ಜೈಲಿನಲ್ಲಿ ಸೊಳ್ಳೆ ಕಾಟ ತಾಳಲಾರದೆ ಒದ್ದಾಡಿದ ಮಾಜಿ ಮಿನಿಸ್ಟರ್, ರಾತ್ರಿ ಇಡೀ ನಿದ್ದೆ ಇಲ್ಲವಂತೆ

ಧಾರವಾಡ: ಜಿ.ಪಂ. ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣ ಸಂಬಂಧ ಮಾಜಿ ಸಚಿವ ವಿನಯ್ ಕುಲಕರ್ಣಿ ಜೈಲು ಸೇರಿದ್ದಾರೆ. ಸಾಮಾನ್ಯ ಕೈದಿಯಂತೆ ಬೆಳಗಾವಿಯ ಹಿಂಡಲಗಾ ಜೈಲಿನ ಕ್ವಾರಂಟೈನ್ ಸೆಲ್​ನಲ್ಲಿ ಒಂದು ರಾತ್ರಿ ಕಳೆದಿದ್ದಾರೆ. ರಾತ್ರಿ ಪೂರ್ತಿ ನಿದ್ದೆ ಮಾಡದ ವಿನಯ್ ಕುಲಕರ್ಣಿ: ವಿನಯ್ ಸೆಲ್​ನಲ್ಲಿ ಟಿವಿ ಸೇರಿದಂತೆ ಯಾವುದೇ ವ್ಯವಸ್ಥೆ ಇಲ್ಲ. ಸೊಳ್ಳೆ ಕಾಟ ತಾಳಲಾರದೆ ಒದ್ದಾಡಿ ರಾತ್ರಿಯಿಡೀ ನಿದ್ದೆ ಮಾಡದೆ ಸೆಲ್​ನಲ್ಲಿಯೇ ಅತ್ತಿಂದಿತ್ತ ಓಡಾಡುತ್ತ ಬೆಳಗಿನ ಜಾವ ನಿದ್ದೆಗೆ ಜಾರಿದ್ರು. ಊಟವಿಲ್ಲದೆ ರಾತ್ರಿ ಕಳೆದಿದ್ದಾರೆ. ವಿನಯ್ […]

ಜೈಲಿನಲ್ಲಿ ಸೊಳ್ಳೆ ಕಾಟ ತಾಳಲಾರದೆ ಒದ್ದಾಡಿದ ಮಾಜಿ ಮಿನಿಸ್ಟರ್, ರಾತ್ರಿ ಇಡೀ ನಿದ್ದೆ ಇಲ್ಲವಂತೆ
ಆಯೇಷಾ ಬಾನು Edited By:

Updated on: Nov 30, 2020 | 5:25 PM

ಧಾರವಾಡ: ಜಿ.ಪಂ. ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣ ಸಂಬಂಧ ಮಾಜಿ ಸಚಿವ ವಿನಯ್ ಕುಲಕರ್ಣಿ ಜೈಲು ಸೇರಿದ್ದಾರೆ. ಸಾಮಾನ್ಯ ಕೈದಿಯಂತೆ ಬೆಳಗಾವಿಯ ಹಿಂಡಲಗಾ ಜೈಲಿನ ಕ್ವಾರಂಟೈನ್ ಸೆಲ್​ನಲ್ಲಿ ಒಂದು ರಾತ್ರಿ ಕಳೆದಿದ್ದಾರೆ.

ರಾತ್ರಿ ಪೂರ್ತಿ ನಿದ್ದೆ ಮಾಡದ ವಿನಯ್ ಕುಲಕರ್ಣಿ:
ವಿನಯ್ ಸೆಲ್​ನಲ್ಲಿ ಟಿವಿ ಸೇರಿದಂತೆ ಯಾವುದೇ ವ್ಯವಸ್ಥೆ ಇಲ್ಲ. ಸೊಳ್ಳೆ ಕಾಟ ತಾಳಲಾರದೆ ಒದ್ದಾಡಿ ರಾತ್ರಿಯಿಡೀ ನಿದ್ದೆ ಮಾಡದೆ ಸೆಲ್​ನಲ್ಲಿಯೇ ಅತ್ತಿಂದಿತ್ತ ಓಡಾಡುತ್ತ ಬೆಳಗಿನ ಜಾವ ನಿದ್ದೆಗೆ ಜಾರಿದ್ರು. ಊಟವಿಲ್ಲದೆ ರಾತ್ರಿ ಕಳೆದಿದ್ದಾರೆ. ವಿನಯ್ ಕುಲಕರ್ಣಿ ವಿಚಾರಣಾಧೀನ ಕೈದಿ ನಂಬರ್ 16635.

ಮಾಜಿ ಸಚಿವರಿಗೆ ಉಪ್ಪಿಟ್ಟೇ ಉಪಾಹಾರ:
ಹಿಂಡಲಗಾ ಜೈಲಲ್ಲಿ ಮಾಜಿ ಸಚಿವರಿಗೆ ಉಪ್ಪಿಟ್ಟನ್ನು ಉಪಾಹಾರಕ್ಕೆ ನೀಡಲಾಯಿತು. ಬೆಳಗ್ಗೆ 7.30ಕ್ಕೆ ಉಪಾಹಾರಕ್ಕೆ ಉಪ್ಪಿಟ್ಟು ಹಾಗೂ ಚಹಾ ವ್ಯವಸ್ಥೆ ಮಾಡಲಾಗಿದೆ. ಸಾಮಾನ್ಯ ಕೈದಿಗಳಿಗೆ ಕೊಡುವ ಉಪಾಹಾರವನ್ನೇ ಸಿಬ್ಬಂದಿ ಮಾಜಿ ಸಚಿವ ವಿನಯ್ ಕುಲಕರ್ಣಿಗೂ ಕೊಟ್ಟಿದ್ದಾರೆ.

ಇಂದು ವಿಡಿಯೋ ಕಾನ್ಫರೆನ್ಸ್​ ಮೂಲಕ ಬೆಳಗ್ಗೆ 11.30ಕ್ಕೆ ವಿನಯ್​ ಕುಲಕರ್ಣಿ ವಿಚಾರಣೆ ನಡೆಯುತ್ತೆ. ಧಾರವಾಡ 2ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪಂಚಾಕ್ಷರಿ ಮುಂದೆ ಹಾಜರು ಪಡಿಸಲಾಗುತ್ತೆ. ಸಿಬಿಐ ಪರ ವಕೀಲರು 3 ದಿನ ವಶಕ್ಕೆ ನೀಡುವಂತೆ ಕೋರಿದ್ದರು. ಆದರೆ ಸಿಬಿಐ ಕೋರಿಕೆ ಮನ್ನಿಸದೆ 1 ದಿನ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಲಾಗಿದ್ದು ಇಂದು ಬೆಳಗ್ಗೆ ಹಾಜರು ಪಡಿಸಬೇಕೆಂದು ನ್ಯಾಯಾಧೀಶರು ತಿಳಿಸಿದ್ದರು. ಅದರಂತೆ ಇಂದು ವಿಚಾರಣೆ ನಡೆಯುತ್ತೆ.

Published On - 8:42 am, Fri, 6 November 20

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us