಷನ್ ಶುರುವಾಗಿದೆ. ರಾಜ್ಯ ನಾಯಕರನ್ನು ಟಿಕೆಟ್ ವಿಚಾರದಲ್ಲಿ ಸಂಪೂರ್ಣವಾಗಿ ನಂಬುವಂತಿಲ್ಲ. ಮತ್ತೊಬ್ಬ ಬಿಜೆಪಿ ನಾಯಕ ತುಳಸಿ ಮುನಿರಾಜು ಗೌಡಗೆ ವರಿಷ್ಠರ ಬೆಂಬಲ ಇರುವ ಕಾರಣ ನಂಬುವಂತಿಲ್ಲ ಎಂಬುದು ಮುನಿರತ್ನರ ಚಿಂತನೆಯಾಗಿದೆ.

ತುಳಸಿ ಮುನಿರಾಜು ಗೌಡಗೆ BL ಸಂತೋಷ್ ಕೃಪೆ ಕೊನೆಯ ಕ್ಷಣದಲ್ಲಿ ದೆಹಲಿ ಮಟ್ಟದಲ್ಲಿ ಬದಲಾವಣೆ ಆದ್ರೂ ಆಗಬಹುದು. ತುಳಸಿ ಮುನಿರಾಜು ಗೌಡಗೆ ಹಿರಿಯ ಮುಖಂಡ BL ಸಂತೋಷ್ ಅವರ ಸಂಪೂರ್ಣ ಬೆಂಬಲ ಇದೆ. ಹಾಗಾಗಿ, ತುಳಸಿ ಮುನಿರಾಜು ಗೌಡಗೆ ಪರ್ಯಾಯ ವ್ಯವಸ್ಥೆ ಏನು ಎಂದು ನಿರ್ಧಾರ ಆಗಬೇಕಿದೆ. ದೆಹಲಿ ಮಟ್ಟದಲ್ಲಿ ತುಳಸಿ ಮುನಿರಾಜು ಗೌಡಗೆ ಪರ್ಯಾಯ ವ್ಯವಸ್ಥೆ ಆಗಬೇಕಿದೆ. ಇದೇ ಕಾರಣಕ್ಕೆ ಕೋರ್ ಕಮಿಟಿಯಲ್ಲಿ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಆಗಿಲ್ಲ ಎಂದು ತಿಳಿದುಬಂದಿದೆ.

ಸದ್ಯ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಟಿಕೇಟ್ ಯಾರಿಗೆ ಎಂದು ಇನ್ನೂ ನಿರ್ಧಾರ ಆಗಿಲ್ಲ. ಮುನಿರತ್ನ ಒಬ್ಬರ ಹೆಸರನ್ನಷ್ಟೇ ದೆಹಲಿಗೆ ಕಳುಹಿಸಿದ್ರೆ ಸಮಸ್ಯೆ ಎದುರಾಗಬಹುದು. ಒಂದು ವೇಳೆ, ದೆಹಲಿ ಮಟ್ಟದಲ್ಲಿ ಮುನಿರತ್ನ ಹೆಸರು ಒಪ್ಪಿಕೊಳ್ಳದೇ ಇದ್ದಲ್ಲಿ ಕೋರ್ ಕಮಿಟಿಗೆ ಹಿನ್ನಡೆಯಾಗಲಿದೆ.

ರಾಜ್ಯ ಕೋರ್ ಕಮಿಟಿಗೆ ಹಿನ್ನಡೆಯಾಗುವ ಹಿನ್ನಲೆಯಲ್ಲಿ ಎರಡು ಹೆಸರನ್ನು ಶಿಫಾರಸು ಮಾಡಲಾಗಿದೆಯಂತೆ. ಎರಡು ಹೆಸರು ಶಿಫಾರಸು ಮಾಡಿದರೂ ಮುನಿರತ್ನಗೆ ಟಿಕೇಟ್ ಕೊಡಿಸುವ ವಿಶ್ವಾಸವನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೀಡಿದ್ದಾರಂತೆ.

