
ವಿಜಯಪುರ: ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಮುಳಸಾವಳಗಿ ಗ್ರಾಮದ ಬಳಿ ಯುವ ರೈತನೊಬ್ಬ ಹಳ್ಳದಲ್ಲಿ ಕೊಚ್ಚಿಹೋಗಿದ್ದಾನೆ. ಶಿವಪುತ್ರ ನಾಟೀಕಾರ ಹಳ್ಳದಲ್ಲಿ ಕೊಚ್ಚಿಹೋದ ರೈತ.
ರೈತ ಶಿವಪುತ್ರ ಜಮೀನಿಗೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಸ್ಥಳಕ್ಕೆ ದೇವರಹಿಪ್ಪರಗಿ ತಹಶೀಲ್ದಾರ್ ಸಂಜೀವ ಕುಮಾರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಹಳ್ಳದಲ್ಲಿ ಕೊಚ್ಚಿ ಹೋದ ರೈತ ಶಿವಪುತ್ರನಿಗಾಗಿ ಶೋಧ ನಡೆದಿದೆ.