ಬಳ್ಳಾರಿ: ಕೊರೊನಾ ಅಟ್ಟಹಾಸಕ್ಕೆ ಜಿಂದಾಲ್ ಕಂಪನಿಯಲ್ಲಿ ಮೊದಲ ಬಲಿಯಾಗಿದೆ. ಕೊವಿಡ್ ದೃಢವಾದ ಮೇಲೆ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಮೊನ್ನೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಜಿಂದಾಲ್ ಕಂಪನಿಯ ಉದ್ಯೋಗಿ ಸಾವನ್ನಪ್ಪಿದ್ರೂ ಆಡಳಿತ ಮಂಡಳಿ ಮಾತ್ರ ಈ ಬಗ್ಗೆ ಇದುವರೆಗೆ ಬಹಿರಂಗ ಪಡಿಸಿರಲಿಲ್ಲ. ಕೊರೊನಾ ಸೋಂಕಿತ ವ್ಯಕ್ತಿ ಜೂನ್ 2 ರಂದು ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಯ ಫಿವರ್ ಕ್ಲಿನಿಕ್ಗೆ ತೆರಳಿದ್ದ. ಈ ವೇಳೆ ಜ್ವರ, ಗಂಟಲು ನೋವು ಕಾಣಿಸಿಕೊಂಡಿದ್ದರಿಂದ ಕೋವಿಡ್ ಟೆಸ್ಟ್ ಮಾಡಲಾಗಿತ್ತು. ಕೊರೊನಾ ಪಾಸಿಟಿವ್ ಬಂದ ಬಳಿಕ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೊನ್ನೆ ಜಿಂದಾಲ್ ಉದ್ಯೋಗಿ ಸಾವನ್ನಪ್ಪಿದ್ರು. ಉದ್ಯೋಗಿ ಸಾವಿನ ಬಗ್ಗೆ ವೈದ್ಯೆ ಫ್ಯಾಮಿಲಿಗೆ ವಿವರಿಸಿರುವ ಆಡಿಯೋ ವೈರಲ್ ಆಗಿದೆ. ಅಲ್ಲದೆ ಶಾಕಿಂಗ್ ಅಂದ್ರೆ ಬೆಂಗಳೂರಿನಲ್ಲಿ ಜಿಂದಾಲ್ ಉದ್ಯೋಗಿ ಸಾವಿನ ಬಗ್ಗೆ ಜಿಲ್ಲಾಡಳಿತಕ್ಕೂ ಮಾಹಿತಿ ಸಿಕ್ಕಿಲ್ಲ.
Published On - 8:21 am, Mon, 15 June 20