ಹೀಗಾಗಿ, ಘೋಷಣೆ ಆಗುವವರೆಗೂ ಅಭ್ಯರ್ಥಿ ಯಾರು ಎಂದು ನಿರ್ಧರಿಸಲು ಸಾದ್ಯವಿಲ್ಲ. ಒಂದು ವೇಳೆ ತುಳಸಿ ಮುನಿರಾಜು ಗೌಡಗೆ ಪರ್ಯಾಯ ವ್ಯವಸ್ಥೆ ಆಗದೇ ಇದ್ದಲ್ಲಿ ಸಮಸ್ಯೆ ಎದುರಾಗಬಹುದು. ಇದರಿಂದ, ರಾಜರಾಜೇಶ್ವರಿ ಕ್ಷೇತ್ರದಲ್ಲಿ ಬಿಜೆಪಿಗೆ ಒಳ ಏಟು ಬೀಳುವ ಆತಂಕವೂ ಇದೆ. ಹೀಗಾಗಿ, ದೆಹಲಿಗೆ ಎರಡು ಹೆಸರು ಕಳುಹಿಸಿ ಸಮಸ್ಯೆ ಬಗೆಹರಿಸಲು ಬಿಜೆಪಿ ಪ್ರಯತ್ನ ನಡೆಸಿದೆ ಎಂಬ ಮಾಹಿತಿ ಸಿಕ್ಕಿದೆ.

ಹುಟ್ಟುಹಬ್ಬದ ದಿನವೇ ಕಣ್ಣೀರು ಹಾಕಿದ ನಟಿ ರಾಗಿಣಿ: ಕಾರಣ?
ಹುಟ್ಟುಹಬ್ಬದ ದಿನವೇ ಕಣ್ಣೀರು ಹಾಕಿದ ನಟಿ ರಾಗಿಣಿ: ಕಾರಣ?
ತಮನ್ನಾ ವಿವಾದದಲ್ಲಿ ಯಶ್ ಹೆಸರು ಹೇಳಿದ ನಟಿ ಕಾರುಣ್ಯ ರಾಮ್
ತಮನ್ನಾ ವಿವಾದದಲ್ಲಿ ಯಶ್ ಹೆಸರು ಹೇಳಿದ ನಟಿ ಕಾರುಣ್ಯ ರಾಮ್
ಇ-ಖಾತಾ ಬಗ್ಗೆ ಮಹತ್ವದ ಮಾಹಿತಿ ನೀಡಿದ ಡಿಕೆ ಶಿವಕುಮಾರ್
ಇ-ಖಾತಾ ಬಗ್ಗೆ ಮಹತ್ವದ ಮಾಹಿತಿ ನೀಡಿದ ಡಿಕೆ ಶಿವಕುಮಾರ್
ಬೆಂಗಳೂರಿನಲ್ಲಿ ಫುಟ್ ಪಾತ್ ಅಂಗಡಿ ತೆರವುಗೊಳಿಸಲು ನಿರ್ಧಾರ: ಡಿಕೆಶಿ
ಬೆಂಗಳೂರಿನಲ್ಲಿ ಫುಟ್ ಪಾತ್ ಅಂಗಡಿ ತೆರವುಗೊಳಿಸಲು ನಿರ್ಧಾರ: ಡಿಕೆಶಿ
​ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ
​ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ
ಝಾನ್ಸಿಯಲ್ಲಿ ಬಿರುಗಾಳಿಯ ಹೊಡೆತಕ್ಕೆ 70ಕ್ಕೂ ಹೆಚ್ಚು ಗಿಳಿಗಳು ಬಲಿ
ಝಾನ್ಸಿಯಲ್ಲಿ ಬಿರುಗಾಳಿಯ ಹೊಡೆತಕ್ಕೆ 70ಕ್ಕೂ ಹೆಚ್ಚು ಗಿಳಿಗಳು ಬಲಿ
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